ವಿಜಯಪುರ:ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಅವರು ಮೇ 14ರೊಂದು ಸೋಷಿಯಲ್​ ಮೀಡಿಯಾ ಮೂಲಕ ಒಂದು ಚಾಲೆಂಜ್​ ನೀಡಿದ್ದರು. ಬ್ಯಾಟ್​​ನ ಎಡ್ಜ್​​ನಲ್ಲಿ ಚೆಂಡನ್ನು ಪುಟಿಸುವ ಸವಾಲು ಅದು. ತಾವೇ ಸ್ವತಃ ಅದನ್ನು ಮಾಡಿ ತೋರಿಸಿ, ಸಚಿನ್​ ತೆಂಡೂಲ್ಕರ್​, ರೋಹಿತ್​ ಶರ್ಮಾ ಹಾಗೂ ಹರ್ಭಜನ್​ ಸಿಂಗ್​ ಅವರನ್ನು ನಾಮಿನೇಟ್​ ಮಾಡಿದ್ದರು.
ಯುವರಾಜ್​ ಸಿಂಗ್​ ಚಾಲೆಂಜ್​​ನ್ನು ಸ್ವೀಕರಿಸಿದ್ದ ಮಾಸ್ಟರ್ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಅದಕ್ಕೊಂದು ಟ್ವಿಸ್ಟ್ ಕೊಟ್ಟಿದ್ದರು. ಸದಾ ಕ್ರಿಯಾತ್ಮಾಕ, ಸ್ಪರ್ಧಾತ್ಮಕವಾಗಿರುವ ಸಚಿನ್​ ಅವರು, ಕಣ್ಣುಗಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬ್ಯಾಟ್​ ಎಡ್ಜ್​​ಗೆ ಚೆಂಡನ್ನು ಮಿಸ್​ ಮಾಡದೆ ಪುಟಿಸಿದ್ದರು. ಅಷ್ಟೇ ಅಲ್ಲ, ಯುವಿ ನೀವು ನನಗೆ ತುಂಬ ಸುಲಭದ ಸವಾಲು ನೀಡಿದ್ದೀರಿ. ಆದರೆ ಈಗ ನಾನು ನಿಮಗೆ ಕಷ್ಟಕರವಾದ ಚಾಲೆಂಜ್ ನೀಡುತ್ತಿದ್ದೇನೆ. ಕಣ್ಣಿಗೆ ಕಟ್ಟಿಕೊಂಡು ನೀವೂ ಹೀಗೆ ಚೆಂಡನ್ನು ಪುಟಿಸಿ ಎಂದು ಹೇಳಿದ್ದರು. ಆದರೆ ಕೊನೆಯಲ್ಲಿ ಸಚಿನ್​ ತಾವು ಕಟ್ಟಿಕೊಂಡಿದ್ದ ಪಟ್ಟಿಯನ್ನು ತೆಗೆದು, ಅದೆಷ್ಟು ಪಾರದರ್ಶಕವಾಗಿದೆ ಎಂದು ನಗುತ್ತ ತೋರಿಸಿದ್ದರು. ಹಾಗೇ ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಅದು ಹೇಗೆ ಅಷ್ಟು ಸುಲಭವಾಗಿ ಚೆಂಡನ್ನು ಪುಟಿಸಿದೆ ಎಂಬುದರ ರಹಸ್ಯ ಬಿಚ್ಚಿಟ್ಟಿದ್ದರು.
ಇದನ್ನೂ ಓದಿ:ಕರೊನಾ ಔಷಧಿ ಪ್ರಯೋಗಕ್ಕೆ ದೇಹ ನೀಡಲು ಸಿದ್ಧನೆಂದ ಗದಗದ ಈ ಯುವಕ; ಪ್ರಧಾನಿ ಕಚೇರಿಗೆ ಪತ್ರ
ಸಚಿನ್​ ತೆಂಡೂಲ್ಕರ್​ ಈ ಸವಾಲನ್ನು ಕೇವಲ ಯುವರಾಜ್​ ಸಿಂಗ್​ ಅವರಿಗೆ ಅಷ್ಟೇ ಅಲ್ಲದೆ, ಯಾರು ಬೇಕಾದರೂ ಸ್ವೀಕರಿಸಿಬಹುದು ಎಂದಿದ್ದರು.
ಇದೀಗ ಮಾಸ್ಟರ್​ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಅವರು ನೀಡಿದ ಚಾಲೆಂಜ್​​ನ್ನು ವಿಜಯಪುರದ ಬಾಲಕನೋರ್ವ ಸ್ವೀಕರಿಸಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 180 ಬಾರಿ ಬ್ಯಾಟ್​ಗೆ ಚೆಂಡನ್ನು ಪುಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಇದನ್ನೂ ಓದಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ನೋಟಿಸ್ ನೀಡಿ ಶಾಕ್​ ಕೊಟ್ಟ ಜಿಲ್ಲಾಡಳಿತ
ಜಲನಗರದ ನಿವಾಸಿ 5ನೇ ತರಗತಿಯ ವಿಷ್ಣುವರ್ಧನ್​ ಪುಕಾಳೆ ಪ್ರತಿದಿನವೂ ಸಿಕ್ಕಾಪಟೆ ಕ್ರಿಕೆಟ್​ ಅಭ್ಯಾಸ ಮಾಡುತ್ತಾನೆ. ಈತ ಕಣ್ಣಿಗೆ ಬಟ್ಟೆ ಕಟ್ಟಿ ಚೆಂಡನ್ನು ಪುಟಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ಆ ಪುಟ್ಟ ಹುಡುಗನ ಏಕಾಗ್ರತೆಗೆ ಕ್ರಿಕೆಟ್​ ಪ್ರಿಯರು ಫುಲ್​ ಫಿದಾ ಆಗಿದ್ದಾರೆ.
https://www.facebook.com/VVani4U/videos/251027906147238/?t=0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 8 =
Remember me
