ವಿಜಯನಗರ:ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳ ಜತೆಗೆ ಇನ್ನಿತರ ಮಾಹಿತಿಗಳನ್ನು ನಾಮಪತ್ರದಲ್ಲಿ ಘೋಷಿಸಿಕೊಳ್ಳುತ್ತಿದ್ದಾರೆ. ಇದೀಗ ವಿಜಯನಗರ ಕ್ಷೇತ್ರದ ಆಮ್​ ಆದ್ಮಿ ಪಾರ್ಟಿ ಅಭ್ಯರ್ಥಿ ಆಸ್ತಿ ವಿವರದ ಜತೆ ಇಬ್ಬರು ಪತ್ನಿಯರು ಇರುವುದನ್ನು ಧೃಡಪಡಿಸಿಕೊಂಡಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ದಾಸರ ಶಂಕರ್ ಅವರಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿರುವ ಬಗ್ಗೆ ಶಂಕರ್​ ಉಲ್ಲೇಖಿಸಿದ್ದಾರೆ. ನೋಟರಿ ದೃಢಪಡಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಮಾಹಿತಿ ಇದೆ.
ಇದನ್ನೂ ಓದಿ:ಅನ್ನ ಸಾಂಬಾರ್‌ಗೆ ಗಾಜಿನ ಚೂರು ಹಾಕುತ್ತಿದ್ದ ಭೂಪ
ಎಎಪಿ ಅಭ್ಯರ್ಥಿಯಾಗಿ ದಾಸರ ಶಂಕರ್​ ನಾಮಪತ್ರ ಸಲ್ಲಿಸಿದ್ದಾರೆ. ಎಎಪಿಯು ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಒಟ್ಟು 224 ಸ್ಥಾನಗಳನ್ನು ಕರ್ನಾಟಕ ವಿಧಾನಸಭೆ ಹೊಂದಿದ್ದು, ಸರ್ಕಾರ ರಚನೆ ಮಾಡಲು 113 ಬಹುಮತ ಬೇಕಿದೆ.(ದಿಗ್ವಿಜಯ ನ್ಯೂಸ್​)
ಕರ್ನಾಟಕ ವಿಧಾನಸಭಾ ಚುನಾವಣೆ: ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ಕಾಂಗ್ರೆಸ್​ ಐದನೇ, ಜೆಡಿಎಸ್​ ಮೂರನೇ ಪಟ್ಟಿ ಬೆನ್ನಿಗೇ ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ!

ಪುತ್ರನ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ನಟಿ ಶ್ರುತಿ ಕೆನ್ನೆ ಹಿಂಡಿದ ಮಾಜಿ ಸಿಎಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
