ಹುಬ್ಬಳ್ಳಿ:ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ತವರು ಹುಬ್ಬಳ್ಳಿ ಧಾರವಾಡದಲ್ಲಿ ಹೆಚ್ಚಿನ ಪ್ರಚಾರ ನಡೆಸಿದರು. ಈ ವೇಳೆ ಲಿಂಗಾಯತ ಮುಖಂಡರು ಜೋಶಿ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.‌
ಉದ್ಯಮಿ ಹಾಗೂ ಸಮುದಾಯದ ಪ್ರಭಾವಿ ನಾಯಕ ಡಾ. ವಿಜಯ ಸಂಕೇಶ್ವರ ಅವರು ಪ್ರಲ್ಹಾದ ಜೋಶಿ ಅವರ ಜೊತೆ ಇಂದು ಪ್ರಚಾರದಲ್ಲಿ ತೊಡಗಿದ್ರು. ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ರಾಂತಿಕಿರಣ್ ಪರ ಜೋಶಿ ಹಾಗೂ ವಿಜಯ ಸಂಕೇಶ್ವರ ಮತಯಾಚಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆಯ ಮೂಲಕವೇ ಮೆರವಣಿಗೆ ನಡೆಸಿದ ಪ್ರಲ್ಹಾದ ಜೋಶಿ ಹಾಗೂ ವಿಜಯ ಸಂಕೇಶ್ವರ ಬಿಜೆಪಿ ಅಭ್ಯರ್ಥಿಗಳ ಪರ ಜನರಲ್ಲಿ ಮತಯಾಚಿಸಿದರು.
ಇದನ್ನು ಓದಿ: World Red Cross Day; ಈ ದಿನದ ಮಹತ್ವ, ವಿಶೇಷತೆ ಗೊತ್ತಾ…?
ಲಿಂಗಾಯತ ಮುಖಂಡರು ತಮ್ಮ ಪರ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ ಜಗದೀಶ್ ಶೆಟ್ಟರ್​​ಗೆ ತಿರುಗೇಟು ನೀಡುವ ನಿಟ್ಟಿನಲ್ಲಿಯೇ ಪ್ರಲ್ಹಾದ ಜೋಶಿ ಇಂದು ಸಂಕೇಶ್ವರ ಜೊತೆ ಸೇರಿ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ರು. ಪ್ರಚಾರ ಆರಂಭಕ್ಕೂ ಮೊದಲು ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಂಕೇಶ್ವರ, ಭಜರಂಗಬಲಿಗೆ ಜೈಕಾರ ಹಾಕುವ ಮೂಲಕ ಕಾಂಗ್ರೆಸ್​​ಗೆ ತಿರುಗೇಟು ನೀಡಿದರು.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಗೆಲುವು ಯಾರ ಮಡಿಲಿಗೆ ಎಂಬ ಕುತೂಹಲ ಎಲ್ಲರಲ್ಲಿದೆ. ಲಿಂಗಾಯತರು ಮತಗಳ ಜೊತೆ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳನ್ನ ಶೆಟ್ಟರ್ ನಂಬಿಕೊಂಡಿದ್ರೆ, ಬಿಜೆಪಿ ಸಾಂಪ್ರದಾಯಿಕ ಮತಗಳು ಪಕ್ಷ ಬಿಟ್ಟು ಎಲ್ಲೂ ಹೋಗುವುದಿಲ್ಲ. ಲಿಂಗಾಯತ ಮತಗಳು ಕೂಡ ಬಿಜೆಪಿಯ ಮತ ಬ್ಯಾಂಕ್​​​ನಲ್ಲಿ ಪ್ರಮಖವಾಗಿದ್ದು, ಲಿಂಗಾಯತರು ಬಿಜೆಪಿ ಪರ ನಿಲ್ಲಲಿದ್ದಾರೆ ಎಂಬ ವಿಶ್ವಾಸವನ್ನ ಪ್ರಲ್ಹಾದ ಜೋಶಿ ಹಾಗೂ ವಿಜಯ ಸಂಕೇಶ್ವರ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ-ರಾಮನಗರ ನನಗೆ ಎರಡು ಕಣ್ಣುಗಳು: ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
