ಬೆಂಗಳೂರು:ಬ್ಯಾಂಕಾಕ್​ನಲ್ಲಿ ಹಠಾತ್ ಸಾವಿಗೀಡಾಗಿದ್ದ ಸ್ಪಂದನಾ ಅಂತಿಮ ಸಂಸ್ಕಾರ ಇಂದು ಹರಿಶ್ಚಂದ್ರ ಘಾಟ್​ನಲ್ಲಿ ನಡೆಯುತ್ತಿದ್ದು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಪತಿ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾಗೆ ತಾಳಿ ಕಟ್ಟುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ಅವರು ಮುತ್ತೈದೆಯಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಈಡಿಗ ಸಂಪ್ರದಾಯದಂತೆ ಸ್ಪಂದನಾಗೆ ವಿಜಯ ರಾಘವೇಂದ್ರ ಈಗ ಮತ್ತೊಮ್ಮೆ ತಾಳಿ ಕಟ್ಟಿದ್ದಾರೆ ಎನ್ನಲಾಗಿದೆ.
ಹರಿಶ್ಚಂದ್ರ ಘಾಟ್​ನ ವಿದ್ಯುತ್ ಶವಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯುತ್ತಿದ್ದು, ಕುಟುಂಬದ ಸದಸ್ಯರು, ಸಿನಿಮಾ ನಟರು ಹಾಗೂ ಆಯ್ದ ಕೆಲವು ಗಣ್ಯರಿಗಷ್ಟೇ ಒಳಗೆ ಪ್ರವೇಶ ಕಲ್ಪಿಸಲಾಗಿದೆ. ಶವಾಗಾರದ ಎಡಭಾಗದಲ್ಲಿರುವ ಕೊಠಡಿಯಲ್ಲಿ ಅಂತಿಮ ವಿಧಿ-ವಿಧಾನ ನಡೆದಿದೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಈಡಿಗ ಸಮುದಾಯದ ಸಂಪ್ರದಾಯದಂತೆ ಸ್ಪಂದನಾ ವಿಧಿ ವಿಧಾನ ನೇರವೇರುತ್ತಿದೆ. ಈಗಾಗಲೇ ಎಲ್ಲಾ ಸಂಪ್ರದಾಯವನ್ನು ಮನೆಯಲ್ಲಿಯೇ ಮಾಡಲಾಗಿದೆ. ಹನ್ನೊಂದು ದಿನಗಳ ಕಾಲ ಪೂಜೆಗಳು ನಡೆಯುತ್ತದೆ. ಮಗ ಶೌರ್ಯ ಮತ್ತು ಕುಟುಂಬದ ಸದಸ್ಯರ ‌ಮೂಲಕ ವಿಧಿ ವಿಧಾನವನ್ನು ಮನೆ ಹತ್ತಿರ ಬೆಳಗ್ಗೆಯೇ ಮಾಡಿಸಿದ್ದೇವೆ. ಈಡಿಗ ಬಿಲ್ಲವ ಸಂಪ್ರದಾಯದಂತೆ ನಾರಾಯಣ ಗುರುಗಳು ಹೇಳಿದಂತೆ ಶಾಸ್ತ್ರ ಮಾಡಲಾಗಿದೆ. ನಾವು ಮೃತದೇಹವನ್ನು ಹೂಳುವಂತಿಲ್ಲ ಸುಡಬೇಕೆಂದು ಸೂಚನೆ ಇದೆ ಎಂದು ಈಡಿಗ ಸಮುದಾಯದ ಪ್ರಣವಾನಂದಶ್ರೀ ಮಾಹಿತಿ ನೀಡಿದ್ದಾರೆ.
ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂದ ಯುವಕರು: ವಿಡಿಯೋ ವೈರಲ್ ಆಗುತ್ತಿದ್ದಂತೆ ಕೇಸ್​ ದಾಖಲು, ಇಬ್ಬರ ಬಂಧನ

ಕಳವಾದ ಮೊಬೈಲ್‌ಫೋನ್ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + thirteen =
Remember me
