ಹುಬ್ಬಳ್ಳಿ:ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ನಾಳೆ (ಡಿ. 9) ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಮುನ್ನಾ ದಿನವಾದ ಗುರುವಾರ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿದರು.
ಬೈಕ್​ ರ್ಯಾಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಗೋವಿಂದ ಜೋಶಿ ಚಾಲನೆ ನೀಡಿದರು. ಕನ್ನಡ ಧ್ವಜ ಹಿಡಿದು ರ‍್ಯಾಲಿಗೆ ಚಾಲನೆ ನೀಡುತ್ತಿದ್ದಂತೆ ವಿಜಯಾನಂದ ಸಿನಿಮಾದ ಪೋಸ್ಟರ್​ ಹಿಡಿದು ಅಭಿಮಾನಿಗಳು ಬೈಕ್​ ಏರಿದರು. ಚಿತ್ರದ ಯಶಸ್ಸಿಗೆ ಹಾರೈಸಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಹೊರಟ ಬೈಕ್ ರ‍್ಯಾಲಿಗೆ ಡೊಳ್ಳುಕುಣಿತ ಕಲಾವಿದರು ಸಾಥ್​ ನೀಡಿದರು.
ಡೊಳ್ಳು ವಾದ್ಯಕ್ಕೆ ಮನಸೋತ ಹು-ಧಾ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮತ್ತು ಡಾ.ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಡಾ.ರಾಜ್​ಕುಮಾರ್​ ಅಭಿಮಾನಿಗಳ ಒಕ್ಕೂಟ ಹಾಗೂ ಪ್ರಲ್ಹಾದ ಜೋಶಿ ಅಭಿಮಾನಿಗಳ ಸಂಘದ ಸದಸ್ಯರೂ ಪಾಲ್ಗೊಂಡಿದ್ದರು.
ಹಾರೈಸಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಹೊರಟ ಬೈಕ್​ ರ‍್ಯಾಲಿಯು ಕೇಶ್ವಾಪುರ, ಸರ್ವೋದಯ ಸರ್ಕಲ್, ಸ್ಟೇಷನ್ ರೋಡ್, ಕೋಯಿನ್ ರೋಡ್, ಕೊಪ್ಪಿಕರ ರೋಡ್, ಲ್ಯಾಮಿಂಗ್ಟನ್ ರಸ್ತೆ, ಹೊಸೂರ, ವಿದ್ಯಾನಗರ ಮಾರ್ಗವಾಗಿ ಬಿವಿಬಿ ಕಾಲೇಜು ತಲುಪಿತು.
ದಿಲ್ಲಿಯಲ್ಲಿ ಗೆದ್ದು ಬೀಗಿದ್ದ ಆಪ್​ಗೆ ಗುಜರಾತ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಹಿನ್ನಡೆ

ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
