ಬೆಂಗಳೂರು:ನಿರೀಕ್ಷೆಯಂತೆ ವಿಧಾನಪರಿಷತ್‌ನ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್​ ಆಯ್ಕೆಯಾಗಿದ್ದಾರೆ.
ಶುಕ್ರವಾರ ಪರಿಷತ್​ನಲ್ಲಿ ನಡೆದ ಉಪಸಭಾಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಣೇಶ್ ಪರವಾಗಿ 41 ಮತಗಳು ಲಭಿಸಿದರೆ, ವಿರುದ್ಧವಾಗಿ 24 ಮತಗಳು ಬಂದವು. ಪ್ರಾಣೇಶ್​ರ ಪತ್ನಿ ಶ್ರೀದೇವಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಣೆ ಮಾಡಿದರು.ಇದನ್ನೂ ಓದಿರಿಟಾಲಿವುಡ್​ ವಿರುದ್ಧ ಸಿಡಿದೆದ್ದ ನಟ ದರ್ಶನ್​, ಫಿಲಂ ಚೇಂಬರ್​ಗೆ​ ದೂರು!
ವಿಧಾನಪರಿಷತ್ತಿನಲ್ಲಿ ಬಿಜೆಪಿಯ 31 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 28 ಮತ್ತು ಜೆಡಿಎಸ್ 13 ಸದಸ್ಯರನ್ನು ಹೊಂದಿವೆ. ಕಳೆದ ತಿಂಗಳು ವಿಧಾನಪರಿಷತ್ ಅಧಿವೇಶನದಲ್ಲಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಬಿಜೆಪಿ, ಜೆಡಿಎಸ್‌ ಜತೆ ಕೈಜೋಡಿಸಿತ್ತು. ಆ ವೇಳೆ ಸದನದಲ್ಲಿ ಭಾರಿ ಗಲಾಟೆಯೂ ನಡೆದಿತ್ತು. ಆಗ ಜೆಡಿಎಸ್‌ನ ಎಸ್.ಎಲ್. ಧರ್ಮೇಗೌಡ ಅವರನ್ನು ಸಭಾಪತಿಯನ್ನಾಗಿಸುವ ಪ್ರಯತ್ನವೂ ನಡೆದಿತ್ತು. ನಂತರದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡರು. ಇದೀಗ ಉಪಸಭಾಪತಿ ಸ್ಥಾನವನ್ನ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿವೆ. ಇನ್ನು ವಿಧಾನಪರಿಷತ್​ಗೆ ಹೊಸ ಚೇರ್ಮನ್ ಆಗಿ ಹೊರಟ್ಟಿ ಆಯ್ಕೆ ಬಹುತೇಕ ಖಚಿತವಾಗಿದೆ.
ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಟಾಲಿವುಡ್​ ವಿರುದ್ಧ ಸಿಡಿದೆದ್ದ ನಟ ದರ್ಶನ್​, ಫಿಲಂ ಚೇಂಬರ್​ಗೆ​ ದೂರು!

ಮೈಸೂರಿನಲ್ಲಿ ವೈದ್ಯ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ಆ ಮನೆಗೆ ದುಷ್ಕರ್ಮಿ ಬಂದಿದ್ದಾದರೂ ಏಕೆ?

ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fourteen =
Remember me
