ವಿಜಯನಗರ:ಪ್ರೀತಿಸಿ, ನಂಬಿಸಿ ಮದುವೆಯಾದ ಬಳಿಕ ನಡು ನೀರಲ್ಲಿ ಕೈಬಿಟ್ಟ ಪತಿರಾಯನಿಗಾಗಿ ಪತ್ನಿ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ವಿಜನಗರದಲ್ಲಿ ಬೆಳಕಿಗೆ ಬಂದಿದೆ.
ತ್ರಿವೇಣಿ ಎಂಬಾಕೆ ವೈದ್ಯ ಗಿರೀಶ್​ ಅವರ ಕ್ಲಿನಿಕ್​ನಲ್ಲಿ ನರ್ಸ್ ಆಗಿದ್ದಳು. ಆಕೆಯನ್ನು ಪ್ರೀತಿಸಿ, ಇಷ್ಟಪಟ್ಟು ಗಿರೀಶ್​ ಮದುವೆಯಾಗಿದ್ದಾರಂತೆ. ಒಂದು ಮಗು ಇದೆ. ಆದರೀಗ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಎಂಎಸ್ ವೈದ್ಯ ಗಿರೀಶ್​ ಹಾಗೂ ಅವರ ಕುಟುಂಬದ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ತ್ರಿವೇಣಿ, ನನಗೆ ನನ್ನ ಗಂಡ ಬೇಕು ಅಂತಾ ಕಣ್ಣೀರಿಟ್ಟಿದ್ದಾರೆ. ಬೇರೆ ಜಾತಿಯ ಮದುವೆ ಆಗಿದ್ದಕ್ಕೆ ವೈದ್ಯರ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ನಿರತಂರ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ತ್ರಿವೇಣಿ ಆರೋಪ ಮಾಡಿದ್ದಾರೆ.
ಕಳೆದ ಆರೇಳು ವರ್ಷದ ಹಿಂದೆ ತ್ರಿವೇಣಿ ಮತ್ತು ಗಿರೀಶ್​ ಅಂತರ್ಜಾತಿ ವಿವಾಹ ಆಗಿದ್ದಾರೆ. ಮನೆಯಲ್ಲಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಹಲವಾಗಲು ಪೊಲೀಸ್ ಠಾಣೆಗೆ ತ್ರಿವೇಣಿ ದೂರು ದಾಖಲಿಸಿದ್ದರು. ಆದರೆ, ನ್ಯಾಯ ಸಿಗದಿದ್ದಕ್ಕೆ ಮಗುವಿನ ಸಮೇತ ವಿಜಯನಗರ ಎಸ್.ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ತ್ರಿವೇಣಿಯವರ ನೋವನ್ನು ಆಲಿಸಿದ ಎಸ್ಪಿ ಶ್ರೀಹರಿಬಾಬು ಕೂಲಂಕುಷವಾಗಿ ಪರಿಶೀಲಿಸಿ FIR ದಾಖಲಿಸುವಂತೆ ಹಲವಾಗಲು ಪಿಎಸ್ಐಗೆ ಸೂಚನೆ ನೀಡಿದ್ದಾರೆ.
ಎಸ್ಪಿ ಸೂಚನೆ ಮೇರೆಗೆ ಇದೀಗ ವೈದ್ಯ ಗಿರೀಶ್ ಜಾಗೂ ಕುಟುಂಬಸ್ಥರ ಮೇಲೆ FIR ದಾಖಲಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ವೈದ್ಯ ಗಿರೀಶ್ ಮತ್ತು ಆತನ ಇಡೀ ಕುಟುಂಬ ನಾಪತ್ತೆಯಾಗಿದೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಅಷ್ಟೊಂದು ಹಣ ಇಟ್ಕೊಂಡು ಏನು ಮಾಡ್ತೀಯಾ ನಮಗೊಂದಿಷ್ಟು ಕೊಡು! ಸಿಐಡಿ ಡಿವೈಎಸ್ಪಿ ವಿರುದ್ಧ ಪಾಟೀಲ್ ವಿಡಿಯೋ ಬಾಂಬ್​​

ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳ ಸಂಕಷ್ಟ: ಅರವತ್ತು ದಿನಗಳ ಗಡುವು, ಅಡಕತ್ತರಿಯಲ್ಲಿ ಟೆಕ್ಕಿಗಳು

ಹೊಸ ಕಾರುಗಳನ್ನು ಸಾಗಿಸುವಾಗ ಅಪಘಾತ: ಡಿಕ್ಕಿಯ ರಭಸಕ್ಕೆ ಲಾರಿಯಿಂದ ಸೇತುವೆ ಕೆಳಗೆ ಬಿದ್ದ ಚಾಲಕ ಬದುಕಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
