ಬೆಂಗಳೂರು:ಬಹುನಿರೀಕ್ಷಿತ ‘ವಿಜಯಾನಂದ’ಚಿತ್ರದ ಟೀಸರ್​ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಟೀಸರ್ ನೋಡಿ ಜನ ಮೆಚ್ಚಿಕೊಂಡಿದ್ದು, ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಐದು ದಿನಗಳಲ್ಲೇ 1.35 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜನ್ಮದಿನದ ಪ್ರಯುಕ್ತ ಆಗಸ್ಟ್ 2ರಂದು ‘ವಿಜಯಾನಂದ’ ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಿತ್ತು. ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ತಯಾರಾಗುತ್ತಿರುವ ‘ವಿಜಯಾನಂದ’ ಚಿತ್ರವನ್ನು ‘ಟ್ರಂಕ್’ ಖ್ಯಾತಿಯ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ನಟ ನಿಹಾಲ್, ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸಿದ್ದು, ಅವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದಾರೆ. ವಿಜಯ ಸಂಕೇಶ್ವರ ಅವರ ಮಾರ್ಗದರ್ಶಕರಾಗಿ ರವಿಚಂದ್ರನ್ ಅವರ ಪಾತ್ರಗಳು ಟೀಸರ್​ನಲ್ಲಿ ಗಮನ ಸೆಳೆಯುತ್ತವೆ.
ಸದ್ಯ ಕನ್ನಡದಲ್ಲಿ 52 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ವೀಕ್ಷಿಸಿದ್ದು. ತೆಲುಗಿನಲ್ಲಿ 30 ಲಕ್ಷ, ತಮಿಳಿನಲ್ಲಿ 24 ಲಕ್ಷ ಹಾಗೂ ಮಲಯಾಳಂನಲ್ಲಿ 27 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ವೀಕ್ಷಿಸಿದ್ದಾರೆ. ನಾಲ್ಕೂ ಭಾಷೆಗಳಿಂದ ಬರೋಬ್ಬರಿ 1.92 ಲಕ್ಷ ಮಂದಿ ಲೈಕ್ ಮಾಡಿರುವುದು ವಿಶೇಷ. ವಿಆರ್​ಎಲ್ ಪ್ರೊಡಕ್ಷನ್ಸ್ ನಡಿ ಡಾ. ಆನಂದ ಸಂಕೇಶ್ವರ ಅವರು ನಿರ್ವಿುಸುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ನಿಹಾಲ್, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್ ಮುಂತಾದವರು ನಟಿಸಿದ್ದು, ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದಾರೆ.
ಕಿಚ್ಚ ಸುದೀಪ್ ಸಹ ‘ವಿಜಯಾನಂದ’ ಟೀಸರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ನಲ್ಲಿ ಟೀಸರ್ ಲಿಂಕ್ ಹಾಕಿ ಟ್ವೀಟ್ ಮಾಡಿರುವ ನಟ ಸುದೀಪ್, ‘ಕಠಿಣ ಪರಿಶ್ರಮ ಮತ್ತು ಸ್ಥಿರತೆ ಉತ್ತಮ ಪ್ರತಿಫಲವನ್ನೇ ನೀಡುತ್ತದೆ. ಪ್ರತಿಯೊಬ್ಬರಿಗೂ ಡಾ. ವಿಜಯ ಸಂಕೇಶ್ವರ ಅವರು ಸ್ಪೂರ್ತಿ. ಬೇರೆಯವರಂತೆ ಯೋಚಿಸದೇ ಸ್ವತಂತ್ರವಾಗಿ ಆಲೋಚಿಸುವ ಸಾಧಕನ ಕಥೆ ಮತ್ತು ಪಯಣ. ಚಿತ್ರತಂಡದ ಪ್ರತಿಯೊಬ್ಬರಿಗೂ ಆಲ್ ದಿ ಬೆಸ್ಟ್’ ಎಂದು ಬರೆದುಕೊಂಡಿದ್ದಾರೆ. ನಟರಾದ ರಮೇಶ್ ಅರವಿಂದ್, ‘ನೆನಪಿರಲಿ’ ಪ್ರೇಮ್ ಅಜೇಯ್ ರಾವ್, ನಟಿ ಶರ್ವಿುಳಾ ಮಾಂಡ್ರೆ ಮತ್ತು ನಿರ್ದೇಶಕ ಚೇತನ್ ಕುಮಾರ್ ಸೇರಿದಂತೆ ಹಲವಾರು ಮಂದಿ ಸೆಲೆಬ್ರಿಟಿಗಳು ‘ವಿಜಯಾನಂದ’ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.
42 ಸಾಧಕರಿಗೆ ವಿಜಯರತ್ನ ಪ್ರಶಸ್ತಿ; ಬೆಂಗಳೂರಿನಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್ ಗೌರವ ಪ್ರದಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
