ವಿಜಯಪುರ:ಬೈಕ್​ ಮತ್ತು ಕ್ಯಾಂಟರ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನವದಂಪತಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ವಿಜಯಪುರ ನಗರ ಹೊರವಲಯದ ಸೋಲಾಪುರ ಬೈಪಾಸ್ ಬಳಿ ನಿನ್ನೆ (ಜೂ.13) ರಾತ್ರಿ ನಡೆದಿದೆ.
ಮೃತರನ್ನು ಹೊನಮಲ್ಲ ತೇರದಾಳ (31) ಮತ್ತು ಅವರ ಪತ್ನಿ ಗಾಯತ್ರಿ (24) ಎಂದು ಗುರುತಿಸಲಾಗಿದೆ. ಹೊನಮಲ್ಲ ಅವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಮೇ 22 ರಂದು ಗಾಯತ್ರಿ ಎಂಬುವರನ್ನು ವರಿಸಿದ್ದರು. ಮದುವೆಯಾದ 23 ದಿನಗಳಲ್ಲಿ ನವಜೋಡಿ ಮೃತಪಟ್ಟಿದೆ.
ಇದನ್ನೂ ಓದಿ:ಸಪ್ಲೈಯರ್ ಜತೆ ಲಗೋರಿ ಹುಡುಗಿ; ನಿಶ್ಚಿತ್‌ಗೆ ನಾಯಕಿಯಾಗಿ ದೀಪಿಕಾ ಆರಾಧ್ಯ ನಟನೆ
ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ಮನೆಗೆ ಹಿಂದಿರುಗುವಾಗ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಸ್ಥರು ನವಜೋಡಿಯ ಸಾವಿಗೆ ಕಂಬನಿ ಮಿಡಿದ್ದಾರೆ. ಅಪಘಾತದ ಸ್ಥಳಕ್ಕೆ ವಿಜಯಪುರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಪಾಕಿಸ್ತಾನಿ ಯೂಟ್ಯೂಬರ್​ನಿಂದ ಭಾರತ ಪ್ರವಾಸ: ಭಾರತೀಯರ ಆತಿಥ್ಯಕ್ಕೆ ಪಾಕ್​ ವ್ಲಾಗರ್​ ಫಿದಾ!

ಎಂಆರ್​ಎಫ್ ಪ್ರತಿ ಷೇರು ಮೌಲ್ಯ ಲಕ್ಷ ರೂಪಾಯಿ; ಆರು ಅಂಕಿ ಮುಟ್ಟಿದ ಭಾರತದ ಮೊದಲ ಕಂಪನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
