ಬೆಂಗಳೂರು:ರಾಜ್ಯ ರಾಜಧಾನಿ ದಿನೇದಿನೆ ಅಪರಾಧಗಳ ನಗರವಾಗಿ ಪರಿವರ್ತನೆಯಾಗುತ್ತಿದೆ. ಕಾಡುಗುಡಿ ಸಮೀಪ ಸೆ. 19ರಂದು ಹಾಡಹಗಲೇ ನಡುರಸ್ತೆಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಬೆಚ್ಚಿಬೀಳಿಸುವಂತಿದ್ದು, ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ವೀರಸ್ವಾಮಿ ಲೇಔಟ್ ನಿವಾಸಿ ರಾಜೇಶ್ (35) ಕೊಲೆಯಾದವರು. ಈತನ ಬಾಮೈದ ಸೈನಿಕ ಜಾನ್‌ಪಾಲ್ ಮತ್ತು ಆತನ ಸ್ನೇಹಿತ ದಿನೇಶ್ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಜಿಎಫ್ ಮೂಲದ ರಾಜೇಶ್, ಎಚ್‌ಎಎಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. 7 ವರ್ಷಗಳ ಹಿಂದೆ ಜಾಸ್ಮೀನ್ ಎಂಬುವರನ್ನು ವಿವಾಹವಾಗಿದ್ದರು. ದಂಪತಿ ವೀರಾಸ್ವಾಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಐದು ವರ್ಷದ ಮತ್ತು ಮೂರು ತಿಂಗಳ ಎರಡು ಮಕ್ಕಳಿವೆ. ಕ್ಷುಲ್ಲಕ ವಿಚಾರಕ್ಕೆ ದಂಪತಿಯ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಕುಟುಂಬದ ಹಿರಿಯರು ದಂಪತಿ ನಡುವೆ ರಾಜಿ ಸಂಧಾನ ನಡೆಸಿದ್ದರು.
ಇದನ್ನೂ ಓದಿ:ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಗಿಫ್ಟ್​- ನಿರ್ಮಲಾ ಸೀತಾರಾಮನ್​ ಘೋಷಣೆ
ಆದಾಗ್ಯೂ ಇಬ್ಬರ ನಡುವೆ ಮನಸ್ತಾಪ ಮುಂದುವರಿದಿತ್ತು. ನಾಲ್ಕೈದು ತಿಂಗಳ ಹಿಂದೆ ಬಾಣಂತನಕ್ಕೆ ತವರು ಮನೆಗೆ ಹೋಗಿದ್ದ ಜಾಸ್ಮೀನ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹೋದರಿಯ ಆತ್ಮಹತ್ಯೆಗೆ ಆಕೆಯ ಪತಿ ಕಾರಣ ಎಂದು ಭಾವಿಸಿದ್ದ ಬಾಮೈದ ಕುಪಿತನಾಗಿದ್ದ. ಸೆ. 19ರ ಬೆಳಗ್ಗೆ 11.30ರಲ್ಲಿ ರಾಜೇಶ್ ಮನೆಗೆ ಹೋಗುತ್ತಿದ್ದರು. ಈ ವೇಳೆ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಬಂದಿದ್ದ ಜಾನ್‌ಪಾಲ್, ತನ್ನ ಭಾವನ ಕತ್ತು ಕೊಯ್ದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ರಾಜೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಇದನ್ನೂ ಓದಿ:ನನ್ನ ಗಮನಕ್ಕೆ ತರದೇ ಖಾತೆ ಬದಲಾಯಿಸಿದ್ದು ಸರಿಯೇ? ಸಿಎಂಗೆ ಶ್ರೀರಾಮುಲು ಪ್ರಶ್ನೆ
ಆರೋಪಿ ಜಾನ್‌ಪಾಲ್ ಸೈನಿಕನಾಗಿದ್ದು, ರಜೆ ಮೇಲೆ ಊರಿಗೆ ಬಂದಿದ್ದ. ಈ ಮಧ್ಯೆ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಕೋಪಕ್ಕೆ ಭಾವನನ್ನು ಹತ್ಯೆ ಮಾಡಿದ್ದಾನೆ. ಜಾಸ್ಮಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರು ರಾಜೇಶ್ ವಿರುದ್ಧ ಯಾವುದೇ ದೂರು ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಖುಷ್ಬೂ ಬಿಜೆಪಿ ಸೇರ್ಪಡೆಯಾದರೆ ಎಐಎಡಿಎಂಕೆ ನಾಯಕರಲ್ಲೇಕೆ ಖುಷಿ ಸಂಭ್ರಮ?

Sign in to your account
Please enter an answer in digits:12 − eleven =
Remember me
