ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಮೊಂಡುವರ್ತನೆ ಬಿಟ್ಟು ನಮ್ಮ ಜೀವ ನಾವೇ ಕಾಪಾಡಿಕೊಳ್ಳಬೇಕು. ಯಾಕೆ ಎಂಬುದನ್ನು ಇಂದಿನ ಗುರುವಾಣಿಯಲ್ಲಿ ವಿವರಿಸಿದ್ದಾರೆ ಅವರು.
ಇದು ಕರೊನಾ ಸಂಕಷ್ಟ ಕಾಲ. ಸಾಂಕ್ರಾಮಿಕ ರೋಗ ಹರಡವುದನ್ನು ತಡೆಯಲು ಲಾಕ್​ಡೌನ್ ಚಾಲ್ತಿಯಲ್ಲಿದೆ. ನಾವು ಪಾಲಿಸಬೇಕಾದ ನಿಯಮಗಳ ಕುರಿತ ಮಾರ್ಗಸೂಚಿಯನ್ನೂ ಸರ್ಕಾರ ಪ್ರಕಟಿಸಿದೆ. ನಾಡಿನ ಶೇಕಡ 99 ಜನ ಇದನ್ನು ಪಾಲಿಸುತ್ತಿದ್ದಾರೆ. ಇನ್ನು ಕೆಲವರು ನನಗೇನೂ ಆಗಲ್ಲ. ಸದ್ಯ ನನಗೇನೂ ಅಂತಹ ಗುಣಲಕ್ಷಣಗಳಿಲ್ಲ. ನಾನೇಕೆ ಮನೆಯಲ್ಲಿ ಇರಬೇಕು ಎಂದು ಪ್ರಶ್ನಿಸುತ್ತ ಬೀದಿಗೆ ಇಳಿದು ಎಲ್ಲರ ಜತೆಗೂ ಖ್ಯಾತೆ ತೆಗೆಯುತ್ತಿರುತ್ತಾರೆ. ಇಂತಹ ವ್ಯಕ್ತಿಗಳ ಕುರಿತ ಸುದ್ದಿಗಳನ್ನು ನಿತ್ಯವೂ ನಾವು ನೋಡುತ್ತಿದ್ದೇವೆ.
ಇಂತಹ ವರ್ತನೆಯನ್ನು ಮೊಂಡುವರ್ತನೆ ಎನ್ನುತ್ತಾರೆ. ಇದು ಸರಿಯಲ್ಲ. ಕರೊನಾ ಸಂಕಷ್ಟ ಕಾಲದಲ್ಲಿ ಮೊಂಡುತನ ಪ್ರದರ್ಶಿಸಬಾರದು. ಸರ್ಕಾರ ನಮ್ಮ ಒಳಿತಿಗಾಗಿಯೇ ನಿಯಮಗಳನ್ನು ಜಾರಿಗೊಳಿಸಿರುವಂಥದ್ದು. ಅದನ್ನು ಗೌರವಿಸಬೇಕು. ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ನಮ್ಮ ಮನೆಯವರ ಜೀವವನ್ನೂ ನಾವೇ ಕಾಪಾಡಬೇಕು. ಸ್ವಯಂ ನಿಯಂತ್ರಣ ನಮಗೆ ಇರಬೇಕು ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ ಸ್ವಾಮೀಜಿ. ಅವರ ಪ್ರವಚನದ ಪೂರ್ಣಪಾಠಕ್ಕೆ ಕೆಳಗಿನ ವಿಡಿಯೋ ಲಿಂಕ್​ಗಳಲ್ಲಿ ವೀಕ್ಷಿಸಬಹುದು.
https://www.facebook.com/VVani4U/videos/2700740586718480/
VIDEO| ಕರೊನಾದಿಂದ ಮನೆಯಲ್ಲೇ ಲಾಕ್​ ಆಗಿದ್ದೇವೆಂಬ ಬೇಸರ ಕಾಡದಿರಲು ಗುರುಗಳು ಹೇಳಿದ ಹಾಗೆ ಮಾಡಿ: ಇದು ಶ್ರೀಗುರುವಾಣಿ

https://www.instagram.com/tv/B_ehfd_HqeF/?utm_source=ig_web_copy_link
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × 4 =
Remember me
