ಉಡುಪಿ: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕಳೆದ ಎರಡು ದಿನಗಳಿಂದ ಗಲ್ಫ್ ರಾಷ್ಟ್ರಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ.ಇತ್ತೀಚೆಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಉಡುಪಿ ಲಾಕ್‌ಡೌನ್ ಸಡಿಲಿಕೆ ಸಮಯದ ಬಗ್ಗೆ ಕೇಳಿದಾಗ ಶೋಭಾ ಅವರು ‘ಅದು ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದ್ದರು. ಆ ಕಾಲ್ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೀಗೆ ಅಪರಿಚಿತರಿಂದೆಲ್ಲ ಫೋನ್ ಕರೆಗಳು ಬರುತ್ತಿವೆ. ಕೆಲವರು ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ಶೋಭಾ ಅವರೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ‘‘ಇದಲ್ಲದೆ ನನಗೆ ಮೂರು ವರ್ಷಗಳಿಂದ ಜಿಹಾದಿಗಳಿಂದಲೂ ಬೆದರಿಕೆ ಕರೆಗಳು ಹಾಗೂ ಅಶ್ಲೀಲ ಕರೆಗಳು ಬರುತ್ತಿವೆ. ಇಂಟರ್ನೆಟ್ ಕರೆ ಆಗಿರುವುದರಿಂದ ಅದು ಎಲ್ಲಿಂದ ಬಂತು, ಯಾರು ಕರೆ ಮಾಡಿದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ’’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!
ಕಾರಣ ಏನಿರಬಹುದು?: ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಕೇರಳದ ಹಿಂದು ಯುವಕನಿಗೆ ಕುವೈತ್‌ನಲ್ಲಿ ಕಪಾಳಮೋಕ್ಷ ಮಾಡಿದ ದುಷ್ಕರ್ಮಿಗಳ ವಿರುದ್ಧ ಗೃಹ ಸಚಿವ ಅಮಿತ್ ಷಾ ಅವರಿಗೆ ಶೋಭಾ ಅವರು ಇತ್ತೀಚೆಗೆ ಪತ್ರ ಬರೆದಿದ್ದರು. ಇದೇ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಗಲ್ಫ್ ರಾಷ್ಟ್ರಗಳಿಂದ ನಿರಂತರ ಬೆದರಿಕೆ ಕರೆ ಬರುತ್ತಿರಬಹುದು ಎಂದು ಸಂಸದೆ ಹೇಳಿದ್ದಾರೆ.
‘‘ನಾನು ಲಾಕ್‌ಡೌನ್ ಸಮಯದಲ್ಲಿ ಸುಮ್ಮನೆ ಕೂತಿಲ್ಲ. ವಿಶ್ರಾಂತಿ ಇಲ್ಲದೆ ನಿತ್ಯವೂ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ದವಸ ಧಾನ್ಯಗಳ ವ್ಯವಸ್ಥೆ ಮಾಡುತ್ತಿದ್ದೇನೆ. ಆದರೂ ಕೆಲವರು ಕರೆ ಮಾಡಿ ಇಂಥದ್ದರ ಬಗ್ಗೆ ವಿವರಗಳು ಸುಖಾಸುಮ್ಮನೆ ಕೇಳುತ್ತಿದ್ದಾರೆ’’ ಎಂದು ವಿವರಿಸಿದ್ದಾರೆ.‘‘ಅವರ ಕರೆಯ ಉದ್ದೇಶವೇನು? ಅದರ ಹಿನ್ನೆಲೆ ಏನು ಎಂದು ಗೊತ್ತಿಲ್ಲ. ಮತದಾರರಿಗೆ ಅಗೌರವ ತೋರುವ ಕೆಲಸವನ್ನು ನಾನು ಮಾಡಿಲ್ಲ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು’’ ಎಂದು ಸ್ಪಷ್ಟಪಡಿಸಿದ್ದಾರೆ.
https://www.facebook.com/VVani4U/videos/2890601584371803/
7 ಲಕ್ಷ ಕೋಟಿ ರೂಪಾಯಿ ಕೇವಲ ಎರಡೇ ದಿನದಲ್ಲಿ ಕೈ ಬಿಟ್ಟು ಹೋಯಿತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
