ಬೆಂಗಳೂರು: ಇತ್ತೀಚೆಗಷ್ಟೇ ಚಾಲಕ ರಹಿತ ಕಾರೊಂದು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಿ ಜನರನ್ನು ಅಚ್ಚರಿಗೊಳಿಸಿತ್ತು. ಹಾಲಿವುಡ್ ಸಿನಿಮಾದಲ್ಲಿ ಕಾಣಿಸುವ ವಾಹನದಂತೆ ಕಾಣುವ ಕಾರಿನ ವಿಡಿಯೋವನ್ನು ಸೋಶಿಯಲ್​​​ ಮೀಡಿಯಾ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಧಾರಾಕಾರ ಮಳೆ ನಡುವೆಯೇ ಕಾಣಿಸಿಕೊಂಡ ಹೆರಿಗೆ ನೋವು! JCB ಸಹಾಯದಿಂದ ಹೊಳೆ ದಾಟಿಸಿದ ಸ್ಥಳೀಯರು
ಡ್ರೈವರ್ ಲೆಸ್ ಕಾರ್ ನೋಡಿದ್ದೀರಾ? ಬೆಂಗಳೂರು ನಗರದ ರಸ್ತೆಗಳಲ್ಲಿ ಚಾಲಕ ರಹಿತ ಕಾರೊಂದು ಓಡಾಡಿದೆ. ಈ ಕಾರಿನ ವಿಡಿಯೋ ವೈರಲ್ ಆಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ರಸ್ತೆಗಳಲ್ಲಿ ಚಾಲಕರಿಲ್ಲದ ಕಾರು ಸಂಚರಿಸುತ್ತಿದೆ. ಇದನ್ನು ನೋಡಲು ಸ್ಥಳೀಯರು ಮುಗಿಬಿದ್ದರು.
On the streets of Bengaluru. ⁦@peakbengaluru⁩pic.twitter.com/VtahXpa6Mh
— anirudh ravishankar (@anrdh89)July 22, 2023

ಟ್ವಿಟ್ಟರ್ ಬಳಕೆದಾರರಾದ ಅನಿರುದ್ಧ್ ರವಿಶಂಕರ್ ಎಂಬ ವ್ಯಕ್ತಿ, ಚಾಲಕರಹಿತ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನೆಟಿಜನ್‌ಗಳು ಸಾಕಷ್ಟು ರಿಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:VIDEO| ನಾಲ್ಕು ಲಕ್ಷ ರೂ. ಬೆಲೆಯ ಮಗನ ಶೂ ನೋಡಿ ಕೈ ಮುಗಿದ ತಂದೆ!
zPod ಎಂಬುದು ಸ್ವಯಂ ಚಾಲಿತ ಕಾರ್ ಆಗಿದ್ದು, ಇದನ್ನು ಸ್ಟಾರ್ಟ್‌ಅಪ್ ಕಂಪನಿ ಆಗಿರುವ ಮೈನಸ್ ಝೀರೋ, ಬೆಂಗಳೂರಿನಲ್ಲಿರುವ ಉತ್ಪಾದಿಸುತ್ತಿದೆ. ಪ್ರಸ್ತುತ, ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಎನ್ನಲಾಗಿದೆ.
ಇದನ್ನೂ ಓದಿ:ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!
ಕಂಪನಿಯು ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮೈನಸ್ ಝೀರೋ ಪುಟದಲ್ಲಿ, ಕಂಪನಿ ಮೈನಸ್ ಝೀರೋ zPod ವಾಹನವು ಎಲ್ಲಾ ವಾಹನಗಳಂತೆ ಸ್ಟೀರಿಂಗ್ ಚಕ್ರವನ್ನು ಹೊಂದಿಲ್ಲ. ಬದಲಾಗಿ, ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ ಡ್ರೈವಿಂಗ್ ಪರಿಸ್ಥಿತಿಗಳು ಮತ್ತು ಟ್ರಾಫಿಕ್ ಅನ್ನು ಕಂಟ್ರೋಲ್​​ ಮಾಡಲು ಬಳಸಲಾಗುತ್ತದೆ, ಇದು ರಸ್ತೆಗಳಲ್ಲಿ ನ್ಯಾವಿಗೇಟ್ ಮಾಡಲು ಸುಲಭವಾಗುತ್ತದೆ. ಸಂಪೂರ್ಣವಾಗಿ ಕ್ಯಾಮೆರಾ-ಸೆನ್ಸಾರ್ ಹೊಂದಿದೆ ಎನ್ನಲಾಗಿದೆ.
A post shared by Minus Zero (@minuszero)
ಇದನ್ನೂ ಓದಿ:ನಟಿ ಸಮಂತಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೋತಿ; ಈ ಫೋಟೋ ನೋಡಿದ್ರಾ..?
ಈ ಬುದ್ಧಿವಂತ ತಂತ್ರಜ್ಞಾನವು ದೃಶ್ಯ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ, ಅಡಚಣೆ ತಪ್ಪಿಸುವುದರ ಜತೆಗೆ ವೇಗ ನಿಯಂತ್ರಣ ಮತ್ತು ನಿಖರವಾದ ನಿಲುಗಡೆಗೆ ಅನುವು ಮಾಡಿಕೊಡುತ್ತದೆ. zPod ಸ್ವಯಂ-ಚಾಲನಾ ಸಾಮರ್ಥ್ಯ ಹೊಂದಿದೆ. ಇದು ಮಾನವ ಹಸ್ತಕ್ಷೇಪದ ಅಗತ್ಯವಿಲ್ಲದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಯಾರಕರು ಹೇಳಿದ್ದಾರೆ.
ಸ್ಟಾರ್‌ ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟ್‌ಗಳು ಕಾನೂನುಬದ್ಧವಾಗಿವೆ: ಆರ್​ಬಿಐ

Sign in to your account
Please enter an answer in digits:seventeen − eight =
Remember me
