ಬೆಂಗಳೂರು:ಉಸಿರಾಟದ ತೊಂದರೆ ಇರುವವರ ಮೂಗಿಗೆ ನಾಲ್ಕೈದು ಹನಿ ಲಿಂಬೆರಸ ಹಾಕಿಕೊಳ್ಳುವುದರಿಂದ ಕಫ ಕಡಿಮೆಯಾಗಿ, ಆಕ್ಸಿಜನ್ ಮಟ್ಟ ಹೆಚ್ಚಳವಾಗುತ್ತದೆ ಎಂಬ ಮಾಹಿತಿಯನ್ನು ಡಾ.ವಿಜಯ ಸಂಕೇಶ್ವರ ಅವರು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಇದು ಕರೊನಾ ಸೋಂಕಿತರಿಗೂ ಉಪಯುಕ್ತವಾಗಿರುವ ಬಗ್ಗೆ ನನಗೆ ಹಲವರು ಖಚಿತಪಡಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಾ.ವಿಜಯ ಸಂಕೇಶ್ವರರು ಏನೇ ಹೇಳಿದರೂ, ಅದನ್ನು ಅವರು ಸುಮ್ಮನೆ ಹೇಳುವುದಿಲ್ಲ. ಆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ, ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿರುತ್ತಾರೆ. ತಾವು ಸ್ವತಃ ಪರೀಕ್ಷೆ ಮಾಡದೆ, ಖಚಿತತೆ ಮಾಡಿಕೊಳ್ಳದೆ ಯಾವುದನ್ನೂ ಮಾತನಾಡುವುದಿಲ್ಲ. ಈಗ ಅವರು ಪ್ರಸ್ತಾಪಿಸಿರುವ ಸಂಗತಿ ಬಗ್ಗೆ ನಾನೂ ಗಮನಹರಿಸಿದ್ದೇನೆ ಎಂದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ನನಗೆ ಫೋನ್ ಮಾಡಿದ್ದರು. ಅವರ ಪತ್ನಿ ಸಹ ಡಾ. ವಿಜಯ ಸಂಕೇಶ್ವರ ಅವರು ಹೇಳಿದ ಮಾದರಿಯಲ್ಲಿ ಮೂಗಿಗೆ ಲಿಂಬೆರಸ ಹಾಕಿ ಪರೀಕ್ಷಿಸಿದ್ದಾರೆ. ಕೂಡಲೆ ಅವರಿಗೂ ಕಫ ಕಡಿಮೆಯಾಗಿ ರಿಲೀಫ್ ಸಿಕ್ಕಿದೆ ಎಂದರು. ಮೂಗಿನ ಹೊಳ್ಳೆಗಳಿಗೆ ನಾಲ್ಕೈದು ಹನಿ ಲಿಂಬೆರಸ ಹಾಕಿದ ಅರ್ಧ ಗಂಟೆಯಲ್ಲಿ ಸೋಂಕಿತರಿಗೆ ರಿಲೀಫ್ ಸಿಗುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು. ಎಲ್ಲದಕ್ಕೂ ಇಂಗ್ಲಿಷ್ ಮೆಡಿಷನ್ ಎನ್ನುವುದು ನನ್ನ ವಾದವಲ್ಲ. ನನಗೆ ಭಾರತೀಯ ವೈದ್ಯ ಪದ್ಧತಿ ಬಗ್ಗೆಯೂ ಅಪಾರ ಗೌರವ ಇದೆ. ಆಯುಷ್ ಮತ್ತು ಆಯುರ್ವೆದ ವೈದ್ಯ ಪದ್ಧತಿಯನ್ನು ನಾನು ಗೌರವದಿಂದಲೇ ನೋಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇಶದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಆಯುರ್ವೆದ ಔಷಧದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿರುವುದು ಸಮಯೋಚಿತವಾಗಿದೆ. ಉಸಿರಾಟ ಸಮಸ್ಯೆ ನಿಯಂತ್ರಣಕ್ಕಾಗಿ ಲಿಂಬೆರಸವನ್ನು ಮೂಗಿನಲ್ಲಿ ಹಾಕುವುದರಿಂದ ಕಫ ಕಡಿಮೆಯಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಕರೊನಾ ಪ್ರಾಥಮಿಕ ಹಂತದಲ್ಲಿರುವ ರೋಗಿಗಳು ಲಿಂಬೆ ರಸದಿಂದ ಪ್ರಯೋಜನ ಪಡೆಯಬಹುದು ಎಂದು ಸಂಕೇಶ್ವರ ಹೇಳಿರುವುದು ಅವರಿಗಿರುವ ಜನಪರ ಕಾಳಜಿ ತೋರಿಸುತ್ತದೆ.
|ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಶ್ರೀಶೈಲ ಜಗದ್ಗುರುಗಳು

ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಲಿಂಬೆರಸ ಉತ್ತಮ ಎಂಬ ಮಾಹಿತಿಯನ್ನು ಡಾ. ವಿಜಯ ಸಂಕೇಶ್ವರ ಅವರು ತಿಳಿಸಿ ಕೊಟ್ಟಿದ್ದಾರೆ. ಎಲ್ಲರೂ ಲಿಂಬೆಹಣ್ಣು ಬಳಸಬೇಕು. ಕಷಾಯ ಸೇವಿಸಬೇಕು. ದೇವರ ಸ್ಮರಣೆ, ಶಿವನ ಮಹಾಮಂತ್ರ ಪಠಿಸುವ ಮೂಲಕ ಕರೊನಾದಿಂದ ಮುಕ್ತಿ ಹೊಂದಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು.
|ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿಮುಂಡರಗಿ


ಡಾ. ವಿಜಯ ಸಂಕೇಶ್ವರ ಅವರೊಬ್ಬ ಸಾಹಸಿ, ಸಾಮಾಜಿಕ ಕಳಕಳಿಯುಳ್ಳ ಚಿಂತಕರು. ಉಸಿರಾಟ ಸಮಸ್ಯೆ ನಿವಾರಣೆಗೆ ಮನೆಮದ್ದಾಗಿ ಉಪಯೋಗಿಸುವ ಲಿಂಬೆಹಣ್ಣನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ನಾಲ್ಕು ಹನಿಗಳನ್ನು ಹಾಕುವ ಮೂಲಕ ಚಂದ್ರನಾಡಿ, ಶೀತನಾಡಿಯಲ್ಲಿರುವ ಪಿತ್ತರೂಪದ ಲೋಳೆದ್ರವವನ್ನು ಹೊರಹಾಕುವ ಸುಲಭ ಉಪಾಯವನ್ನು ತಿಳಿಸಿದ್ದು ಚೇತೋಹಾರಿ. ಕೋವಿಡ್​ಗೆ ತೆಗೆದುಕೊಳ್ಳುವ ಚಿಕಿತ್ಸೆ ಜತೆಗೆ ಬಿಸಿನೀರು ಕುಡಿಯುವುದು, ಹಬೆಯನ್ನು ತೆಗೆದುಕೊಳ್ಳುವುದು, ಪ್ರಾಣಾಯಾಮ ಮಾಡುವ ಮೂಲಕ ನಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಮಹತ್ವದ ಮಾಹಿತಿಯನ್ನು ಜನತೆಗೆ ಅರ್ಥವಾಗುವಂತೆ ನೀಡಿದ್ದು ಅವರ ಅಪಾರ ಕಾಳಜಿಯನ್ನು ತೋರಿಸುತ್ತದೆ.
|ಶ್ರೀ ಚನ್ನವೀರ ದೇವರುಕುಂಟೋಜಿ ಸಂಸ್ಥಾನ ಹಿರೇಮಠ ಕುಂಟೋಜಿ, ಮುದ್ದೇಬಿಹಾಳ

ಪಾವಗಡ:ಹೆಲ್ಪ್ ಸೊಸೈಟಿ ಮತ್ತು ಚಿನ್ಮಯ ಸಂಸ್ಥೆ ಹಾಗೂ ಸರ್ವಧರ್ಮ ಶಾಂತಿ ಪೀಠದ ವತಿಯಿಂದ ಲಿಂಬೆರಸ ಪ್ರಯೋಗಿಸುವ ಅಭಿಯಾನ ಸೋಮವಾರ ಆರಂಭವಾಗಿದೆ. ‘ವಿಜಯವಾಣಿ’ಯಲ್ಲಿ ಪ್ರಕಟವಾದ ‘ಕರೊನಾ ನಿಯಂತ್ರಣಕ್ಕೆ ಲಿಂಬೆರಸ ರಾಮಬಾಣ’ ವರದಿಯಿಂದ ಸ್ಪೂರ್ತಿಗೊಂಡು ಪಟ್ಟಣದ ಕನಕಗುರು ಪೀಠ ವಸತಿನಿಲಯದಲ್ಲಿ ಸೋಮವಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸರ್ವಧರ್ಮ ಆಶ್ರಮ ಪೀಠಾಧ್ಯಕ್ಷ ಸಿದ್ದಾಪುರದ ರಾಮಮೂರ್ತಿ ಸ್ವಾಮೀಜಿ ಮಾತನಾಡಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ರಾಜ್ಯಕ್ಕೆ ದಿವ್ಯೌಷಧದ ಸಂದೇಶ ರವಾನಿಸಿದ್ದಾರೆ. ಆರ್ಯುವೇದದಲ್ಲಿ ಲಿಂಬೆಹಣ್ಣಿಗೆ ಪ್ರಾಮುಖ್ಯತೆ ಇದೆ. ಲಿಂಬೆಹಣ್ಣಿನ ಬೀಜ ತಿನ್ನುವುದರಿಂದ ವಿಷಕಾರಿ ಹಾವು ಕಚ್ಚಿದರೂ ಏನೂ ಆಗುವುದಿಲ್ಲ. ಈ ಹಣ್ಣಿನ ರಸ ಮೂಗಿನಲ್ಲಿ ಹಾಕುವುದರಿಂದ ಎದೆಯ ಭಾಗದಲ್ಲಿರುವ ಕಫ ಮತ್ತು ವಿಷಕಾರಿ ಅಂಶ ಹೊರಬರಲಿದೆ ಎಂಬ ಮಾಹಿತಿ ನೀಡಿದ ಡಾ. ಸಂಕೇಶ್ವರ ಅವರಿಗೆ ಈ ಮೂಲಕ ಧನ್ಯವಾದ ತಿಳಿಸುವೆ ಎಂದರು. ಇದೊಂದು ಉತ್ತಮ ಅನುಭವವಾಗಿದೆ, ಯಾವುದೇ ರೀತಿಯ ಅಡ್ಡಪರಿಣಾಮ ಉಂಟಾಗಿಲ್ಲ ಎಂದು ಕಾಂಗ್ರೆಸ್​ನ ರಾಜ್ಯ ಒಬಿಸಿ ಪ್ರಧಾನ ಕಾರ್ಯದರ್ಶಿ ಮೈಲಾರರೆಡ್ಡಿ ‘ವಿಜಯವಾಣಿ’ಗೆ ಧನ್ಯವಾದ ಸಲ್ಲಿಸಿದರು. ಸುಮಾರು 50ಕ್ಕೂ ಅಧಿಕ ಸಾರ್ವಜನಿಕರು ಮತ್ತು ಆಟೋಚಾಲಕರು ಅಭಿಯಾನದಲ್ಲಿ ಭಾಗವಹಿಸಿದ್ದರು.

ಧಾರವಾಡ: ಉಸಿರಾಟದ ಸಮಸ್ಯೆ ಪರಿಹಾರಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ತಿಳಿಸಿದ ‘ಲಿಂಬೆರಸ ರಾಮಬಾಣ’ ಎಂಬ ಸುಲಭ ಉಪಾಯವನ್ನು ಮದುವೆ ಮಂಟಪದಲ್ಲಿ ಅನುಸರಿಸಿದ ವಿದ್ಯಮಾನ ಸೋಮವಾರ ನಡೆಯಿತು. ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಏರ್ಪಡಿಸಿದ್ದ 3 ಜೋಡಿಗಳ ವಿವಾಹ ಕಾರ್ಯಕ್ರಮದಲ್ಲಿ ವಧು- ವರರು ಸೇರಿ ಬೀಗರು ಹಾಗೂ ಬಂಧುಗಳಿಗೆ ಗ್ರಾಮದ ಜಾನಪದ ಹಾಗೂ ಭಜನಾ ಪದ ಗಾಯಕ ರಮೇಶ ಕುರುಬಗಟ್ಟಿ ಎಂಬುವರು ಮೂಗಿಗೆ ಎರಡೆರಡು ಹನಿ ಲಿಂಬೆರಸ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಡಾ. ವಿಜಯ ಸಂಕೇಶ್ವರರ ಅಭಿಮಾನಿಯೂ ಆಗಿರುವ ರಮೇಶ ಕುರುಬಗಟ್ಟಿ, ಡಾ. ಸಂಕೇಶ್ವರರ ಸಾಧನೆ ಕುರಿತು ಭಜನಾ ಪದ ರಚಿಸಿ ಹಾಡಿದ್ದಾರೆ.






ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
