ಬೆಂಗಳೂರು:ನಗರದ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಏಕಕಾಲದಲ್ಲಿ 30 ಸಿಬ್ಬಂದಿಗೆ ಮಹಾಮಾರಿ ಕರೊನಾ ವೈರಸ್​ ಸೋಂಕು ತಗುಲಿರುವುದು ದೃಢವಾಗಿದೆ.
ವಿಕಾಸಸೌಧದ ಮೂರನೇ ಮಹಡಿಯಲ್ಲಿರುವ ಜಲ ಸಂಪನ್ಮೂಲ ಇಲಾಖೆಗೆ ಆನಂದ್​ರಾವ್​ ವೃತ್ತದಲ್ಲಿರುವ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಪತ್ರ ಬರೆದಿದ್ದು, 30 ಸಿಬ್ಬಂದಿಗೆ ಕರೊನಾ ತಗುಲಿರುವುದಾಗಿ ತಿಳಿಸಿದೆ. ಮುನ್ನೆಚ್ಛರಿಕಾ ಕ್ರಮವಾಗಿ ಕಚೇರಿಗೆ ನಾಳೆ ಸ್ಯಾನಿಟೈಸ್​ ಸಿಂಪಡಣೆ ಮಾಡಿ, ಅ. 15 ರಿಂದ 17ರವರೆಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಇನ್ನುಳಿದ ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿ ಇರಲು ಸೂಚಿಸಲಾಗಿದೆ.
ಇಷ್ಟೇ ಅಲ್ಲದೆ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯನ್ನು ಮೂರು ದಿನಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.
ಇದನ್ನೂ ಓದಿ:ದ್ರಾಕ್ಷಿ ತೋಟಕ್ಕಾಗಿ ಕೀಟನಾಶಕ ತರಲೆಂದು ಹೋದ ಎನ್​ಸಿಪಿ ಮುಖಂಡ ಕಾರಿನಲ್ಲೇ ಸಜೀವ ದಹನ
ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ 8662 ಪ್ರಕರಣಗಳು ವರದಿಯಾಗಿದ್ದು, ಒಟ್ಟು 735371 ಕರೊನಾ ಕೇಸ್​ಗಳು ರಾಜ್ಯದಲ್ಲಿ ದೃಢವಾಗಿದೆ. ಬೆಂಗಳೂರಿನಲ್ಲಿ ಇಂದು 4574 ಪ್ರಕರಣಗಳು ವರದಿಯಾಗಿದ್ದು, ಒಟ್ಟು 293405 ಕೇಸ್​ಗಳು ಪತ್ತೆಯಾಗಿವೆ.
ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್​ಐಆರ್​ ದಾಖಲು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
