ಬೆಂಗಳೂರು:ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಬೆನ್ನಲ್ಲೇ ವಿಧಾನಪರಿಷತ್ ಚುನಾವಣಾ ಕಣ ರಂಗೇರಿದೆ. ನಾಮಪತ್ರ ಸಲ್ಲಿಸಲು ನಾಲ್ಕು ದಿನ ಬಾಕಿ ಇರುವಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಪರಿಣಾಮ ಪಕ್ಷಗಳ ನಾಯಕರಿಗೆ ಒತ್ತಡ ಹೆಚ್ಚಾಗಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. 7 ಸ್ಥಾನಗಳಿಗೆ ಜೂ.29ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಜೂ.18 ಕೊನೆಯ ದಿನ. ಬಿಜೆಪಿಗೆ 4, ಕಾಂಗ್ರೆಸ್​ಗೆ 2 ಹಾಗೂ ಜೆಡಿಎಸ್​ಗೆ ಒಬ್ಬರನ್ನು ಮೇಲ್ಮನೆಗೆ ಕಳಿಸಲು ಅವಕಾಶವಿದೆ. ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚಿದ್ದು, 22ರಂದೇ ಫಲಿತಾಂಶ ನಿಚ್ಚಳವಾಗಲಿದೆ.
ಈ ನಡುವೆ ಪರಿಷತ್ ಪ್ರವೇಶಾಕಾಂಕ್ಷಿಗಳ ಸಂಖ್ಯೆ ಮೂರೂ ಪಕ್ಷಗಳಲ್ಲಿ ಹೆಚ್ಚಾಗುತ್ತಿದೆ. ಜಾತಿವಾರು, ಪ್ರದೇಶವಾರು, ಪಕ್ಷಕ್ಕಾಗಿ ತ್ಯಾಗ ಮಾಡಿದ್ದು ಸೇರಿ ವಿವಿಧ ಆಯಾಮಗಳಲ್ಲಿ ತಾವು ಪರಿಷತ್ ಅವಕಾಶ ಪಡೆಯಲು ಸೂಕ್ತ ಎಂದು ಬಿಂಬಿಸಲು ಕಸರತ್ತು ನಡೆಸಿದ್ದಾರೆ.
ಮೂರೂ ಪಕ್ಷಗಳು ಸೋಮವಾರ ಅಥವಾ ಮಂಗಳವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಈಗ ಕೆಲವು ಹೆಸರು ಮುಂಚೂಣಿಯಲ್ಲಿದ್ದರೂ ಅಂತಿಮ ಕ್ಷಣದಲ್ಲಿ ಅಚ್ಚರಿ ಹೆಸರು ಬಂದರೂ ಆಶ್ಚರ್ಯಪಡಬೇಕಿಲ್ಲ. ದೆಹಲಿ ಮಟ್ಟದಲ್ಲಿ ಲಾಬಿ, ಸ್ವಾಮೀಜಿಗಳ ಒತ್ತಡ, ಜಾತಿ ಸಂಘಟನೆಗಳ ಪರೇಡ್ ಸೇರಿ ವಿವಿಧ ರೀತಿಯಲ್ಲಿ ಒತ್ತಡ ತರುವ ಕಾರ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಂದ ನಡೆದಿದೆ. ಭಾನುವಾರ ಮತ್ತು ಸೋಮವಾರ ಆಕಾಂಕ್ಷಿಗಳ ಪಾಲಿಗೆ ಮಹತ್ವದ ದಿನವಾಗಿದ್ದು, ಕೊನೇ ಕ್ಷಣದ ಕಸರತ್ತು ನಡೆಸಿದ್ದಾರೆ.
ಬಿಜೆಪಿಯಲ್ಲಿ ತೀವ್ರ ಪೈಪೋಟಿ
ಗೌಡರ ಕೃಪೆ ಯಾರಿಗೆ?
ಕಾಂಗ್ರೆಸ್​ಗೆ ಬಿಸಿತುಪ್ಪ
ಸಿದ್ದು, ಖರ್ಗೆ, ಡಿಕೆಶಿ.. ಕಾಂಗ್ರೆಸ್​ನಲ್ಲಿ ಯಾರ ಕೈ ಮೇಲು?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:sixteen − 6 =
Remember me
