ಬೆಂಗಳೂರು:ಪ್ರತಿ ಹಂತದಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ವಿಆರ್​​ಎಲ್​ ಸಮೂಹ ಸಂಸ್ಥೆಗಳ ಚೇರ್​​ಮನ್​ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ಡಿ.9ರಂದು ದೇಶಾದ್ಯಂತ ತೆರೆ ಕಾಣಲಿದ್ದು, ಶನಿವಾರ(ನ.19) ರಂದು ಟ್ರೇಲರ್​ ಬಿಡುಗಡೆಯಾಗಲಿದೆ.
ನ.6ರಂದು ಬಿಡುಗಡೆಯಾದ ವಿಜಯಾನಂದ ಚಿತ್ರದ ಮೊದಲ ‘ಹಾಗೆ ಆದ ಆಲಿಂಗನ…’ ಹಾಡಿಗೆ ಅಭಿಮಾನಿಗಳು ಮನಸೋತಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಹಾಡು ವೈರಲ್​ ಆಗಿದೆ. 10 ದಿನದಲ್ಲಿ 2 ಕೋಟಿಗೂ ಅಧಿಕ ಜನರು ಹಾಡನ್ನು ವೀಕ್ಷಿಸಿರುವುದು ವಿಶೇಷ. ಸ್ಟಾರ್​ಕಾಸ್ಟ್, ಫಸ್ಟ್ ಲುಕ್ ಪೋಸ್ಟರ್, ಟೀಸರ್, ಸಾಂಗ್​ ರಿಲೀಸ್​… ಹೀಗೆ ಪ್ರತಿ ಹಂತದಲ್ಲೂ ಅಭಿಮಾನಿಗಳ ಮನ ಸೆಳೆದಿದೆ.
ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ಸಂಯೋಜಿಸಿರುವ ಹಾಡಿಗೆ ‘ಹಾಗೆ ಆದ ಆಲಿಂಗನ…’ ಪಂಚಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ನಾಯಕ, ನಾಯಕಿಯ ನಡುವಿನ ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಬೇಲೂರು, ಹಳೇಬೀಡು, ಚಿಕ್ಕಮಗಳೂರು ಸೇರಿದಂತೆ 10ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಹಾಡಿನಲ್ಲಿ ಛಾಯಾಗ್ರಾಹಕ ಕೀರ್ತನ್ ಪೂಜಾರಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ.
ವಿಆರ್​ಎಲ್​ ಪ್ರೊಡಕ್ಷನ್ಸ್​ ಮೂಲಕ ಡಾ.ಆನಂದ ಸಂಕೇಶ್ವರ ನಿರ್ಮಿಸಿರುವ “ವಿಜಯಾನಂದ’ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಿಹಾಲ್, ಅವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಅವರ ಗುರುಗಳ ಪಾತ್ರದಲ್ಲಿ ರವಿಚಂದ್ರನ್, ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ, ಶ್ರೀಮತಿ ವಾಣಿ ಸಂಕೇಶ್ವರ ಪಾತ್ರದಲ್ಲಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಚಿತ್ರದ ಟೀಸರ್ ಇದೇ ತಿಂಗಳ 19ರಂದು ಬಿಡುಗಡೆಯಾಗಲಿದೆ. ಡಿ. 4ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಡಿ.9ರಂದು ದೇಶಾದ್ಯಂತ 1000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ವಿಜಯಾನಂದ ಸಿನಿಮಾವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಕೋಟ್ಯಂರತ ಮಂದಿ ಕಾತರದಿಂದ ಕಾಯುತ್ತಿದ್ದಾರೆ.
‘ಕೆಜಿಎಫ್’​, ‘ಕಾಂತಾರ’ದಂತೆ ‘ವಿಜಯಾನಂದ’ ಕೂಡ ಪ್ಯಾನ್​ ಇಂಡಿಯಾ ಸದ್ದು ಮಾಡಲಿ: ಹರ್ಷಿಕಾ ಪೂಣಚ್ಚ

ನಿಹಾಲ್​ ಬಹಳ ಸಮರ್ಥವಾಗಿ ನನ್ನ ಪಾತ್ರವನ್ನು ತೆರೆ ಮೇಲೆ ತಂದಿದ್ದಾರೆ: ಡಾ. ವಿಜಯ ಸಂಕೇಶ್ವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 8 =
Remember me
