ಮಂಗಳೂರು:ಮೈಯಲ್ಲಿ ನಡುಕು ಹುಟ್ಟಿಸುವಂತಹ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾಲಕ ಸಾವು -ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾನೆ. ರಸ್ತೆ ದಾಟಲು ಅವಸರಪಟ್ಟು ಪಾಲಕರ ಕೈ ತಪ್ಪಿಸಿಕೊಂಡು ಓಡಿ ಹೋದ ಕಾರಣ ಅಪಘಾತ ಸಂಭವಿಸಿದೆ.
ಉಳ್ಳಾಲದಲ್ಲಿ ಈ ದುರಂತ ನಿನ್ನೆ ಮುಸ್ಸಂಜೆ 6.30 ಸುಮಾರಿಗೆ ಸಂಭವಿಸಿತ್ತು. ಗಂಭೀರ ಗಾಯಗೊಂಡ ಬಾಲಕನನ್ನು ಕೃಷ್ಣ (8) ಎಂದು ಗುರುತಿಸಲಾಗಿದೆ. ಕೂಡಲೇ ಆತನನ್ನು ದೇರಳೆಕಟ್ಟೆ ಯೇನಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮನೆ ಎದುರು ರಸ್ತೆ ಬದಿಗೆ ಪಾರ್ಕಿಂಗ್ ಮಾಡೋ ಹಾಗಿಲ್ವಾ.. : ಬಿಡಿಎ ಸಭೆಯಲ್ಲಿ ಏನಾಯ್ತು ತೀರ್ಮಾನ?
ಪಾಲಕರಿಗೆ ಎಚ್ಚರಿಕೆ ಘಂಟೆಯಂತಿರುವ ಈ ಅಪಘಾತ, ರಸ್ತೆ ದಾಟುವ ಸಂದರ್ಭದಲ್ಲಿ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಬೇಕೆಂಬ ಸಂದೇಶ ನೀಡುವಂತಿದೆ. ಸಿಸಿಟಿವಿ ದೃಶ್ಯ ವೀಕ್ಷಣೆಗೆ ಇಲ್ಲಿಕ್ಲಿಕ್ಕಿಸಿ. (ದಿಗ್ವಿಜಯ ನ್ಯೂಸ್)
ಮನೆ ಎದುರು ರಸ್ತೆ ಬದಿಗೆ ಪಾರ್ಕಿಂಗ್ ಮಾಡೋ ಹಾಗಿಲ್ವಾ.. : ಬಿಡಿಎ ಸಭೆಯಲ್ಲಿ ಏನಾಯ್ತು ತೀರ್ಮಾನ?

Sign in to your account
Please enter an answer in digits:eleven + six =
Remember me
