ವಿಜಯವಾಣಿ ಸುದ್ದಿಜಾಲ ಗದಗ
ದೇಶದಲ್ಲಿಯೇ ಅತೀದೊಡ್ಡ ಖಾಸಗಿ ಬಸ್ ಸಂಸ್ಥೆ ವಿಜಯಾನಂದ ಟ್ರಾವೆಲ್ಸ್ ಗ್ರಾಹಕರ ಹಿತದೃಷ್ಟಿಯಿಂದ ನೂರಾರು ವಿಶೇಷ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಬಸ್​ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಮತ್ತು ಸಂಸ್ಥೆಯ ಬಸ್​ಗಳಲ್ಲಿ ಪ್ರಯಾಣಿಕರು ಹತ್ತುವ ಸ್ಥಳಗಳಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮಂಗಳವಾರ ರಾತ್ರಿ ಗದಗದಲ್ಲಿ ಹುಬ್ಬಳ್ಳಿಯಿಂದ ಹೈದರಾಬಾದ್​ಗೆ ಹೊರಟ ವಿಜಯಾನಂದ ಟ್ರಾವೆಲ್ಸ್ ಬಸ್​ನಲ್ಲಿ ಹಿಂದು ಮಹಿಳೆ ಕಾಯ್ದಿರಿಸಿದ ಸೀಟ್​ನಲ್ಲಿ ಯುವಕರು ಕುಳಿತು ಗಲಾಟೆ ಮಾಡಿದ್ದರು. ಈ ವೇಳೆ ಸಂಸ್ಥೆಯು ಮಹಿಳೆಗೆ ಸುರಕ್ಷತೆ ಕಲ್ಪಿಸಿ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮವಾಗುವಂತೆ ನಿಗಾ ವಹಿಸಿದೆ.
ವಿಜಯಾನಂದ ಟ್ರಾವೆಲ್ಸ್​ನ ಬಸ್​ಗಳಲ್ಲಿ ಮಹಿಳೆಯರಿಗೆ ಕಾಯ್ದಿರಿಸಿದ ಸೀಟ್​ಗಳ ಪಕ್ಕದಲ್ಲಿ ಮಹಿಳೆಯರೇ ಕುಳಿತುಕೊಳ್ಳಬೇಕು. ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಿದ ಸ್ಲೀಪರ್ ಸೀಟ್ ಪಕ್ಕ ಮಹಿಳೆಯರು ಮಾತ್ರ ಪ್ರಯಾಣಿಸಲು ಅವಕಾಶ ಎನ್ನುವ ನಿಯಮವಿದೆ. ಒಂದು ಸೀಟಿನ ಆದಾಯ ಕಡಿಮೆಯಾದರೂ ಪರವಾಗಿಲ್ಲ. ಮಹಿಳೆಯರನ್ನು ಬಿಟ್ಟು ಪುರುಷರಿಗೆ ಅಂತಹ ಸೀಟ್​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ.
ಸಂಸ್ಥೆಯ ಈ ನಿಯಮವು ಕಾನೂನಿನ ಪ್ರಕಾರ ನೂರಕ್ಕೆ ನೂರರಷ್ಟು ಸರಿ ಇದ್ದರೂ ಗದಗದಲ್ಲಿ ಯುವಕರು ಮಹಿಳೆಗೆ ಕೀಟಲೆ ಮಾಡಿದಾಗ ಸಂಸ್ಥೆಯ ಸಿಬ್ಬಂದಿ ಮತ್ತು ಸಹಪ್ರಯಾಣಿಕರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಸ್​ನಲ್ಲಿ ಸೀಟು ಬಿಟ್ಟು ಕೊಡುವ ವಿಚಾರದಲ್ಲಿ ಮಹಿಳೆಯೊಂದಿಗೆ ಗಲಾಟೆ ನಡೆಸಿದ 15 ಜನರನ್ನು ಗದಗ ಶಹರ ಠಾಣೆಯ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಹುಬ್ಬಳ್ಳಿ ಬಂಕಾಪುರ ಚೌಕ್ ನಿವಾಸಿಗಳಾದ ಮಹಮ್ಮದಯೂನುಸ್ ಮುನ್ನಾಸಾಬ್ ಮುದಗಲ್(20), ಮಹಮ್ಮದಗೌಸ್ ರಹೀಮಸಾಬ್ ಶಿರಹಟ್ಟಿ(20), ಮಹಮ್ಮದ್​ಸಾಧಿಕ್ ಜಾಫರಸಾಬ್ ಶೇಖಬಡೆ (20) ವಿರುದ್ಧ ಸೆಕ್ಷನ್ 110 ಅಡಿ ಪ್ರಕರಣ ದಾಖಲಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ಮೂಲಕ ಮಹಿಳಾ ಪ್ರಯಾಣಿಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಮಹಿಳಾ ಸುಕರ್ಷತೆಗೆ ವಿಜಯಾನಂದ ಟ್ರಾವೆಲ್ಸ್ ಸಿಬ್ಬಂದಿ ಆದ್ಯತೆ ನೀಡಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಸಂಸ್ಥೆಯ ಹಿರಿಯ ಆಡಳಿತ ವರ್ಗ ತುರ್ತು ಸಭೆ ನಡೆಸಿ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಸರ್ಕಾರಿ ಬಸ್ ಆಗಲಿ, ಖಾಸಗಿ ಬಸ್ ಆಗಲಿ ಪ್ರಯಾಣಿಕರ ಸುರಕ್ಷತೆಗೆ ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಇಂತಹ ನಿಯಮವನ್ನು ಪಾಲಿಸಬೇಕಿದೆ.
ಘಟನೆಯ ವಿವರ: ಹುಬ್ಬಳ್ಳಿಯಿಂದ ಹೈದರಾಬಾದ್​ಗೆ ಹೊರಟಿದ್ದ ವಿಜಯಾನಂದ ಟ್ರಾವೆಲ್ಸ್ ಬಸ್ ಗದಗ ನಗರಕ್ಕೆ ಬುಧವಾರ ಬೆಳಗಿನ ಜಾವ 1.30ಕ್ಕೆ ತಲುಪಿದೆ. 15 ಪ್ರಯಾಣಿಕರ ಗುಂಪೊಂದು ಹೈದರಾಬಾದ್​ಗೆ ಹೊರಟಿತ್ತು. ಸ್ಥಳ ಕಾಯ್ದಿರಿಸಿದ ಮಹಿಳೆಯೊಬ್ಬರು ಗದಗದಲ್ಲಿ ಬಸ್ ಹತ್ತಿದ್ದಾರೆ. ಆದರೆ, ಕಾಯ್ದಿರಿಸಿದ ಸ್ಥಳದಲ್ಲಿ ಯುವಕರು ಮಲಗಿದ್ದನ್ನು ಕಂಡ ಮಹಿಳೆ ತಮ್ಮ ಸೀಟ್​ಗೆ ತೆರಳುವಂತೆ ಯುವಕರಿಗೆ ಹೇಳಿದ್ದಾರೆ. ಆದರೆ, ಇದಕ್ಕೊಪ್ಪದ ಅವರು, ಡಬಲ್ ಸೀಟ್ ಇರುವ ಕಾರಣ ಇಲ್ಲೇ ಮಲಗುತ್ತೇನೆ ಎಂದು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳಾ ಸುರಕ್ಷತೆ ದೃಷ್ಟಿಯಿಂದ ಟ್ರಾವೆಲ್ಸ್ ಸಿಬ್ಬಂದಿ ಯುವಕರಿಗೆ ತಿಳಿಹೇಳಿದ್ದಾರೆ. ಆದರೂ ಯುವಕರು ಗಲಾಟೆ ಮಾಡಿದ್ದಾರೆ. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಚಾಲಕ ಬಸ್​ನ್ನು ಶಹರ ಪೊಲೀಸ್ ಠಾಣೆಗೆ ತಿರುಗಿಸಿದ್ದಾರೆ. 15 ಜನರನ್ನು ವಿಚಾರಣೆ ನಡೆಸಿದ ಪೊಲೀಸರು ಮೂವರ ವಿರುದ್ಧ ಸೆಕ್ಷನ್ 110ರ ಅಡಿ ಪ್ರಕರಣ ದಾಖಲಿಸಿಕೊಂಡು ಉಳಿದವರನ್ನು ಬಿಡುಗಡೆ ಮಾಡಿದ್ದಾರೆ.
ಉಪ್ಪಿನಂಗಡಿ:ಸ್ಲೀಪರ್ ಕೋಚ್ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಅದೇ ಬಸ್​ನಲ್ಲಿದ್ದ ಸಹ ಪ್ರಯಾಣಿಕ ಕಿರುಕುಳ ನೀಡಲು ಮುಂದಾಗಿದ್ದು, ವಿದ್ಯಾರ್ಥಿನಿ ಪ್ರತಿರೋಧದಿಂದ ಆತ ಬಸ್​ನಿಂದ ಜಿಗಿದು ಪರಾರಿಯಾದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ. ಬಂಟ್ವಾಳ ನಿವಾಸಿ, ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಕಲಿಯುತ್ತಿದ್ದು, ಮಂಗಳವಾರ ರಾತ್ರಿ ಬೆಂಗಳೂರಿನಿಂದ ಊರಿಗೆ ಗ್ಲ್ಲೈಡ್ ಟೂರಿಸ್ಟ್ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಸಕಲೇಶಪುರ ದಾಟಿ ಮುಂದಕ್ಕೆ ಸಾಗುತ್ತಿದ್ದಾಗ ವಿದ್ಯಾರ್ಥಿನಿಯ ಮೈಮೇಲೆ ಕೈಯಾಡಿಸಿರುವುದು ಕಂಡುಬಂತು. ಈ ಬಗ್ಗೆ ವಿದ್ಯಾರ್ಥಿನಿ ಬಸ್ ಚಾಲಕನ ಗಮನಕ್ಕೆ ತಂದರೂ ಆತನಿಂದ ಸ್ಪಂದನೆ ದೊರೆಯದಿದ್ದಾಗ, ಸಹ ಪ್ರಯಾಣಿಕರು ರಕ್ಷಣೆಗೆ ಧಾವಿಸಿ ಆತನನ್ನು ವಿಚಾರಿಸಿದಾಗ ತಾನು ಲಾಯಿಲ ಗ್ರಾಮದ ಆದರ್ಶನಗರ ನಿವಾಸಿ ಮಹಮ್ಮದ್ ಅಝೀಮ್ ಎಂದು ತಿಳಿಸಿದ್ದ. ಮುಂದಕ್ಕೆ ದಾರಿ ಮಧ್ಯೆ ಸಿಗುವ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಎಂದು ವಿದ್ಯಾರ್ಥಿನಿ ಸೂಚಿಸುತ್ತಿದ್ದಂತೆಯೇ ಆತ ಬಸ್​ನ ಕಿಟಕಿಯಿಂದ ಹೊರಗೆ ಹಾರಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 4 =
Remember me
