ವಿಜಯಪುರ:ಮನೆಯಲ್ಲಿ ಆಟ ಆಡುವಾಗ ನಾಲ್ಕು ವರ್ಷದ ಬಾಲಕನೊಬ್ಬ ರಿವಾಲ್ವಾರ್​​ನಿಂದ ತೊಡೆಗೆ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ಪಟ್ಟಣದಲ್ಲಿ ನಡೆದಿದೆ.
ಚಡಚಣ ಪಟ್ಟಣದ ಮರಡಿ(ಮಡ್ಡಿ) ಪ್ರದೇಶದಲ್ಲಿ ಘಟನೆ ನಡೆದಿದ್ದು, ಮನೆಯ ತಿಜೋರಿಯಲ್ಲಿ ಇಡಲಾಗಿದ್ದ ಪರವಾನಗಿ ಹೊಂದಿದ್ದ ಲೋಡೆಡ್ ರಿವಾಲ್ವರ್​ನಿಂದ ಗುಂಡು ಹಾರಿದೆ.
ಆಟವಾಡುವಾಗ ಬಾಲಕ ಅಭಿಷೇಕ ಗೋಟ್ಯಾಳ ರಿವಾಲ್ವರ್ ಹೊರ ತೆಗೆದ್ದಾನೆ. ಬಳಿಕ ಅದರೊಂದಿಗೆ ಆಟವಾಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದು ತೊಡೆಗೆ ತಾಗಿದೆ. ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನಾ ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರ ಮಡಿವಾಳರ, ಪಿಎಸ್ಐ ಸತಿಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್​ಜೆಪಿಯಲ್ಲಿ ಚಿರಾಗ್​ ಒಬ್ಬಂಟಿ! ಅಧ್ಯಕ್ಷ ಸ್ಥಾನದಿಂದ ಕಿಕ್​ಔಟ್!

ಪರ ಪುರುಷನ ಜತೆ ಸಂಬಂಧ: ಮಹಿಳೆಯ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಪ್ರತಿಷ್ಠಿತ ಉದ್ಯಮಿ ಸೇರಿದಂತೆ ಐವರ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
