ಬಾಗಲಕೋಟೆ:ನಿಮ್ಮ ಆಶೀರ್ವಾದ ಬೇಕು ಸರ್… ಎನ್ನುತ್ತ ಮಾಜಿ ಸಿಎಂ ಕಾಲಿಗೆ ಬಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ನನಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೊಡಿಸಿ ಎಂದು ಕೋರಿದರು.
ಬಾದಾಮಿಯ ಖಾಸಗಿ ಹೋಟೆಲ್​ ಬಳಿ ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಗರ ಜೊತೆ ಕಾಶಪ್ಪನವರ್ ಭೇಟಿ ಮಾಡಿದರು. ಈ ವೇಳೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕಾಶಪ್ಪನವರ್​ಗೆ ಕೊಡಿಸಬೇಕು. ನೀವು ಹೇಳಿದ್ರೆ ಆಗುತ್ತೆ ಸರ್​ ಎನ್ನುತ್ತ ಅಭಿಮಾನಿಗಳು ಕೈ ಮುಗಿದು ಕೇಳಿಕೊಂಡರು.
ನನ್ನ ಆಶೀರ್ವಾದ ಯಾವಾಗಲೂ ಇರುತ್ತೆ ಎಂದು ಕಾಶಪ್ಪನವರ್​ರ ಬೆನ್ನು ತಟ್ಟಿದ ಸಿದ್ದರಾಮಯ್ಯ, ನಾನು ಸಹಕಾರಿ ಕ್ಷೇತ್ರಕ್ಕೆ ಈವರೆಗೂ ಕೈಹಾಕಿಲ್ಲ. ನಾನು ಹೇಳೋದು ಹೇಳ್ತೇನೆ ಎಂದರು.
ನಾನು ಯಾವಾಗಲೂ ಇವನ(ಕಾಶಪ್ಪನವರ್) ಪರವಾಗಿಯೇ ಇರೋದು ಎಂದ ಸಿದ್ದರಾಮಯ್ಯ, ಕಾಶಪ್ಪನವರ್​ರ ಬೆಂಬಲಿಗರಿಗೆ ಅಭಯ ನೀಡಿದರು. ಇತ್ತೀಚಿಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಮಬಲ ಹೋರಾಟದಲ್ಲಿ ಕಾಶಪ್ಪನವರ್​ರ ಲಾಟರಿ ಮೂಲಕ ರೋಚಕ ಗೆಲುವು ಪಡೆದಿದ್ದರು.
ಒಂದೇ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಬಿಎಸ್​ವೈ-ಸಿದ್ದರಾಮಯ್ಯ!

ಕರ್ತವ್ಯನಿರತ ಪಿಎಸ್‌ಐ ಮೇಲೆ ಹಾಡಹಗಲೇ ಮಾರಣಾಂತಿಕ ಹಲ್ಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
