ಬೆಂಗಳೂರು:ವಿಧಾನಸಭೆ ಚುನಾವಣೆ ಪೂರ್ವ ಬಿಜೆಪಿ ಪರವಾಗಿ ದೊಡ್ಡ ಅಲೆ, ಪೂರಕ ವಾತಾವರಣ ಸೃಷ್ಟಿಸಲೆಂದು ‘ವಿಜಯಸಂಕಲ್ಪ’ ಯಾತ್ರೆಗೆ ರಥಗಳು ಸನ್ನದ್ಧವಾಗಿವೆ. ‘ಈ ಬಾರಿ 150 ಗುರಿ’ ಘೋಷವಾಕ್ಯದಡಿ ಮಾ.1ರಿಂದ 20ರವರೆಗೆ ನಡೆಯಲಿರುವ ಯಾತ್ರೆಗಳಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್ ನಿಗದಿತ ದಿನಾಂಕ ಹಾಗೂ ಸ್ಥಳಗಳಲ್ಲಿ ಚಾಲನೆ ನೀಡಲಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವ ಹಾಗೂ ಯಾತ್ರೆ ರಾಜ್ಯ ಸಂಚಾಲಕ ಸಿ.ಸಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಹಿತಿ ನೀಡಿದರು.
ಚುನಾವಣೆಗಾಗಿ ಪೂರ್ಣ ಪ್ರಮಾಣದ ಸಿದ್ಧತೆ ನಡೆದಿವೆ. ಜನರ ಬಳಿಗೆ ಹೋಗಲೆಂದು ಯಾತ್ರೆ ಕೈಗೊಳ್ಳಲಿದ್ದು, ನಾಲ್ಕು ರಥಗಳ ಜತೆಗೆ ಎರಡು ಹೆಚ್ಚುವರಿ ರಥಗಳನ್ನು ಸಿದ್ಧಪಡಿಸಲಾಗುತ್ತಿದೆ. ಮುಂಚೂಣಿ ನಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ರಾಜ್ಯಾಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ.
ಪ್ರಸಿದ್ಧ ಸ್ಥಳಗಳಲ್ಲಿ ಆರಂಭ:ಆರಾಧ್ಯ ದೈವ ಮಲೆ ಮಹದೇಶ್ವರ, ಸ್ವಾತಂತ್ರ್ಯದ ಕಿಚ್ಚುಹಚ್ಚಿದ ಸಂಗೊಳ್ಳಿ ರಾಯಣ್ಣನ ಗದ್ದುಗೆ ಇರುವ ಸ್ಥಳ, ಪ್ರಜಾಪಭುತ್ವಕ್ಕೆ ಬುನಾದಿ ಹಾಕಿದ ಬಸವಣ್ಣನವರ ಅನುಭವ ಮಂಟಪ ಹಾಗೂ ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳದಲ್ಲಿ ಯಾತ್ರೆಗಳು ಚಾಲನೆ ಪಡೆಯಲಿವೆ. ವಿಚಾರಶಕ್ತಿಯಲ್ಲಿ ಪಕ್ಷಕ್ಕೆ ಸ್ಪಷ್ಟತೆಯಿದೆ. ಯಾತ್ರೆ ಆರಂಭವಾಗುವ ಸ್ಥಳಗಳೇ ಎಲ್ಲವನ್ನೂ ಸಾರುತ್ತಿದ್ದು, ವ್ಯವಹಾರಿಕ ರಾಜಕೀಯ ಲಾಭಕ್ಕಾಗಿ ಜಾತಿ ಲೆಕ್ಕಾಚಾರ ಸ್ವಾಭಾವಿಕ. ಸಾವರ್ಕರ್-ಟಿಪು್ಪ ಅಷ್ಟೇ ಅಲ್ಲ, ಗೆಲ್ಲಲು ಬೇಕಾದ ಎಲ್ಲ ಅಸ್ತ್ರಗಳು ಪಕ್ಷದ ಬತ್ತಳಿಕೆಯಲ್ಲಿವೆ ಎಂದು ಬಿಜೆಪಿ ನಾಯಕರು ಹೇಳಿದರು.
ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಜತೆಗೆ ಅಭಿವೃದ್ಧಿ ಕಾರ್ಯದ ಅವಲೋಕನ ಕೂಡ ನಡೆಯಲಿದೆ. ಅಲ್ಲದೆ, ಕಾಂಗ್ರೆಸ್​ನ ಸುಳ್ಳು ಆಶ್ವಾಸನೆಗಳು ಹೇಗೆ ಕಾರ್ಯಸಾಧುವಲ್ಲ ಎನ್ನುವುದನ್ನು ಬಯಲುಗೊಳಿಸಲಾಗುವುದು.
ಇದನ್ನೂ ಓದಿ:‘ನಾನಿನ್ನೂ ಸಕ್ರಿಯ, ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಅಂದ್ರು ಮಾಜಿ ಸಿಎಂ ಯಡಿಯೂರಪ್ಪ: ಅವರ ಮುಂದಿನ ಗುರಿ ಏನು?
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಸವಲತ್ತುಗಳನ್ನು ಕೊಡಲಿಲ್ಲವೇಕೆ? ಅಧಿಕಾರಕ್ಕೆ ಬಂದೇ ಇಲ್ಲ ಎಂಬಂತೆ ಗ್ಯಾರಂಟಿಗಳನ್ನು ಸಾರುತ್ತಿದ್ದಾರೆ. ಸದ್ಯಕ್ಕೆ ನೀಡಿದ ಮೂರು ಗ್ಯಾರಂಟಿಗಳಿಂದ ಲಕ್ಷಾಂತರ ಕೋಟಿ ರೂ. ಬೇಕಾಗಲಿದ್ದು, ಎಲ್ಲಿಂದ ತರುತ್ತಾರೆ ಎಂದು ಎನ್.ರವಿಕುಮಾರ್ ಪ್ರಶ್ನಿಸಿದರು.
ಯಡಿಯೂರಪ್ಪ ಪಕ್ಷದ ಅಗ್ರಗಣ್ಯ ನಾಯಕ, ನಮ್ಮ ಹೆಮ್ಮೆ. ವಿರೋಧಿಗಳ ಭದ್ರಕೋಟೆಗೆ ನುಗ್ಗಿ ಪಕ್ಷದ ಬಲವನ್ನು ವಿಧಾನಸಭೆಯಲ್ಲಿ ಹೆಚ್ಚಿಸುತ್ತಾ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದ ಛಾತಿ ಅವರದು. ಚುನಾವಣೆಯಲ್ಲಿ ಬಳಸಿಕೊಳ್ಳುವುದಕ್ಕೆ ಯಾವುದೆ ಮುಜುಗರ ಅಥವಾ ಹಿಂಜರಿಕೆ ಪ್ರಶ್ನೆಯೆ ಉದ್ಭವಿಸದು ಎಂದು ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಂಹಪಾಲು ಸ್ಥಾನಗಳನ್ನು ಗೆಲ್ಲುವ ಪಣ ತೊಟ್ಟಿದ್ದೇವೆ. ಎರಡೂ ಭಾಗದ ಜನರು ಈ ಬಾರಿ ಬಿಜೆಪಿಗೆ ಪೂರ್ಣಬಹುಮತ ನೀಡುವ ಚಿಂತನೆ ನಡೆಸಿದ್ದು, ಕಾಂಗ್ರೆಸ್​ಗೆ ತೀವ್ರ ಸಂಕಷ್ಟ, ಜೆಡಿಎಸ್​ಗೆ ಸವಾಲು ಎದುರಾಗಿದೆ.
|ಎನ್.ರವಿಕುಮಾರ್ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಸಮಾರೋಪದಲ್ಲಿ ಮೋದಿ ಭಾಗಿ:‘ವಿಜಯಸಂಕಲ್ಪ ಯಾತ್ರೆ’ ಸಮಾರೋಪ ಸಮಾರಂಭವು ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಮಾ.25ರೊಳಗೆ ಆಯೋಜಿಸಲಾಗುತ್ತದೆ. ಪ್ರಧಾನಿ ಮೋದಿ ಆಗಮಿಸಲಿದ್ದು, 15 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ರವಿಕುಮಾರ್ ತಿಳಿಸಿದರು.
ಅಧಿಕಾರಕ್ಕೆ ಬಂದೆ ಬಿಟ್ಟೆವು ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ನಾಯಕರ ಬುಡ ಅಲುಗಾಡ ತೊಡಗಿದೆ. ಬಿಜೆಪಿಯ ವೇಗಕ್ಕೆ ಕೈನಾಯಕರು ವಿಚಲಿತರಾಗಿದ್ದಾರೆ.
|ಸಿ.ಸಿ.ಪಾಟೀಲ್ಸಚಿವ
ಪ್ರಭಾವಿಗಳ ಸಂಯೋಜನೆ:ಯಡಿಯೂರಪ್ಪ, ಯೋಗಿ ಆದಿತ್ಯನಾಥ, ನರೇಂದ್ರ ಸಿಂಗ್ ತೋಮರ್, ಸ್ಮೃತಿ ಇರಾನಿ, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಸೇರಿ 50 ಪ್ರಭಾವಿ ನಾಯಕರನ್ನು ಯಾತ್ರೆಗೆ ಸಂಯೋಜಿಸ ಲಾಗಿದ್ದು, ಪೂರ್ವನಿಗದಿತ ಸ್ಥಳಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಾಗಲಕೋಟೆ:ರಾಜ್ಯದಲ್ಲಿ ಶತಾಯ ಗತಾಯ ಮತ್ತೆ ಕಮಲವನ್ನು ಅರಳಿಸಲೇಬೇಕೆಂದು ಪಣ ತೊಟ್ಟಿರುವ ಕೇಂದ್ರ ನಾಯಕರು. ಇದೀಗ ಮತ್ತೊಂದು ಪ್ಲಾ್ಯನ್ ಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ ತರಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಕೇಂದ್ರ ನಾಯಕರು ಮೇಲಿಂದ ಮೇಲೆ ರಾಜ್ಯಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಮೆಗಾ ಪ್ಲಾ್ಯನ್ ಮಾಡಿದ್ದು, ಅಮಿತ್ ಷಾ, ಕೇಂದ್ರ ಸಚಿವ ಧಮೇಂದ್ರ ಪ್ರದಾನ್ ಬೆಂಗಳೂರಲ್ಲಿ ಮನೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ದೃಢಪಡಿಸಿದ್ದಾರೆ. ಶನಿವಾರ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ಅಶೋಕ್ ಮಾತನಾಡಿ, ಹೌದು.. ಅಮಿತ್ ಷಾ, ಧಮೇಂದ್ರ ಪ್ರದಾನ್ ಇಲ್ಲೇ ಇರುತ್ತಾರೆ. ನಮ್ಮದು ನಾಳೆ ಬಾ ಎನ್ನುವ ಪಕ್ಷ ಅಲ್ಲ. ಟುಡೇ ಪಾರ್ಟಿ. ಕೇಂದ್ರ ನಾಯಕರು ಗೆಲ್ಲಿಸಬೇಕೆಂದು ಇಲ್ಲಿಗೆ ಬರುತ್ತಿದ್ದಾರೆ. ಅವರ (ಕಾಂಗ್ರೆಸ್) ತರಹ ಬಂದು ಓಡಿ ಹೋಗುವುದಿಲ್ಲ. ಇಲ್ಲಿಗೆ ಬರಬೇಕು, ಇಲ್ಲಿಯೇ ಇದ್ದು ಡಬಲ್ ಇಂಜಿನ್ ಸರ್ಕಾರ ಬರಬೇಕು ಎನ್ನುವುದು ಅವರೆಲ್ಲರ ಬಯಕೆಯಾಗಿದೆ ಎಂದರು.
ಬೆಂಗಳೂರು:ಅರ್ಕಾವತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಂಟು ಸಾವಿರ ಕೋಟಿ ರೂ. ಅಕ್ರಮದ ಆರೋಪ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಮಾತನ್ನು ಪುನಃ ಸಮರ್ಥಿಸಿಕೊಂಡಿದ್ದಾರೆ. ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್​ಗೆ ಸಂಬಂಧಿಸಿದಂತೆ ಸಿಎಂ ಸುಳ್ಳು ಹೇಳಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಟು ಸತ್ಯವನ್ನು ಎದುರಿಸುವ ಕಾಲ ಬಂದಿದೆ ಎಂದರು.
ಸಿದ್ದರಾಮಯ್ಯ ಅವರೇ ನೇಮಿಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಆಯೋಗವು ಸುದೀರ್ಘವಾಗಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ತನಿಖೆ ನಡೆಸಿದ ವರದಿಯನ್ನು ನಾನು ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಕುಟುಕಿದರು. ಅಧಿಕಾರಿಗಳು ಕಡತ ತಂದರು, ಅನುಮೋದಿಸಿದೆ ಎಂದು ಬರೆದಿರುವುದಾಗಿ ಸಿದ್ದರಾಮಯ್ಯ ಹೇಳಿರುವುದರ ಅರ್ಥ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಂತೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ ಎಂದರು.
ಇದನ್ನೂ ಓದಿ:ಒಂದೇ ಮನೆಯ ನಾಲ್ವರ ಹತ್ಯೆ; ನಾಲ್ಕು ಕೊಲೆಗಳ ಆರೋಪಿಯ ತಾಯಿ ಹೇಳಿದ್ದೇನು?
ಅಡ್ವೊಕೇಟ್ ಜನರಲ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರ ವಾದದ ನಂತರ ನ್ಯಾಯಮೂರ್ತಿಗಳು ಏನು ಹೇಳಿದ್ದಾರೆ ಎನ್ನುವುದು ಮುಖ್ಯ. ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ಭ್ರಷ್ಟಾಚಾರವನ್ನು ರಕ್ಷಿಸಲು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನೆ ನಾನು ಹೇಳಿದ್ದು ಎಂದು ಹೇಳಿದರು. ತೀರ್ಪು ಹಾಗೂ ಕೆಂಪಣ್ಣ ಆಯೋಗದ ವರದಿಯನ್ನು ನಾನು ಓದಿದ್ದು. ಈಗಾಗಲೆ ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ನಾವು ನೋಡಿದ್ದೇವೆ. ಇನ್ಮುಂದೆ ನಾವೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದರು.
ಬೆಂಗಳೂರು:ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಸೋಮವಾರ ಆಗಮಿಸಲಿದ್ದಾರೆ. ತಾತ್ಕಾಲಿಕ ಪ್ರವಾಸ ಪಟ್ಟಿಯ ಪ್ರಕಾರ ಫೆ.27ರ ಬೆಳಗ್ಗೆ 9.05ಕ್ಕೆ ವಾಯುಪಡೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹೊರಟು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅಂದೆ ಸಂಜೆ 5.10ಕ್ಕೆ ಬೆಳಗಾವಿಯಿಂದ ದೆಹಲಿಗೆ ಮರು ಪ್ರಯಾಣ ಬೆಳೆಸುವರು.
ಬೆಳಗ್ಗೆ 11.40ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ 10 ನಿಮಿಷ ಕಾಲ್ನಡಿಗೆಯಲ್ಲೇ ನಿಲ್ದಾಣದ ಟರ್ವಿುನಲ್ ಕಟ್ಟಡಕ್ಕೆ ಆಗಮಿಸುವರು. ಆ ಮೂಲಕ ನಿಲ್ದಾಣ ಸಮೀಪ ಜಮಾಯಿಸಿದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರತ್ತ ಕೈಬೀಸಿ ಖುಷಿಪಡಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಸಾರ್ವಜನಿಕ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ, ಹಲವು ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೊರಟು 2.20ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ತಲುಪುವರು. ಅಲ್ಲಿಂದ ಹೆಲಿಕಾಪ್ಟರ್​ನಲ್ಲಿ ಸಾರ್ವಜನಿಕ ಸಮಾರಂಭದ ಸ್ಥಳಕ್ಕೆ ತೆರಳಿ, ಮಧ್ಯಾಹ್ನ 3.15ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮೂರನೇ ಕಂತಿನ ನೆರವನ್ನು ದೇಶದ ರೈತರ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಹೆಲಿಕಾಪ್ಟರ್​ನಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಂಜೆ 5.10ಕ್ಕೆ ವಾಯುಪಡೆ ವಿಶೇಷ ವಿಮಾನದಲ್ಲಿ ದೆಹಲಿಗೆ ಮರಳಲಿದ್ದಾರೆ.
ವಿಶಿಷ್ಟ, ವಿಶೇಷ:ವಾಯುಪಡೆ ವಿಶೇಷ ವಿಮಾನದಲ್ಲಿ ಬಂದಿಳಿಯವ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿರುವುದು ವೈಶಿಷ್ಟ್ಯಪೂರ್ಣವಾಗಿದೆ. ಬಿ.ಎಸ್. ಯಡಿಯೂರಪ್ಪ ಜನ್ಮದಿನ (ಫೆ.27)ರಂದು ಅವರ ಮಹತ್ವಾಕಾಂಕ್ಷೆಯ ಭವ್ಯ ವಿಮಾನ ನಿಲ್ದಾಣ ಜನ ಸೇವೆಗೆ ಅರ್ಪಣೆಯಾಗುತ್ತಿದೆ. ಜತೆಗೆ ಸಾರ್ವಜನಿಕ ಸಮಾರಂಭದಲ್ಲಿ ಮೋದಿ ಪಾಲ್ಗೊಳ್ಳಲಿರುವುದು ಮತ್ತೊಂದು ವಿಶೇಷ.
ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

18 ವರ್ಷ ತುಂಬಿದವರಿಗೆಂದೇ ಬಿಬಿಎಂಪಿಯಿಂದ ಜಾಗೃತಿ ಅಭಿಯಾನ: ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 5 =
Remember me
