
ಬೆಂಗಳೂರು:ವಿಧಾನಸೌಧಕ್ಕೆ ಸಚಿವರುಗಳು ಅಪರೂಪವಾಗುತ್ತಿರುವುದು ಶಾಸಕರುಗಳು ಆಕ್ರೋಶಕ್ಕೆ ಕಾರಣವಾಗಿದೆ.ಕೆಲವೇ ಸಚಿವರು ಮಾತ್ರ ವಿಧಾನಸೌಧಕ್ಕೆ ಆಗಿಂದಾಗ್ಗೆ ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಆದರೆ ಬಹಳಷ್ಟು ಸಚಿವರು ಸಂಪುಟ ಸಭೆ ಇದ್ದಾಗ ಮಾತ್ರ ಕಾಣಿಸಿಕೊಳ್ಳುವುದನ್ನು ಬಿಟ್ಟರೆ ನಮ್ಮ ಕೈಗೂ ಸಿಗುವುದಿಲ್ಲ ಎನ್ನುವ ಆಡಳಿತ ಪಕ್ಷದ ಶಾಸಕರುಗಳ ದೂರು ಮುಖ್ಯಮಂತ್ರಿಗಳ ತನಕ ತಲುಪಿದೆ.ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ವಿಧಾನಸೌಧದಲ್ಲಿರಬೇಕು ಎಂದು ಸರ್ಕಾರ ರಚನೆಯಾದ ಪ್ರಾರಂಭದಲ್ಲಿಯೇ ಸಿಎಂ ಮತ್ತು ಡಿಸಿಎಂ ಶಿವಕುಮಾರ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರು. ವಾರದಲ್ಲಿ ಎರಡು ದಿನ ವಿಧಾನಸೌಧ ಕಚೇರಿಯಲ್ಲಿರಬೇಕು ಎಂದು ಸ್ವತಃ ಮುಖ್ಯಮಂತ್ರಿಗಳೇ ಮೌಖಿಕವಾಗಿ ತಿಳಿಸಿದ್ದರೂ, ಅದರ ಪರಿಪಾಲನೆಗೆ ಸಚಿವರುಗಳು ಒಲವು ತೋರಿಸುತ್ತಿಲ್ಲ ಮತ್ತು ಬದ್ಧತೆಯಿಂದ ನಡೆದುಕೊಳ್ಳುತ್ತಿಲ್ಲ ಎನ್ನುವುದು ಶಾಸಕರುಗಳ ದೂರು.ಇನ್ನು ಕಮಿಟಿ ಮೀಟಿಂಗ್, ಇಲಾಖೆಯ ಸಭೆಗಳಿಗೆ ಬರುವ ಸಚಿವರು ಬಳಿಕ ಕಚೇರಿಯಲ್ಲಿ ಅರ್ಧ ದಿನವಾದರೂ ಇರಬೇಕು ಎಂದು ಮನಸ್ಸು ಮಾಡುವುದೇ ಇಲ್ಲ. ಏನಾದರೊಂದು ನೆಪ ಮಾಡಿಕೊಂಡು ಹೋಗುವವರೇ ಹೆಚ್ಚು ಎನ್ನುವುದು ಸಚಿವಾಲಯದ ಅಧಿಕಾರಿಗಳ ಮಾಹಿತಿ.ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಕಾಲ ಘಟ್ಟದಲ್ಲಿ ಸಚಿವರುಗಳು ವಿಧಾನಸೌಧದ ಕಚೇರಿಯಲ್ಲಿ ಕುಳಿತು ಹೇಗೆ ಆಡಳಿತ ನಡೆಸುತ್ತಿದ್ದರು ಎನ್ನುವ ಘಟನೆಗಳನ್ನು ನೆನಪಿಸಿಕೊಳ್ಳುವ ಹಿರಿಯ ಶಾಸಕರು, ಈಗಿನ ಸಚಿವರುಗಳಲ್ಲಿ ಆ ಬದ್ದತೆಯೇ ಇಲ್ಲವಾಗಿದೆ. ಅಧಿಕಾರ ಸಿಗುವ ತನಕ ಒಂದು ರೀತಿ. ಸಿಕ್ಕ ಮೇಲೆ ಮತ್ತೊಂದು ರೀತಿ ನಡೆದುಕೊಳ್ಳುವ ಪರಿಪಾಠ ಹೆಚ್ಚಾಗಿದೆ ಎನ್ನುವ ಬೇಸರವನ್ನು ಹಂಚಿಕೊಂಡಿದ್ದಾರೆ.ಎಷ್ಟೋ ಬಾರಿ ಆಗಿನ ಸಚಿವರುಗಳು ವಿಧಾನಸೌಧಕ್ಕೆ ಅಧಿಕಾರಿಗಳು ಬರುವ ಮುನ್ನವೇ ಬಂದು ಕಚೇರಿಯಲ್ಲಿ ಕುಳಿತು ೈಲ್‌ಗಳನ್ನು ನೋಡುತ್ತಿದ್ದರು. ವಿಧಾನಸೌಧದ ಕಚೇರಿ ಇರುವುದೇ ಅದಕ್ಕೆ ತಾನೆ? ಸಾರ್ವಜನಿಕರ ಭೇಟಿ ಮಾಡುತ್ತಿದ್ದರು. ಆದರೆ, ಈಗಿನ ಬಹುಪಾಲು ಸಚಿವರು ಕಡತಗಳನ್ನು ಎಲ್ಲಿಗೋ ತರಿಸಿಕೊಂಡು ನೋಡುವ ಪರಿಪಾಠ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಆಡಳಿತದಲ್ಲಿ ಬಿಗಿ ಸಾಧಿಸಲು ಹೇಗೆ ಸಾಧ್ಯ? ಎನ್ನುವುದು ಶಾಸಕರುಗಳ ಪ್ರಶ್ನೆ.ವಾರದಲ್ಲಿ ಐದುದಿನ ಜಿಲ್ಲೆ, ರಾಜ್ಯ ಪ್ರವಾಸಕ್ಕೆ ಸಮಯ ಮೀಸಲಿಡಲಿ. ಇನ್ನೆರಡು ದಿನ ವಿಧಾನಸೌಧದಲ್ಲಿರಲಿ ಎನ್ನುವುದ ಶಾಸಕರುಗಳ ಅಹವಾಲಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಧಿಸಿದ್ದಾರೆ. ಮುಂದೇನು ಕ್ರಮ ಕೈಗೊಳ್ಳುವರೋ ನೋಡಬೇಕು.
*ಸಚಿವರುಗಳು ವಿಧಾನಸೌಧದ ಕಚೇರಿಯಲ್ಲಿ ಇದ್ದು ಕೆಲಸ ಮಾಡುವ ಪರಿಪಾಠ ಇತ್ತೀಚೆಗೆ ಕಡಿಮೆ ಆಗಿರುವುದು ಬೇಸರದ ಸಂಗತಿ. ವಾರದಲ್ಲಿ 2 ದಿನವಾದರೂ ಕಚೇರಿಯಲ್ಲಿ ಸಿಗುವಂತಾಗಬೇಕು. ಅವರವರ ಜಿಲ್ಲೆಗೆ ಸೀಮಿತವಾಗುವ ಸಚಿವರಾಗಬಾರದು. ರಾಜ್ಯಕ್ಕೆ ಸಚಿವರು ಎನ್ನುವ ಜವಬ್ದಾರಿ ಹೊತ್ತು ಕೆಲಸ ಮಾಡಬೇಕು.-ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
