ಸಿಂದಗಿ:ಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿನ ಅರ್ಪಿತಾ ಡಾಬಾದಲ್ಲಿ ಬಿಜೆಪಿ ಯುವ ಮುಖಂಡನ ಮೇಲೆ ತಲವಾರದಿಂದ ದಾಳಿ ನಡೆಸಿ ಕೊಲೆ ಯತ್ನ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ತಾಲೂಕು ಬಿಜೆಪಿ ಮಂಡಲದ ಓಬಿಸಿ ವಿಭಾಗದ ಅಧ್ಯಕ್ಷ ರವಿಕಾಂತ ಮಡಿವಾಳಪ್ಪ ನಾಯ್ಕೋಡಿ(29) ಸೋಮವಾರ ರಾತ್ರಿ ತನ್ನ ಆಪ್ತರೊಂದಿಗೆ ಅರ್ಪಿತಾ ಡಾಬಾದಲ್ಲಿ ಊಟಕ್ಕೆ ಕುಳಿತಾಗ ಸಿಂದಗಿ ತಾಲ್ಲೂಕಿನ ಬಬಲೇಶ್ವರ ಗ್ರಾಮದ ಅನೀಲ ಜಟ್ಟೆಪ್ಪ ಬರಗಾಲ, ತಲವಾರನಿಂದ ಏಕಾಏಕಿ ದಾಳಿ ನಡೆಸಿದ್ದಾನೆ.
ದಾಳಿ ವೇಳೆ ರವಿಕಾಂತ ತನ್ನ ಎಡಗೈಯನ್ನು ಅಡ್ಡ ತಂದಿದ್ದು ಕೈಗೆ ಭಾರಿ ಪೆಟ್ಟಾಗಿದೆ. ಪಕ್ಕದಲ್ಲಿದ್ದ ಮಲ್ಲು ಬಾದನ ಹಾಗೂ ನಾಗಪ್ಪ ಬಿರಾದಾರ ಅವರು ಆರೋಪಿಗಳ ದಾಳಿಯನ್ನು ತಡೆೃಯಲು ಮುಂದಾದಾಗ ಆರೋಪಿ ಅನೀಲ ತನ್ನ ಜೊತೆಗಾರನಾದ ತಾಲೂಕಿನ ರಾಂಪೂರ ಪಿ.ಎ. ಗ್ರಾಮದ ಯುವರಾಜ ಸೇರಿದಂತೆ ಇತರೆ ನಾಲ್ಕೈದು ಜನರೊಂದಿಗೆ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಆದಾಯಕ್ಕೂ ಮೀರಿದ ಡಬಲ್​ ಆಸ್ತಿ! ಡಿಕೆಶಿಗೆ ಸಿಬಿಐನಿಂದ ಸಮನ್ಸ್​- ಹಾಜರಾಗಲು 2 ದಿನ ಗಡುವು
ಮಾರಣಾಂತಿಕ ಹಲ್ಲೆಯಲ್ಲಿ ರವಿಕಾಂತನ ಕೈಗೆ ಹರಿತವಾದ ತಲವಾರ ಏಟಿನಿಂದ ಕೈಗೆ ಭಾರಿ ಪೆಟ್ಟಾಗಿದ್ದು, ತಕ್ಷಣವೇ ಸಿಂದಗಿ ಸಕಾ೯ರಿ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡಿದ ಬಬಲೇಶ್ವರ ಗ್ರಾಮದ ಅನಿಲ ಜಟ್ಟೆಪ್ಪ ಬರಗಾಲ ಹಾಗೂ ರಾಂಪೂರ ಪಿ.ಎ ಗ್ರಾಮದ ಯುವರಾಜ ಸೇರಿದಂತೆ ಪರಿಚಯವಿಲ್ಲದ ಇತರ ನಾಲ್ಕೈದು ಜನರ ವಿರುದ್ಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ರವಿಕಾಂತ, ಈ ಕೆಲವು ದಿನಗಳ ಹಿಂದೆ ಆರೋಪಿತನೊಬ್ಬ ನನ್ನ ಹಿಂದೆ, ಮುಂದೆ ಮತ್ತು ಹೋದಲ್ಲಿ, ಬಂದಲ್ಲಿ ಹಿಂಬಾಲಿಸುತ್ತಿದ್ದ. ಅವನಿಂದ ನಡೆದ ಈ ದಾಳಿ ನನ್ನ ಕೊಲೆಗೆ ಯಾರಿಂದಲೋ ಸುಫಾರಿ ನೀಡಿದ್ದಾಗಿದೆ ಎಂದು ಆರೋಪಿಸಿದ್ದಾನೆ. ಹಲ್ಲೆ ಮಾಡಿದ ಮುಖ್ಯ ಆರೋಪಿ ಹಾಗೂ ಹಲ್ಲೆಗೊಳಗಾದ ಬಿಜೆಪಿ ಮುಖಂಡ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಈ ಹಿಂದೆ ಗ್ರಾಮದಲ್ಲಿ ನಡೆದ ಹಣದ ವ್ಯವಹಾರದ ಹಿನ್ನಲೆ ಈ ಕೊಲೆ ಯತ್ನ ನಡೆದಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.
ಅತ್ಯಾಚಾರದ ವಿರುದ್ಧ ದೂರು ದಾಖಲಿಸಲು 800 ಕಿ.ಮೀ ದೂರ ಧಾವಿಸಿದ ಯುವತಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + 20 =
Remember me
