ಬೆಂಗಳೂರು:ಸಂಘಟನೆಯ ಕಾರ್ಯತಂತ್ರ ಮತ್ತಿತರ ವಿಷಯಗಳಿಗೆ ಮಾರ್ಗದರ್ಶನ ಪಡೆಯಲು ಡಿ.2 ಅಥವಾ 3ರಂದು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಹಿತಿ ನೀಡಿದರು.
ಒಂದೆರಡು ದಿನಗಳಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ಕಿತ್ತೂರು ಅಥವಾ ಕಲ್ಯಾಣ ಕರ್ನಾಟಕಕ್ಕೆ ನೀಡಬೇಕೆಂಬ ಯೋಚನೆಯಿದ್ದು, ಪಕ್ಷದ ಹಿರಿಯರೊಂದಿಗೆ ರ್ಚಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೋಮವಾರ ಮಾಹಿತಿ ನೀಡಿದರು.
ಕಾರ್ಯನಿಮಿತ್ತ ಡಿ.2ರಂದು ದೆಹಲಿಗೆ ತೆರಳುವೆ. 3ರ ಬೆಳಗ್ಗೆ ಕಾಲಾವಕಾಶ ಪಡೆದು ವರಿಷ್ಠರನ್ನು ಭೇಟಿ ಮಾಡಬೇಕೆಂದಿರುವೆ. ವಿಧಾನಮಂಡಲ ಚಳಿಗಾಲದ ಅಧಿವೇಶನ ಡಿ.4ರಂದು ಶುರುವಾಗಲಿದೆ. ಅದಕ್ಕೂ ಮುನ್ನವೇ ದೆಹಲಿಯಿಂದ ಹಿಂತಿರುಗಲು ಆಲೋಚಿಸಿರುವೆ. ಸಂಘಟನೆ ಬಲವರ್ಧನೆ, ವಿವಿಧ ಕಾರಣಗಳಿಗೆ ಬೇಸತ್ತವರನ್ನು ಭೇಟಿ ಮಾಡಿ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ನಡೆಯಲಿರುವ ಪರಿಷತ್​ನ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ನಮ್ಮ ಪಕ್ಷದಿಂದ ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ವರಿಷ್ಠರ ಭೇಟಿ ಸಂದರ್ಭದಲ್ಲಿ ಕೋರಲಾಗುವುದು ಎಂದರು.
ಡಿ.20ರ ನಂತರ ಸಂಘಟನಾ ಚಟುವಟಿಕೆ:ಬೆಳಗಾವಿ ಅಧಿವೇಶನದಲ್ಲಿ ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡಲು ಬಿಜೆಪಿ ಬಯಸುತ್ತದೆ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಲೋಕಸಭೆ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜತೆಗಿನ ಮೈತ್ರಿ ಪಕ್ಷಕ್ಕೆ ಅನುಕೂಲವಾಗಿದೆ. ಚುನಾವಣೆಗೆ ಸಂಘಟನೆಯನ್ನು ಸಜ್ಜುಗೊಳಿಸಲು ಡಿ.20ರಿಂದ ಜಿಲ್ಲಾವಾರು ಸಭೆಗಳನ್ನು ನಡೆಸುವೆ. ಪ್ರತಿದಿನ 2-3 ಜಿಲ್ಲೆಗಳ ಸಭೆ ನಡೆಸಿ, ನಂತರ ಜಿಲ್ಲಾವಾರು ಸಂಘಟನಾ ಪ್ರವಾಸ ಕೈಗೊಂಡು ಕಾರ್ಯಕರ್ತರಿಂದ ಹಿಮ್ಮಾಹಿತಿ ಪಡೆಯಲಾಗುವುದು. ಅದಕ್ಕೂ ಮುನ್ನವೇ ರಾಜ್ಯ ಸಮಿತಿ ನೂತನ ಪದಾಧಿಕಾರಿಗಳ ನೇಮಕವಾಗಲಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ಕೇಂದ್ರ ಸರ್ಕಾರಕ್ಕೆ ಮನವಿರಾಜ್ಯದಲ್ಲಿ ತಲೆದೋರಿದ ಬರಗಾಲಕ್ಕೆ ಸ್ಪಂದಿಸಿ ಪರಿಹಾರ ಧನ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಪರಿಹಾರ ಬಿಡುಗಡೆಯಾಗುವಲ್ಲಿ ವಿಳಂಬವಾಗಿದೆ ಎಂಬುದು ನನ್ನ ಗಮನಕ್ಕೂ ಬಂದಿದೆ. ಇನ್ನಷ್ಟು ವಿಳಂಬವಾದರೆ ತಪು್ಪ ಸಂದೇಶ ರವಾನೆಯಾಗುತ್ತದೆ ಎಂದು ಮನವರಿಕೆ ಮಾಡಿಕೊಡಲು ರಾಜ್ಯ ಬಿಜೆಪಿ ಬದ್ಧವಾಗಿದೆ. ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ಪರಿಹಾರಧನ ವಿತರಣೆ, ಯುದ್ಧೋಪಾದಿ ಕಾಮಗಾರಿ ಕೈಗೆತ್ತಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಆರಂಭಿಕ ದಿನದಿಂದ ಕೇಂದ್ರದೆಡೆ ಬೊಟ್ಟು ತೋರಿಸುತ್ತಾ ಕಾಲ ಕಳೆದಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು.
ಜಾತಿ ಗಣತಿಗೆ ವಿರೋಧವಿಲ್ಲಸಾಮಾಜಿಕ ನ್ಯಾಯ, ಸಮಪಾಲು ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟ, ಬದ್ಧತೆಯಿದೆ. ಜಾತಿ ಗಣತಿಗೆ ವಿರೋಧ ಮಾಡುತ್ತಿಲ್ಲ. ಅಪೂರ್ಣ ಎಚ್.ಕಾಂತರಾಜು ವರದಿ ಸ್ವೀಕರಿಸಬೇಡಿ ಎಂದು ಒತ್ತಾಯಿಸುತ್ತಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಸಿಎಂ ಸಿದ್ದರಾಮಯ್ಯಗೆ ಅಷ್ಟೊಂದು ಕಾಳಜಿಯಿದ್ದರೆ, ಕಾಂತರಾಜು ಅವರಿಗೆ ವರದಿ ನೀಡಲು ಕಾಲಮಿತಿ ನಿಗದಿಪಡಿಸಿ, ಮೊದಲ ಅಧಿಕಾರಾವಧಿಯಲ್ಲಿ ಸ್ವೀಕರಿಸಲು ಸಾಧ್ಯವಿತ್ತು. ಜನಹಿತಕ್ಕಿಂತ ರಾಜಕೀಯ ಲಾಭದ ಲೆಕ್ಕಾಚಾರವೇ ಅವರಿಗೆ ಮುಖ್ಯವಾಗಿದ್ದು, ಈ ಹಿಂದೆ ಧರ್ಮದ ಹೆಸರಿನಲ್ಲಿ ಸಮುದಾಯಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸಕ್ಕೆ ಕೈಹಾಕಿದ್ದರು. ಈಗಲೂ ಅಷ್ಟೇ, ತಮಗೆ ಬೇಕಾದ ರೀತಿಯಲ್ಲಿ ಕಾಂತರಾಜು ವರದಿ ಸಿದ್ಧಪಡಿಸಿಕೊಂಡಿದ್ದು, ಸ್ವೀಕರಿಸಲು ಅವಸರ ಮಾಡುತ್ತಿದ್ದಾರೆ. ಸ್ವೀಕರಿಸುವ ಮುನ್ನವೇ ವಿರೋಧವೇಕೆ ಎಂದು ಪ್ರಶ್ನಿಸುವ ಮುಂಚೆ ವರದಿಯಲ್ಲಿನ ಅಂಕಿ-ಅಂಶಗಳನ್ನು ಸೋರಿಕೆ ಮಾಡಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರಬೇಕು ಎಂದು ಒತ್ತಾಯಿಸಿದರು.
7 ಡಿವೈಎಸ್​ಪಿ, 14 ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
