ಬೆಂಗಳೂರು :ರಾಜ್ಯದಲ್ಲಿ ಜ.1ರಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸಲು ಸಿದ್ಧತೆ ಆರಂಭಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತರಗತಿ ವೇಳಾಪಟ್ಟಿ ಮತ್ತು 6-9ನೇ ತರಗತಿ ವಿದ್ಯಾರ್ಥಿಗಳ ವಿದ್ಯಾಗಮ ಕಾರ್ಯಕಮ್ರದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಹಾಗೂ ಇತರೆ(ಚಿತ್ರಕಲೆ/ವೃತ್ತಿ) ಸೇರಿ 8 ತಂಡ ಮಾಡಿ ತರಗತಿ ನಡೆಸಲು ತಿಳಿಸಿದೆ. ಬೆಳಗ್ಗೆ 10ಗಂಟೆಯಿಂದ 10.45ರ ತನಕ ಒಂದು ಅವಧಿ, 10.45ರಿಂದ 11.30 2ನೇ ಅವಧಿ ಹಾಗೂ 11.45ರಿಂದ 12.30ರವರೆಗೆ 3ನೇ ಅವಧಿ ಇರಲಿವೆ. 2 ಅವಧಿ ನಂತರ 15 ನಿಮಿಷ ವಿರಾಮ ಇರಲಿದೆ. ಮಧ್ಯಾಹ್ನದ 12.30 ನಂತರ ತರಗತಿಗಳು ಇರುವುದಿಲ್ಲ. ಕೋವಿಡ್ ಸುರಕ್ಷತೆ ಸಂಬಂಧಿಸಿದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಶಿಕ್ಷಕರು ಕೋವಿಡ್ ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್ ಜತೆಗೆ ಕಡ್ಡಾಯವಾಗಿ ಫೇಸ್​ಸೀಲ್ಡ್ ಬಳಸಬೇಕು.
ವಿದ್ಯಾಗಮ ವೇಳಾಪಟ್ಟಿ :ವಿದ್ಯಾಗಮ ತರಗತಿಗೆ ಸಂಬಂಧ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿ, ಪ್ರಯೋಗಾಲಯ, ವಾಚನಾಲಯ, ವರಾಂಡ ಬಳಸಿಕೊಳ್ಳಲು ಸೂಚಿಸಿದೆ. ಸಾಮಾಜಿಕ ಅಂತರ ಸಹಿತವಾಗಿ ಎಲ್ಲ ಸುರಕ್ಷತಾ ಕ್ರಮ ಪಾಲಿಸಬೇಕು. ಒಂದು ಕೊಠಡಿಯಲ್ಲಿ 15-20 ವಿದ್ಯಾರ್ಥಿಗಳಿಗಷ್ಟೇ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ.
ವಿದ್ಯಾಗಮ ತರಗತಿಯೂ ಕೂಡ 8 ತಂಡಗಳಲ್ಲಿ ನಡೆಯಲಿದ್ದು, ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ 6 ಹಾಗೂ 9ನೇ ತರಗತಿ, ಪ್ರತಿ ಮಂಗಳವಾರ, ಗುರುವಾರ, ಶನಿವಾರ 7 ಹಾಗೂ 8ನೇ ತರಗತಿಗಳ ವಿದ್ಯಾಗಮ ಪಾಠ ನಡೆಯಲಿದೆ. ಕೆಲವೊಂದು ಶಾಲೆಗಳಲ್ಲಿ 8ನೇ ತರಗತಿಯವರೆಗೆ ಮಾತ್ರ ಇದ್ದು, ಅಲ್ಲಿ ಬುಧವಾರವೂ 8ನೇ ತರಗತಿ ನಡೆಯಲಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಪರಿಶಿಷ್ಟ ಜಾತಿಯವರ ಪೋಸ್ಟ್ ಮೆಟ್ರಿಕ್ ಸ್ಕಾಲರ್​ಷಿಪ್​ಗೆ 59,000 ಕೋಟಿ ರೂ. ಹೂಡಿಕೆ: ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + two =
Remember me
