ಕೊಪ್ಪಳ:ಪ್ರಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಅವರಿಗೆ ಸನ್ಮಾನ ಮಾಡುವ ವಿಷಯದಲ್ಲಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ರಂಪಾಟ ನಡೆದ ಪ್ರಸಂಗ ಆನೆಗೊಂದಿ ಉತ್ಸವದಲ್ಲಿ ಗುರುವಾರ ರಾತ್ರಿ ನಡೆದಿದೆ.ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿರನ್ನು ಬಿಟ್ಟು ಜಿಲ್ಲಾಧಿಕಾರಿ ಸುನೀಲಕುಮಾರ್ ಅವರು ಗಾಯಕ ವಿಜಯ್​ ಪ್ರಕಾಶ್​ ಅವರಿಗೆ ಸನ್ಮಾನ ಮಾಡಿದ್ದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಗಿದ್ದೇನೆಂದರೆ… ಡಿಸಿ ಸುನೀಲ್​ ಕುಮಾರ್​ ಸನ್ಮಾನ ಮಾಡಿ ವೇದಿಕೆಯಿಂದ ಹೊರಟು ಹೋದರು. ಡಿಸಿ ವರ್ತನೆಗೆ ಬೇಸರಗೊಂಡು ಶಾಸಕ ಮುನವಳ್ಳಿ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಸ್ಪಿ ಸಂಗೀತಾ ಅವರು ಸಮಾಧಾನ ಮಾಡಲು ಮುಂದಾದರು. ಬಳಿಕ ವೇದಿಕೆ ಮೇಲೆ ಬಂದು ಇನ್ನೊಮ್ಮೆ ಸನ್ಮಾನ ಮಾಡುವಂತೆ ಅಧಿಕಾರಿಗಳು ಶಾಸಕರಲ್ಲಿ ಮನವಿ ಮಾಡಿದರು.
ಆದರೆ, ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದೆ ಶಾಸಕ ಪರಣ್ಣ ಮುನವಳ್ಳಿ ವೇದಿಕೆ ಕೆಳಗಡೆ ಕುಳಿತಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡ ಗಾಯಕ ವಿಜಯ್​ ಪ್ರಕಾಶ್​, ಕಾರ್ಯಕ್ರಮವನ್ನು ನಿಲ್ಲಿಸಿ, ವೇದಿಕೆಯಿಂದ ಕೆಳಗಡೆ ಇಳಿದು ಬಂದು ವೇದಿಕೆ ಮೇಲೆ ಬರುವಂತೆ ಶಾಸಕ ಪರಣ್ಣಗೆ ಮನವಿ ಮಾಡಿದರು. ಕೊನೆಗೆ ವೇದಿಕೆ ಮೇಲೆ ಬಂದ ಶಾಸಕರು ಬೆಂಬಲಿಗರೊಂದಿಗೆ ವಿಜಯ್​ ಪ್ರಕಾಶ್​ ಅವರಿಗೆ ಸನ್ಮಾನ ಮಾಡಿದರು.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
