ವಿಜಯಪುರ:ಗುಡಿಸಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಇಬ್ಬರು ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಕರೀಮಸಾಬ ಇಮಾಮಸಾಬ ಟಪಾಲ (82), ಸಾಜನಬಿ ಕರೀಮಸಾಬ ಟಪಾಲ ಮೃತಪಟ್ಟಿರುವ ದುರ್ದೈವಿಗಳು.
ಗುಡಿಸಲಿನಲ್ಲಿ ಮಲಗಿದ ವೇಳೆ ಚಿಮಣಿಯಿಂದ ಬೆಂಕಿ ಅವಘಡ ಸಂಭವಿಸಿದೆ. ಇದರಿಂದ ಗುಡಿಸಲು ಸುಟ್ಟು ಭಸ್ಮವಾಗಿದೆ. ಇದರಿಂದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದೇಶಾದ್ಯಂತ ಬಿರುಬಿಸಿಲಿನ ಝುಳ ಹೆಚ್ಚಳ: ವಿದ್ಯುತ್ ಸರಬರಾಜಿಗೆ ಹೆಚ್ಚಿದ ಬೇಡಿಕೆ, ಕಾಡುತ್ತಿರುವ ಅಭಾವದ ಆತಂಕ
ಸಿಲಿಂಡರ್ ಬ್ಲಾಸ್ಟ್ ಗುಡಿಸಲು ಬೆಂಕಿಗಾಹುತಿಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೊರಭಾಗದ ಸಾಯಿನಗರದಲ್ಲಿ ಸಿಲಿಂಡರ್​ ಸ್ಫೋಟಗೊಂಡು ಆಂಧ್ರ ಮೂಲದ ಟಿ.ಮಧು ಅವರಿಗೆ ಸೇರಿದ್ದ ಗುಡಿಸಲು ಬೆಂಕಿಗಾಹುತಿಯಾಗಿದೆ. ಸ್ನಾನ ಮಾಡಲು ನೀರು ಕಾಯಿಸಲು ಇಟ್ಟಾಗ ಸಿಲಿಂಡರ್ ಬ್ಲಾಸ್ಟ್ ಆಗಿದೆ. ನೀರು ಕಾಯಿಸಲು ಸಿಲಿಂಡರ್​ ಇಟ್ಟು ಮಧು ಹೊರಗಡೆ ಬಂದಿದ್ದ. ಹೀಗಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗುಡಿಸಲು ಪಕ್ಕದಲ್ಲಿರುವ ಓರ್ವ ವ್ಯಕ್ತಿಗೆ ಗಾಯವಾಗಿದೆ. ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ. ಎರಡು ಲಕ್ಷ ರೂ. ನಗದು ಸುಟ್ಟು ಭಸ್ಮವಾಗಿದೆ.
ಮಗಳ ಆಪರೇಷನ್ ಮಾಡಿಸಲು ಮಧು ಹಣ ತಂದಿಟ್ಟಿದ್ದ. ಇಂದು ಬೆಳಗ್ಗೆ ಮಗಳ ಆಪರೇಷನ್ ಮಾಡಿಸಲು ಕೊಪ್ಪಳದ ಗಂಗಾವತಿಗೆ ತೆರಳಬೇಕಿತ್ತು. ಆದರೆ ಸಿಲಿಂಡರ್ ಸ್ಫೋಟದಿಂದ ಗುಡಿಸಲು ಬೆಂಕಿಗಾಹುತಿಯಾಗಿ ಅಪಾರ ಹಾನಿಯಾಗಿದೆ. ಘಟನಾಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕೆಂಭಾವಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮದುವೆಯ ದಿನ ಮೊಬೈಲ್​ ಸ್ವಿಚ್​ ಆಫ್ ಮಾಡಿ ಬಚ್ಚಿಟ್ಟುಕೊಂಡ ವರ​: ನಂತರ ನಡೆದಿದ್ದು ಘೋರ ದುರಂತ

ಗಾಡಿ ಹರಾಜು ಗೋಲ್ಮಾಲ್ ದೃಢ! ಇನ್​ಸ್ಪೆಕ್ಟರ್, ಹೆಡ್ ಕಾನ್​ಸ್ಟೆಬಲ್ ವಿರುದ್ಧ ಕಮಿಷನರ್​ಗೆ ವರದಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 19 =
Remember me
