ಬೆಂಗಳೂರು:ಸೋಮವಾರದಂದು (ಮಾ.14) ವಿದ್ವಾನ್ ಟಿ.ಎಚ್.ರಾಘವೇಂದ್ರನ್​​​​​ರವರು ವಿಧಿವಶರಾಗಿದ್ದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ವಿದ್ವಾನ್ ಟಿ.ಎಚ್.ರಾಘವೇಂದ್ರನ್​​​​​​​​ರವರು 19-02-1937 ರಂದು ತಮಿಳುನಾಡಿನ ತಿರುವಾರೂರು ಗ್ರಾಮದಲ್ಲಿ ಪದ್ಮಾವತಿ ಮತ್ತು ಶ್ರೀ ಟಿ ಎಸ್ ಹನುಮಂತರಾವ್ ರವರ ಸುಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿ ಅವರಿಗಿದ್ದ ಸಂಗೀತದ ಅಭಿರುಚಿಯನ್ನು ಗಮನಿಸಿದ ತಂದೆ ತಾಯಿಗಳು ವಿದ್ವಾನ್ ರಾಮಸ್ವಾಮಿ ಭಾಗವತರಲ್ಲಿ ಪ್ರಥಮ ವಿದ್ಯಾಭ್ಯಾಸಕ್ಕೆ ಅಡಿಗಲ್ಲನ್ನು ಇಟ್ಟರು. ನಂತರ ಶಾಸ್ತ್ರೀಯ ಸಂಗೀತದ ಹಿರಿಯರೆನಿಸಿದ ವಿದ್ವಾನ್ ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ ರವರ ಶಿಷ್ಯರಾದಂತಹ ಸಂಗೀತ ಕಲಾಚಾರ್ಯ ವಿದ್ವಾನ್ ರಾಮಚಂದ್ರನ್, ವೈಸ್ ಪ್ರಿನ್ಸಿಪಲ್ ಷಣ್ಮುಖಾನಂದ ಫೈನ್ ಆರ್ಟ್ಸ್ ಮತ್ತು ಸಂಗೀತ ಸಭಾ, ಮುಂಬೈ ರವರ ಗುರುಕುಲದಲ್ಲಿ ಅಪ್ರತಿಮ ಸಂಗೀತ ಸಾಧನೆಯನ್ನು ಮಾಡಿರುತ್ತಾರೆ.
ವಿದ್ವತ್ತನ್ನು ಮುಗಿಸಿ ಬೆಂಗಳೂರು ಆಕಾಶವಾಣಿಯಲ್ಲಿ ಸುಮಾರು 25 ವರ್ಷಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿಭಾಗದಲ್ಲಿ ಆಕಾಶವಾಣಿ ಕಲಾವಿದರಾಗಿ ಸೇವೆ ಸಲ್ಲಿಸಿರುತ್ತಾರೆ. ಕರ್ನಾಟಕ ರಾಜ್ಯದ್ಯಂತ ಹಾಗೂ ಮುಂಬೈನಲ್ಲಿ ಅನೇಕ ಸಂಗೀತ ಕಚೇರಿಗಳನ್ನು ನೀಡುತ್ತಾರೆ. ಸಂಗೀತ ಭಿತ್ತಿಯಲ್ಲಿ ನಿರಂತರವಾಗಿ ತಾಳ, ಲಯ, ರಾಗಗಳನ್ನು ಆರಾಧಿಸುತ್ತಾ ಗಾಯಕರಾಗಿಯೂ, ಬೋಧಕರಾಗಿಯೂ, ಮುನ್ನಡೆಯುತ್ತಾ, ನೂರಾರು ಸಂಗೀತಾಭ್ಯಾಸಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಸುಸಂಸ್ಕೃತ ಲೋಕವನ್ನು ಪರಿಚಯಿಸಿ,ಶಿಷ್ಯರನ್ನು ತಯಾರು ಮಾಡುತ್ತಿದ್ದ ಅವರ ಪರಿಯು ವಿಶೇಷವಾದದ್ದು.
“ಗಾನಸುಧಾ” ಎಂಬ ಸಂಗೀತ ಶಾಲೆಯನ್ನು ಕಳೆದ 28 ವರ್ಷಗಳಿಂದ ಸೊಗಸಾಗಿ ನಡೆದುಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಮುಂದೆ ಬರಲು ಅವಕಾಶವಾಗುವಂತೆ ವಿದ್ಯಾರ್ಥಿಗಳಿಂದಲೇ ನಡೆಸುತ್ತಿದ್ದ “ತಿಂಗಳ ಕಾರ್ಯಕ್ರಮ”ವು (ಸಂಗೀತ ಕಚೇರಿ) ಅಭಿನಂದನಾರ್ಹ ಹಾಗೂ ಅನುಕರಣಿಯವಾದದ್ದು.
ಸಂಗೀತ ಲೋಕಕ್ಕೆ ಅವರು ನೀಡುತ್ತಿದ್ದ ಸೇವೆಯನ್ನು ಗಮನಿಸಿ, ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದು, ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿರುವುದು ಅವರ ಸಂಗೀತ ಕೃಷಿಯ ಸಫಲತೆಗೆ ಸಾಕ್ಷಿಯಾಗಿದೆ.ಅವುಗಳಲ್ಲಿ ಕೆಲವು ಬಿರುದುಗಳು ಇಂತಿವೆ.
“ಸಂಗೀತ ಪರಂಪರಾನಿಧಿ”“ಕಲಾ ವಾಣಿ”“ಗಾನ ಕಲಾಮೃತ ಪ್ರಪೂರ್ಣ”.
ಬೆಂಗಳೂರಿನ ಯಲಹಂಕದಲ್ಲಿನ ಗಾಲಿ ಮತ್ತು ಅಚ್ಚು ಕಾರ್ಖಾನೆಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆ ಎಲ್ಲರಿಂದಲೂ ಮೆಚ್ಚುಗೆ ಪಡೆದಿತ್ತು. ಶ್ರೀಯುತರದು ಸರಳ ವ್ಯಕ್ತಿತ್ವ. ಜನವಾರ್ತೆಗೆ ಎಂದು ತಲೆಕೆಡಿಸಿಕೊಳ್ಳದ ಎಲೆಮರೆಯ ಕಾಯಿಯಂತೆ ಸದಾ ಸಂಗೀತ ಸೇವೆಯನ್ನುಗೈದ ಮಹಾನ್ ಸಂಗೀತ ಸಾಧಕರು.
ಇವರು ಅಸಂಖ್ಯಾತ ಸಂಗೀತ ಅಭಿಮಾನಿಗಳನ್ನು ಅಗಲಿದ್ದಾರೆ. ಸಂಗೀತ ಲೋಕಕ್ಕೆ ಇಂಥಹ ದಾರಿ ದೀಪವು ನಂದಿರುವುದು ಬಹಳ ದುಃಖಕರ ಸಂಗತಿ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × one =
Remember me
