ವಿಜಯಪುರ:ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಬಡತನದಲ್ಲಿ ಅರಳಿದ ಪ್ರತಿಭೆಯೊಂದು ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಕಲಾ ವಿಭಾಗದಲ್ಲಿ 592 ಅಂಕ ಪಡೆಯುವ ಮೂಲಕ ವಿಜಯಪುರ ಜಿಲ್ಲೆಯ ರಾಹುಲ್ ರಾಠೋಡ್ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ರಾಠೋಡ್​ ಅವರ ತಂದೆ-ತಾಯಿ ಮಹಾರಾಷ್ಟ್ರಕ್ಕೆ ಗುಳೆಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ತಂದೆ-ತಾಯಿ ತಗಡಿನ ಶೆಡ್​ನಲ್ಲಿ ವಾಸವಿದ್ದು, ಮಗನ ಸಾಧನೆಗೆ ಹರ್ಷಗೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.
ಕೂಲಿ ಕೆಲಸಕ್ಕೆಂದು ರಾಠೋಡ್​ ಅವರ ತಂದೆ ಮೋತಿಲಾಲ್ ಹಾಗೂ ತಾಯಿ ಸವಿತಾ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದಾರೆ. ಮೋತಿಲಾಲ್​​ಗೆ ಮೂವರು ಮಕ್ಕಳು. ಅದರಲ್ಲಿ ಓರ್ವ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಬಡತನ ಹಿನ್ನೆಲೆಯಲ್ಲಿ ಜೀವನಕ್ಕಾಗಿ ಮೋತಿಲಾಲ್ ಕುಟುಂಬ ಮಹಾರಾಷ್ಟ್ರಕ್ಕೆ ಗುಳೆಹೋಗಿದೆ.
ಇದನ್ನೂ ಓದಿ:ರಂಜಾನ್ ಮಾರ್ಕೆಟ್‌ನಲ್ಲಿ ಮಹಿಳೆಯರೊಂದಿಗೆ ಕಿರಿಕ್ – ಪೊಲೀಸ್ ಜೀಪ್‌ಗೆ ಕಲ್ಲು ತೂರಾಟ
ರಾಹುಲ್ ರಾಠೋಡ್ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿ. ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿರುವ ಎಸ್.ಕೆ ಪಿಯು ಕಾಲೇಜಿಲ್ಲಿ ಪಿಯುಸಿ ಅಧ್ಯಯನ ಮಾಡಿದ್ದಾರೆ. ಹಾಸ್ಟೆಲ್​ನಲ್ಲಿದ್ದುಕೊಂಡೆ ಉತ್ತಮ ಸಾಧನೆ ಮಾಡಿರುವ ರಾಠೋಡ್​, ತನ್ನ ಈ ಸಾಧನೆಗೆ ತಂದೆ ತಾಯಿ, ಕಾಲೇಜಿನ ಉಪನ್ಯಾಸಕರು ಹಾಗೂ ಉಪನ್ಯಾಸಕಿ ಬಸಮ್ಮ ಪ್ರೇರಣೆ ಎಂದಿದ್ದಾರೆ.
ಕಲಾವಿಭಾಗದ ಶಿಕ್ಷಣ ವಿಷಯದಲ್ಲಿ ಪಿಯುಸಿ ಕಲಿತಿರುವ ರಾಠೋಡ್​, ಮುಂದೆ ಕಲಾ ವಿಭಾಗದಲ್ಲಿ ಬಿಎ ಮಾಡಿ ಎಲ್ಎಲ್​​​ಬಿ ಕಲಿಯುವ ಆಸೆ ಹೊಂದಿದ್ದಾರೆ. ರಾಠೋಡ್​ ಅವರ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿವೆ.(ದಿಗ್ವಿಜಯ ನ್ಯೂಸ್​)
ಜಿಲೇಬಿ ಫೈಲ್​ ಬಂದ್ರೆ ಬಿಸಾಕುತ್ತಿದ್ರಿ, ಜಿಲೇಬಿ ಅಂದ್ರೆ ಜನಕ್ಕೆ ಗೊತ್ತಿಲ್ವಾ? ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ

ನಿಜಾಂಶ ಮುಚ್ಚಿಟ್ಟ ಆರೋಪ; ಯಶವಂತಪುರ ಜೆಡಿಎಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ದೂರು

ಲಿಂಗಾಯತರಿಗೆ ಸ್ಥಾನಮಾನ, ಕಾಂಗ್ರೆಸ್​ಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 13 =
Remember me
