ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ಆಯಾ-ಸೂಪರ್​ವೈಸರ್ ಟಪ್ಪಾಂಗುಚ್ಚಿ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಕರೋನಾ ವೈರಸ್ ಸೋಂಕು ಹರಡಿರುವ ಸಂದರ್ಭದಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುವವರು ಅನೇಕರು. ಅಂಥ ಪ್ರಯತ್ನ ಇದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಪತ್ನಿಯನ್ನು ಬ್ಲ್ಯಾಕ್​ಮೇಲ್ ಮಾಡುವ ಸಲುವಾಗಿ ಪತಿಯೇ ಆಕೆಯ ಹಳೆಯ ವಿಡಿಯೋವನ್ನು ವೈರಲ್ ಮಾಡಿದ್ದಾನೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಬಸಣ್ಣಿ ನಾಚ್​ ಹಾಡಿಗೆ ಸ್ಟೆಪ್​ ಹಾಕಿರುವ ಆಯಾ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ವಿಡಿಯೋ ಹಳೆಯದು. ನನ್ನನ್ನು ಬ್ಲ್ಯಾಕ್​ಮೇಲ್ ಮಾಡುವ ಉದ್ದೇಶದಿಂದ ಪತಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೌಟುಂಬಿಕ ಕಲಹ ಇದೀಗ ಪತಿಯಿಂದಾಗಿ ಬೀದಿಗೆ ಬಂದಿದೆ. ಮಗುವಿನ ವಿಚಾರದಲ್ಲಿ ನಮ್ಮ ನಡುವೆ ಮನಸ್ತಾಪ ಇದೆ. ನನ್ನ ಮೊಬೈಲ್​ನಲ್ಲಿದ್ದ ವಿಡಿಯೋ ಇದು. ಇದನ್ನು ಕದ್ದು ಫಾರ್ವರ್ಡ್ ಮಾಡಿಕೊಂಡಿರುವ ಪತಿ, ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಆಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
VIDEO: ಬಸಣ್ಣಿ… ಹಾಡಿಗೆ ಕಿಮ್ಸ್ ಆಸ್ಪತ್ರೆಯ ಆಯಾ- ಸೂಪರ್​ವೈಸರ್ ಟಪ್ಪಾಂಗುಚ್ಚಿ!

https://www.instagram.com/p/B9yPMjTHlrU/?utm_source=ig_web_copy_link
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − seven =
Remember me
