ಬೆಂಗಳೂರು: ಕರೋನಾ ವೈರಸ್ ಸೋಂಕಿನ ಕಾರಣ ಮುಂಜಾಗ್ರತಾ ಕ್ರಮವಾಗಿ ಶಿಕ್ಷಣ ಇಲಾಖೆ ಎರಡು ದಿನಗಳ ಕೆಳಗೆ ಆರಂಭದಲ್ಲಿ ಎಲ್​ಕೆಜಿ, ಯುಕೆಜಿ ಮಕ್ಕಳಿಗೆ ರಜೆ ಘೋಷಿಸಿತ್ತು. ಮಾರನೇ ದಿನ ಆರಂಭದಲ್ಲಿ ಪರೀಕ್ಷೆಗಳನ್ನು ಮುಂಚಿತವಾಗಿ ನಡೆಸುವಂತೆ ಸುತ್ತೋಲೆ ಹೊರಡಿಸಿತ್ತು. ಇದರ ಬೆನ್ನಿಗೇ, ಬೆಂಗಳೂರಿನಲ್ಲಿ ಕರೋನಾ ವೈರಸ್ ಸೋಂಕು ದೃಢವಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡುವಂತೆ ಮಾರ್ಚ್ 9ರಂದು ಆದೇಶ ಹೊರಡಿಸಿತ್ತು.
ಆದೇಶ ಸ್ಪಷ್ಟವಾಗಿದ್ದರೂ ಬೆಂಗಳೂರು ನಗರದ ಅನೇಕ ಶಾಲೆಗಳು ಗೊಂದಲ ಮಾಡಿಕೊಂಡು ಪರೀಕ್ಷೆಗಳನ್ನು ಮುಂಚಿತವಾಗಿ ನಡೆಸಲು ಸಮಯ ಸಾರಿಣಿ ಸಿದ್ಧಪಡಿಸಿದ್ದವು. ಇನ್ನು ಕೆಲವು ಶಾಲೆಗಳು ಬೇಸಿಗೆ ರಜೆಯನ್ನು ಘೋಷಿಸಿ ಬಿಟ್ಟಿವೆ. ಈ ನಡುವೆ ಪಾಲಕರು, ಶಿಕ್ಷಕರು ತಮ್ಮ ತಮ್ಮ ಅಸಹಾಯಕತೆಗಳನ್ನು, ಆಕ್ರೋಶಗಳನ್ನು ಸ್ನೇಹಿತರ ವಲಯದಲ್ಲಿ ಹೊರಹಾಕುತ್ತಿದ್ದಾರೆ. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಈ ವರೆಗಿನ ಅವರ ಸಾಧನೆ ಆಧರಿಸಿ ಗ್ರೇಡ್ ಕೊಡುತ್ತೇವೆ ಎಂದು ಕೆಲವು ಶಾಲೆಗಳವು ಘೋಷಿಸಿದ್ದು, ಈಗ ಸರ್ಕಾರದ ಆದೇಶ ಪ್ರಕಾರ ಪರೀಕ್ಷೆ ನಡೆಸುತ್ತಾರೋ ಇಲ್ಲೋ ಎಂಬುದೇ ಗೊತ್ತಾಗುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು.
ಈಗ ಇದಕ್ಕೆಲ್ಲ ಉತ್ತರ ಎಂಬಂತೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್​ ಮತ್ತೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ಗೊಂದಲಗಳನ್ನೂ ಬಗೆಹರಿಸಿದ್ದಾರೆ. ಸ್ಟೇಟ್ ಸಿಲೆಬಸ್‍ನ ಒಂದನೇ ತರಗತಿ ಶಾಲೆಗಳಿಗೆ ಬೇಸಿಗೆ ರಜೆ ಶುರು. ಉಳಿದ ಸಿಲೆಬಸ್‍ನ ಶಾಲೆಗಳವರು ರಜೆ ಕೊಡಬೇಕಾಗಿದ್ದು, ಪರಿಸ್ಥಿತಿ ತಿಳಿಯಾದ ನಂತರದಲ್ಲಿ ಬೇಕಾದರೆ ಪರೀಕ್ಷೆಗಳನ್ನು ನಡೆಸಬಹುದು ಅಥವಾ ಸ್ಟೇಟ್‍ ಸಿಲೆಬಸ್‍ನವರಿಗೆ ನೀಡಿದ ಪರಿಹಾರವನ್ನೇ ಅವರೂ ಅನುಸರಿಸಬಹುದು ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯ ಪೂರ್ಣ ವಿವರಗಳಿಗೆ ಕೆಳಗಿರುವ ಸಚಿವರ ಸುದ್ದಿಗೋಷ್ಠಿಯ ವಿಡಿಯೋ ನೋಡಿ..


ಕರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭ


1- 6ನೇ ತರಗತಿ ಮಕ್ಕಳಿಗೆ ಮುಂದಿನ ವರ್ಗಕ್ಕೆ ಬಡ್ತಿ ನೀಡಿ ಆದೇಶ ಹೊರಡಿಸಿದ ಸರ್ಕಾರ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
