ವಿಜಯಪುರ:ಸರ್ಕಾರಿ ಶಾಲೆಗೆ ಬಂದ ನಾಟ್ಯಮಯೂರಿ ನವಿಲು ಮಕ್ಕಳ ಜತೆ ಬಿಸಿಯೂಟ ಸವಿದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಹಚ್ಚ ಹಸಿರಿನ ಗಿಡಗಳು, ಸ್ವಚ್ಛ ಪರಿಸರ, ಹೂ ಬಿಸಿಲ ಮಧ್ಯೆ ಬಿಸಿ ಬರುತ್ತಿರುವ ತಂಗಾಳಿಯಲ್ಲಿ ಹೆಜ್ಜೆಯ ಮೇಲೊಂದು ಹೆಜ್ಜೆ ಹಾಕುತ್ತಾ ಬಂದಿರುವ ನಾಟ್ಯ ಮಯೂರಿ ಸರ್ಕಾರಿ ಶಾಲೆಯ ವೈಭವ ಹೆಚ್ಚಿಸುತ್ತಿರುವುದಲ್ಲದೇ ಮಕ್ಕಳೊಂದಿಗೆ ಬಿಸಿಯೂಟ ಸವಿದು ಗಮನ ಸೆಳೆದಿದ್ದಾಳೆ.

ವಿಜಯಪುರ ಜಿಲ್ಲೆಯ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲೆ ಬಳಿ  ಹಾರಿಬಂದ ರಾಷ್ಟ್ರ ಪಕ್ಷಿಯನ್ನು ಕಂಡು ಮಕ್ಕಳು ಸಂಭ್ರಮಿಸಿದ್ದಾರೆ.
ಶಾಲಾ ಆವರಣದಲ್ಲಿ ಪಂಕ್ತಿ ಸಾಲಿನಲ್ಲಿ ಕುಳಿತು ಮಕ್ಕಳು ಬಿಸಿಯೂಟ ಸೇವಿಸುವ ಮುನ್ನ ಪ್ರಾರ್ಥನೆ ಸಲ್ಲಿಸುವಾಗ ಆಹಾರ ಅರಸಿ ಅಲ್ಲಿಗೆ ಹಾರಿ ಬಂದ ನವಿಲು ಮಕ್ಕಳ ಅನ್ನದ ತಟ್ಟೆಯತ್ತ ಸಾಗಿದೆ. ಈ ವೇಳೆ ಸ್ಥಳದಲ್ಲಿ ಬಿಸಿಯೂಟ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿಕ್ಷಕರ ಸಲಹೆ ಮೇರೆಗೆ ಓರ್ವ ವಿಧ್ಯಾರ್ಥಿನಿ ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ತಾನು ಬೇರೊಂದು ತಟ್ಟೆ ಪಡೆದು ಊಟ ಮಾಡಿದ್ದಾಳೆ.
ಇತ್ತ ಆ ಪಕ್ಷಿಯೂ ಮಕ್ಕಳೊಂದಿಗೆ ತರಗತಿಗೆ ಭೇಟಿ ನೀಡಿ ಪುಳಕವನ್ನುಂಟು ಮಾಡಿತು. ಪ್ರಾರ್ಥನೆ ವೇಳೆ ಧ್ವನಿಗೂಡಿಸಿತು. ಬಿಸಿಯೂಟ ವೇಳೆ ಮಕ್ಕಳ ಜತೆ ಊಟವನ್ನು ಸೇವಿಸಿ ಗಮನ ಸೆಳೆಯಿತು.






















Sign in to your account
Please enter an answer in digits:one × one =
Remember me
