ಹಾಸನ: ನಗರದ ಉತ್ತರ ಬಡಾವಣೆಯ ಸ್ಕಾಲರ್ಸ್ ಶಾಲೆ ಹಿಂಭಾಗದ ರಸ್ತೆಯಲ್ಲಿ ಮಾರಾಟ ಮಾಡುವ ಹಣ್ಣುಗಳಿಗೆ ಯುವಕರು ಎಂಜಲು ಹಚ್ಚುತ್ತಿದ್ದರು ಎಂಬ ಅಡಿಬರಹದೊಂದಿಗೆ ವೈರಲ್ ಆಗಿದ್ದ ವಿಡಿಯೊದಲ್ಲಿದ್ದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಅದು ತಿರುಚಿದ ವಿಡಿಯೋ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.
ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಅಪೇ ಆಟೋ ನಿಲ್ಲಿಸಿಕೊಂಡ ಮೂವರು ಯುವಕರು ಹಣ್ಣನ್ನು ಬಾಯಿಗಿಡುವ ಫಾಸ್ಟ್ ಫಾರ್ವರ್ಡ್ ದೃಶ್ಯಗಳಿದ್ದವು. ದುರುದ್ದೇಶದಿಂದ ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚಲಾಗಿದೆ ಎಂದು ವಿಡಿಯೋ ಹರಿಬಿಡಲಾಗಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ‌ ವ್ಯಕ್ತವಾಗಿತ್ತು.ಈ ಬಗ್ಗೆ ತಕ್ಷಣ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ, ತನಿಖೆಗೆ ಸೂಚನೆ ನೀಡಿದರು.
ಭಾನುವಾರ ರಾತ್ರಿ ವೇಳೆಗೆ ವಿಡಿಯೋದಲ್ಲಿದ್ದ ಯುವಕರನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಅವರು ತಾವು ಆಟೋ ನಿಲ್ಲಿಸಿಕೊಂಡು ಹಣ್ಣು ತಿನ್ನುತ್ತಿದ್ದುದಾಗಿ‌ ಮಾಹಿತಿ ನೀಡಿದರು. ಅವರನ್ನು ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಅವರಲ್ಲಿ ಯಾರಿಗೂ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನುವುದು ಖಚಿತವಾಯಿತು. ಆದರೂ ಅವರನ್ನು ನಿಗಾದಲ್ಲಿರಲು ಸೂಚಿಸಲಾಗಿದ್ದು, ಹಣ್ಣುಗಳನ್ನು ಆಹಾರ ಪರಿವೀಕ್ಷಕರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಈ ವಿಡಿಯೋ ಚಿತ್ರೀಕರಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ರೀತಿ ವೈರಲ್ ಮಾಡಿದವರನ್ನು ಪತ್ತೆಹಚ್ಚಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
https://www.vijayavani.net/covid-19-tablighi-jamaat-virus-at-bidar/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
