ವಿಜಯಪುರ:ಕರೊನಾ ಸೋಂಕಿಗೆ ತುತ್ತಾಗಿದ್ದ ತಾಯಿ ಸಾವನ್ನಪ್ಪಿದ ಎರಡೇ ಗಂಟೆಗಳಲ್ಲಿ ಆಕೆಯ ಮಗನೂ ಸೋಂಕಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಸಿಂದಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಮೋಘಿ ಹಿರೇಕುರಬರ (46) ಮತ್ತು ಅವರ ತಾಯಿ ಸಾವಿಗೀಡಾದ ದುರ್ದೈವಿಗಳು. ಅಮೋಘಿ ಹಾಗೂ ಅವರ ತಾಯಿ ನಿಂಗಮ್ಮ ಯಲ್ಲಪ್ಪ ಹಿರೇಕುರಬರ(70) ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿತ್ತು. ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಂಗಮ್ಮ ಅವರು ಮಂಗಳವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಉಸಿರು ನಿಲ್ಲಿಸಿದ್ದಾರೆ. ತಾಯಿ ಸತ್ತ ಎರಡು ಗಂಟೆಗಳಲ್ಲಿ ಅಂದರೆ ಸಂಜೆ 5 ಗಂಟೆಗೆ ಅಮೋಘಿ ಅವರೂ ಕೊನೆ ಉಸಿರೆಳೆದಿದ್ದಾರೆ.
ಅಮೋಘಿ ಅವರ ಕುಟುಂಬ ಒಂದೇ ದಿನದಲ್ಲಿ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದು, ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿಕೊಂಡಿದೆ.
ಕರ್ನಾಟಕದ ಬೆನ್ನಲ್ಲೇ ನೆರೆ ರಾಜ್ಯವೂ ಲಾಕ್​! ಮೇ 3ರವರೆಗೆ ಕಠಿಣ ನಿಯಮ ಜಾರಿ

18ರಿಂದ 45 ವರ್ಷದವರಿಗಿಲ್ಲ ಫ್ರೀ ಕರೊನಾ ಲಸಿಕೆ; ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವಂತೆ ಸೂಚಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
