
ಬೆಂಗಳೂರು:ವಿಧಾನಸಭೆ ಕಲಾಪಕ್ಕೆ ಇನ್ನಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಮುಂದಾಗಿರುವ ಸ್ಪೀಕರ್ ಯು.ಟಿ.ಖಾದರ್ ಅವರು ವಿಧಾನಸಭೆಗೆ ಪಶ್ಚಿಮಾಭಿಮುಖವಾಗಿ ಹಿಂಬಾಗಲನ್ನು ರೋಸ್‌ವುಡ್‌ನಿಂದ ಆಕರ್ಷಣೀಯವಾಗಿ ಮಾಡಿಸುತ್ತಿದ್ದಾರೆ.ಕೆಂಗಲ್ ಪ್ರತಿಮೆ ಗೇಟ್ ಮೂಲಕ ವಿಧಾನಸೌಧ ಪ್ರವೇಶಿಸಿ ಮೊದಲ ಮಹಡಿಗೆ ಮೆಟ್ಟಿಲು ಹತ್ತಿ ವಿಧಾನಸಭೆ ಪ್ರವೇಶ ಮಾಡುವ ವ್ಯವಸ್ಥೆ ಇದೆ. ಈ ಗೇಟ್ ಗ್ರಿಲ್ ಮೂಲಕವಷ್ಟೆ ಮಾಡಲಾಗಿತ್ತು. ಹೈಕೋರ್ಟ್ ಕಡೆಯಿಂದ ಪ್ರವೇಶ ಮಾಡುವ ಪೂರ್ವಾಭಿಮುಖವಾಗಿರುವ ಬಾಗಿಲನ್ನು ರೋಸ್‌ವುಡ್ ಮೂಲಕ ಮಾಡಲಾಗಿದ್ದು ಆಕರ್ಷಣೀಯವಾಗಿದೆ. ಇದೇ ಮಾದರಿಯಲ್ಲಿ ಪಶ್ಚಿಮಾಭಿಮುಖವಾಗಿಯೂ ಬಾಗಿಲು ಮಾಡಬೇಕು ಎನ್ನುವ ತೀರ್ಮಾನ ತೆಗೆದುಕೊಂಡ ಸ್ಪೀಕರ್ ಈ ಯೋಜನೆಯನ್ನು ಕೇವಲ 1 ತಿಂಗಳ ಅವಧಿಯಲ್ಲಿಯೇ ಕಾರ್ಯರೂಪಕ್ಕೆ ತಂದಿದ್ದಾರೆ.ಇದಕ್ಕಾಗಿ ಸರ್ಕಾರದಿಂದ ಪ್ರತ್ಯೇಕ ಬಜೆಟ್ ಕೇಳುವ ಗೋಜಿಗೆ ಹೋಗಿಲ್ಲ. ಉಳಿತಾಯದ ಹಣವನ್ನು ಕ್ರೋಢೀಕರಿಸಿ ದೊಡ್ಡಬಾಗಿಲು ಮಾಡಿಸಲಾಗುತ್ತಿದೆ.50 ಲಕ್ಷ ರೂ ಅಂದಾಜಿನಲ್ಲಿ ನಡೆಯುತ್ತಿರುವ ಈ ಬಾಗಿಲಿನಲ್ಲಿ ಕೆತ್ತನೆಯ ಕುಸರಿ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸಲಾಗಿದೆ. ಇನ್ನೊಂದು ವಾರದಲ್ಲಿ ಕೆಲಸಗಳು ಮುಗಿಯುವ ನಿರೀಕ್ಷೆಯಿದೆ.ಅಲ್ಲಿರುವ ಕಂಬಗಳಿಗೂ ರೋಸ್‌ವುಡ್‌ನಲ್ಲಿ ಆಕರ್ಷಣೀಯವಾಗಿಸಲು ಕ್ರಮ ವಹಿಸಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಕ್ಷಿ ಅವರು ವಿಜಯವಾಣಿಗೆ ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 − ten =
Remember me
