ಮಂಗಳೂರು:ಅತ್ಯಪೂರ್ವ ಪರಿಕಲ್ಪನೆಯಡಿ ‘ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ ಹೆಸರಿನ ಆರೋಗ್ಯಕ್ಕೆ ನವಚೇತನ ನೀಡುವ ತಾಣ ಸ್ಥಾಪಿಸುವ ಮೂಲಕ ದೇಶ-ವಿದೇಶದ ಗಮನ ಸೆಳೆದಿರುವ ಯುವ ವೈದ್ಯ ಡಾ.ವಿವೇಕ ಉಡುಪ ಅವರು ವಿಆರ್​ಎಲ್ ಸಮೂಹ ಸಂಸ್ಥೆಯ ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್ 24*7’ ನ್ಯೂಸ್ ಚಾನೆಲ್ ವತಿಯಿಂದ ನೀಡಲಾದ ಪ್ರತಿಷ್ಠಿತ ‘ವಿಜಯರತ್ನ-2022‘ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಉಡುಪಿ ಜಿಲ್ಲೆಯ ಕೋಟ ಮೂಡುಗಿಳಿಯಾರು ಸಮೀಪದ ಯೋಗಬನದ 15 ಎಕರೆ ವಿಶಾಲ ಪ್ರದೇಶದಲ್ಲಿ ‘ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ ಕಂಗೊಳಿಸುತ್ತಿದೆ. ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಪ್ರೇರಣೆ ಪಡೆದು ವ್ಯಕ್ತಿತ್ವ ನಿರ್ಮಾಣಕ್ಕಾಗಿ ಡಾ.ಚಂದ್ರಶೇಖರ ಉಡುಪರು ಸ್ಥಾಪಿಸಿದ ಡಿವೈನ್ ಪಾರ್ಕ್ ಆಧ್ಯಾತ್ಮಿಕ ಕೇಂದ್ರದ ಅಂಗಸಂಸ್ಥೆಯಾಗಿ ಅವರ ಪುತ್ರ ಡಾ.ವಿವೇಕ ಉಡುಪರು ಈ ಅತ್ಯಪೂರ್ವ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ವಿನೂತನ ಪರಿಕಲ್ಪನೆ:ಡಾ.ವಿವೇಕ ಉಡುಪ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್​ನಲ್ಲಿ ಬಿಎನ್​ವೈಎಸ್ ಪದವಿ ಹಾಗೂ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಯುನಿವರ್ಸಿಟಿಯಲ್ಲಿ ಎಂ.ಡಿ. ಪದವಿ ಪೂರೈಸಿದ್ದರು. ಡಾ.ಚಂದ್ರಶೇಖರ ಉಡುಪ 4 ದಶಕದಿಂದ ಡಿವೈನ್ ಪಾರ್ಕ್ ಮೂಲಕ ಅಧ್ಯಾತ್ಮಿಕ ಮತ್ತು ಯೋಗದ ಮಹತ್ವ ಸಾರುವ ಸೇವೆಯಲ್ಲಿ ತೊಡಗಿದ್ದಾರೆ. ತಂದೆಯಿಂದ ಪ್ರೇರಣೆ ಪಡೆದ ಡಾ.ವಿವೇಕ ಉಡುಪ ಯೋಗ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯ ಚಿಂತನೆ ನಡೆಸಿದರು. ಆಗ ಮೂಡಿದ ಪರಿಕಲ್ಪನೆಯೇ ‘ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’.
ಆರೋಗ್ಯ ಮಂದಿರ:‘ಸರ್ವ ಕ್ಷೇಮ ಆಸ್ಪತ್ರೆ ಆವರಣ ಪ್ರವೇಶಿಸುತ್ತಿದ್ದಂತೆ ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿ ಆಕರ್ಷಿಸುತ್ತದೆ. ಇದು ವಿಶ್ವದ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ. ತಾವರೆಯಾಕಾರದ (ಅಷ್ಟ ಮಂಡಲ) ಪರಿಶುದ್ಧ ಜಲದ ಕೊಳದಲ್ಲಿ 35 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಸ್ಥಾಪಿಸಲಾಗಿದೆ. ಸರ್ವ ಕ್ಷೇಮ, ಆಸ್ಪತ್ರೆಯಷ್ಟೇ ಅಲ್ಲ, ಆರೋಗ್ಯ ಮಂದಿರ. ಅದಮ್ಯ ಶಕ್ತಿ, ಹೊಸ ಪ್ರೇರಣೆ ನೀಡುವ ಜ್ಞಾನ ಮಂದಿರ. ಬದುಕಿಗೆ ಹೊಸ ದಾರಿ ತೋರಿಸುವ ಧ್ಯಾನ ಮಂದಿರ.
ಅತ್ಯಪೂರ್ವ ವಾಸ್ತು ವಿನ್ಯಾಸ:ಪ್ರಾಚೀನ ದೇಗುಲದ ವಾಸ್ತು ವಿನ್ಯಾಸ, ಪರಿಸರ ಸ್ನೇಹಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ ಚಿಕಿತ್ಸೆ, ಸಂಗೀತ ಚಿಕಿತ್ಸೆ, ಮೌನ ಚಿಕಿತ್ಸೆ, ಹಾಸ್ಯ ಚಿಕಿತ್ಸೆ, ಆಹಾರ ಚಿಕಿತ್ಸೆಗಳ ಸಮಾಗಮ. ಗಾಳಿ, ನೀರು, ಬೆಳಕಿನ ದಿವ್ಯ ಪರಿಸರ. ವಾಯು ವಿಹಾರಕ್ಕಾಗಿ ನಿರ್ವಿುತವಾದ ಅತಿ ಉದ್ದದ ವಿಶೇಷ ವೃತ್ತ ರಸ್ತೆ, ದೃಶ್ಯ, ಶ್ರವಣ ಮಾಧ್ಯಮಗಳ ಮೂಲಕ ಆರೋಗ್ಯ, ಧ್ಯಾನ ಯೋಗದ ಶಿಕ್ಷಣ, ಸೈಕ್ಲಿಂಗ್ ಟ್ರ್ಯಾಕ್, ಯೋಗ ಸ್ಟುಡಿಯೋ, ಆಂಪಿ ಥಿಯೇಟರ್, ಸುಸಜ್ಜಿತ ಸಂಶೋಧನಾ ವಿಭಾಗ, ವಿಶಾಲ ಕ್ರೀಡಾಂಗಣ ವ್ಯವಸ್ಥೆ, ಅತಿಥಿ ಗೃಹಗಳಿಂದ ಕೂಡಿದೆ.
ಪರಂಪರೆಯ ಒಳ ನೋಟ:‘ಸರ್ವ ಕ್ಷೇಮ ಆಸ್ಪತ್ರೆ 25 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿದೆ. ಹವಾನಿಯಂತ್ರಣ ವ್ಯವಸ್ಥೆ ಬದಲು ಮೈಮನಕ್ಕೆ ಆಹ್ಲಾದ ನೀಡುವ ತಂಗಾಳಿ ಬೀಸುವಂತೆ ಕಟ್ಟಡಗಳ ವಾಸ್ತು ವಿನ್ಯಾಸದ ಹಿಂದೆ ಭಾರತೀಯ ಸಂಸ್ಕೃತಿ, ಪರಂಪರೆಯ ಒಳ ನೋಟವಿದೆ. ಆರೋಗ್ಯ ಪೂರಕ ಕಾರ್ಯಕ್ರಮಗಳ ಆಯೋಜನೆ, ಚಿಂತನೆಗೆ ಮಂಟಪಗಳಿವೆ. ಯೋಗ ಬನಕ್ಕೆ ಬಂದವರು ಬದುಕಿನ ಎಲ್ಲ ಒತ್ತಡಗಳನ್ನು ಮರೆತು ಖುಷಿಯಾಗಿರಬೇಕೆನ್ನುವ ವಾತಾವರಣ ನಿರ್ವಿುಸಲಾಗಿದೆ. ಪೂರ್ತಿ ಕ್ಯಾಂಪಸ್ ಪ್ಲಾಸ್ಟಿಕ್ ಮುಕ್ತವಾಗಿರುವುದು ಗಮನಾರ್ಹ ಅಂಶ.
ಆರೋಗ್ಯಕರ ಆಹಾರ:ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆರೋಗ್ಯಕರ ಆಹಾರ ಸೇವಿಸಿ ದೇಹ ತೂಕ ಇಳಿಸಿಕೊಳ್ಳುವ, ಪ್ರತಿನಿತ್ಯ ಮನೆಯಲ್ಲೂ ಅಳವಡಿಸಬಹುದಾದ ರೀತಿಯ ಜೀವನಶೈಲಿ ಅಳವಡಿಸಲಾಗಿದೆ. ಶಿಬಿರದ ಅವಧಿಯಲ್ಲಿ ಸಾತ್ವಿಕ ಆಹಾರದ ಜತೆ ಕಾಫಿ, ಚಹಾ, ಕಷಾಯ ಸೇವನೆಗೆ ಅವಕಾಶವಿದೆ.
ವಾರದ ಶಿಬಿರ:ಎರಡು ದಿನ, ಮೂರು ದಿನ ಹಾಗೂ ಒಂದು ವಾರದ ವಿಭಾಗದಲ್ಲಿ ಚಿಕಿತ್ಸೆ ಲಭ್ಯವಿದೆ. 2 ದಿನದ ಚಿಕಿತ್ಸಾ ಶಿಬಿರ ಶನಿವಾರ ಬೆಳಗ್ಗೆ ಆರಂಭಗೊಂಡು ಭಾನುವಾರ ಸಾಯಂಕಾಲ ಅಂತ್ಯಗೊಳ್ಳುತ್ತದೆ. ಗುರುವಾರ ಹೊರತುಪಡಿಸಿ ಇತರ ಯಾವುದೇ ದಿನ ಶಿಬಿರಕ್ಕೆ ಸೇರಬಹುದು. ಎರಡು ಹಾಗೂ ಮೂರು ವಾರದ ಚಿಕಿತ್ಸೆಯೂ ಲಭ್ಯವಿದೆ. ಇಡೀ ಕುಟುಂಬಕ್ಕೆ ಚಿಕಿತ್ಸೆ ನೀಡುವ ಪ್ಯಾಕೇಜ್ ಇದೆ. ಫ್ಯಾಮಿಲಿ ಬುಕ್ಕಿಂಗ್ ವೇಳೆ ವಿಶೇಷ ರಿಯಾಯಿತಿಯೂ ಲಭ್ಯವಿದೆ.
ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಎಂಟು ವರ್ಷದಿಂದ ತೊಡಗಿ ವಯೋವೃದ್ಧರವರೆಗೆ ಆರೋಗ್ಯ ಸ್ಥಿತಿಗೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ. ಮನಸ್ಸಿನ ನಿಯಂತ್ರಣ, ಕೋಪ ನಿಯಂತ್ರಣ, ನೋವು ನಿವಾರಣೆ, ತೂಕ ಇಳಿಕೆ, ಒತ್ತಡ ನಿರ್ವಹಣೆ ಹೀಗೆ ಎಲ್ಲ ಅಂಶಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರದ ಒಳಗೆ ಬರುವಾಗ ಆತಂಕ, ಒತ್ತಡದಿಂದ ಬರುತ್ತಾರೆ. ಇಲ್ಲಿಂದ ಹೊರ ಹೋಗುವಾಗ ಮುಖದಲ್ಲಿ ನಗು, ಮನಸ್ಸಿನಲ್ಲಿ ನೆಮ್ಮದಿ ಇರುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ನೀಡುತ್ತಿರುವ ಸೇವೆ ಗುರುತಿಸಿ ವಿಜಯವಾಣಿ ಬಳಗ ‘ವಿಜಯರತ್ನ’ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.
|ಡಾ.ವಿವೇಕ ಉಡುಪ
ಆಯುರ್ವೇದ ತಜ್ಞೆ ಡಾ.ಮಾನಸ:ಡಾ.ವಿವೇಕ ಉಡುಪ ಅವರ ಪತ್ನಿ ಡಾ.ಮಾನಸ ಆಯುರ್ವೇದ ತಜ್ಞೆ. ಉಡುಪಿಯ ಎಸ್​ಡಿಎಂ ಆಯುರ್ವೇದ ಕಾಲೇಜಿನಲ್ಲಿ ಎಂಡಿ ಪದವಿ ಪೂರೈಸಿದ ಬಳಿಕ ಹಾಸನದ ಎಸ್​ಡಿಎಂ ಆಯುರ್ವೆದ ಕಾಲೇಜಿನಲ್ಲಿ ವೈದಾಧಿಕಾರಿಯಾಗಿದ್ದರು. ಈಗ ಸರ್ವ ಕ್ಷೇಮ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಆಯುರ್ವೇದ ವಿಭಾಗದ ಉಸ್ತುವಾರಿ ವಹಿಸಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಕೊಡುಗೆ:‘ಸರ್ವ ಕ್ಷೇಮ ಆಸ್ಪತ್ರೆ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಿದೆ. ಚಿಕಿತ್ಸೆಯ ಕೊನೆಯ ದಿನದಂದು ಬೀಚ್, ಪುರಾತನ ದೇವಸ್ಥಾನ ಹಾಗೂ ಪ್ರಕೃತಿ ಮಡಿಲಿಗೆ ಕರೆದುಕೊಂಡು ಹೋಗುವ ಮೂಲಕ ಉಡುಪಿಯ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ. ತನ್ಮೂಲಕ ವೆಲ್​ನೆಸ್ ಟೂರಿಸಂ, ಟೆಂಪಲ್ ಟೂರಿಸಂ, ಬೀಚ್ ಟೂರಿಸಂ ಬೆಳವಣಿಗೆ ಕಂಡಿದೆ. ಆರೋಗ್ಯ ಕೇಂದ್ರವೂ ರೆಸಾರ್ಟ್​ನ ಅನುಭವ ನೀಡಬೇಕು, ಪಂಚತಾರಾ ಹೋಟೆಲ್​ನ ಅನುಭವ ಸಿಗಬೇಕು ಎನ್ನುವ ದೃಷ್ಟಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸ್ವರ್ಣೋದ್ಯಮ ಕ್ಷೇತ್ರದ ಅಪ್ರತಿಮ ಸಾಧಕ ಬಲರಾಮ ಆಚಾರ್ಯರಿಗೆ ವಿಜಯರತ್ನ ಪ್ರಶಸ್ತಿ ಪ್ರದಾನ..

ಅಪ್ರತಿಮ ಸಾಧಕ ಯು.ಬಿ.ಶೆಟ್ಟಿಗೆ ವಿಜಯರತ್ನ ಗರಿ: ಉದ್ಯಮ, ಶೈಕ್ಷಣಿಕ, ಧಾರ್ವಿುಕ ಕ್ಷೇತ್ರದಲ್ಲಿ ಮಹಾನ್ ಸಾಧನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
