ವಿಜಯಪುರ:ಲಾಕ್​ಡೌನ್​ ಹಿನ್ನೆಲೆಯಲ್ಲಿ ಮದ್ಯಕ್ಕೆ ಬರಗಾಲ ಬಂದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕದ್ದುಮುಚ್ಚಿ ಕಳ್ಳಭಟ್ಟಿ ಮಾರಾಟದಲ್ಲಿ ನಿರತರಾಗಿದ್ದಾರೆ.
ಭಾನುವಾರ ಕಳ್ಳಭಟ್ಟಿ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳೆಯರಿಬ್ಬರು ಕೊಡಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕಳ್ಳಭಟ್ಟಿಯನ್ನು ಪೊಲೀಸರು ನಾಶಪಡಿಸಿದ್ದು, ಈ ಘಟನೆ ವಿಜಯಪುರ ನಗರದ ಬಡೆಕಮಾನ ರಸ್ತೆಯಲ್ಲಿ ನಡೆದಿದೆ.
ಮಹಿಳೆಯರ ಅನುಮಾನಾಸ್ಪದ ನಡೆಯಿಂದ ಅವರನ್ನು ತಡೆದು ವಿಚಾರಿಸಿದಾಗ ಕಳ್ಳಭಟ್ಟಿ ತುಂಬಿದ ಕೊಡಗಳನ್ನು ಸ್ಥಳದಲ್ಲೇ ಬಿಟ್ಟು ಮಹಿಳೆಯರು ಪರಾರಿಯಾಗಿದ್ದಾರೆ. ಎರಡು ಕೊಡಗಳಲ್ಲಿ ಕಳ್ಳಭಟ್ಟಿ ಸಾಗಿಸುತ್ತಿದ್ದರು.
ಘಟನಾ ಸ್ಥಳಕ್ಕಾಮಿಸಿದ ಪ್ರೋಬೇಷನರ್ ಪಿಎಸ್‌ಐ ಸೋಮಗೌಡ ಪರಿಶೀಲನೆ ನಡೆಸಿ, ಕೊಡಗಳಲ್ಲಿ ತುಂಬಿದ ಮದ್ಯವನ್ನು ನಾಶಪಡಿಸಿದರು. ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್)
ನಿಶಾ ಜಿಂದಾಲ್ ಹೆಸರಿನ​ ಮಹಿಳೆಯನ್ನು ಹುಡುಕಿ ಹೊರಟ ಪೊಲೀಸರಿಗೆ ಕೊನೆಯಲ್ಲಿ ಕಾದಿತ್ತೊಂದು ಶಾಕ್​!

ಕರೊನಾ ಸೋಂಕು ತಗಲುವ ಮುನ್ನ ಜಾತಿ, ಮತ ಧರ್ಮಗಳನ್ನು ನೋಡುವುದಿಲ್ಲ… ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 8 =
Remember me
