ಬೆಂಗಳೂರು:ಕೆಲಸಕ್ಕೆಂದು ದೂರದ ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಕಠಿಣ ಪರಿಶ್ರಮದ ಮೂಲಕ ಕೆಲವೇ ವರ್ಷಗಳಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ಡಿಎಸ್ ಮ್ಯಾಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಪಿ. ದಯಾನಂದ್ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022 ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ 40 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆಲಸಕ್ಕಾಗಿ ಸಂಸ್ಥೆಗಳ ಮೆಟ್ಟಿಲು ಹತ್ತಿದ ಇವರು, ಸ್ನೇಹಿತ ಸತೀಶ ಜತೆಗೂಡಿ ತಮ್ಮದೇ ಆದ ಡಿಎಸ್ ಮ್ಯಾಕ್ಸ್ ಕನ್​ಸ್ಟ್ರಕ್ಷನ್ ಸಂಸ್ಥೆ ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಉದ್ಯೋಗ ನೀಡುವುದರ ಜತೆಗೆ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಮಾದರಿ ವ್ಯಕ್ತಿಯಾಗಿದ್ದಾರೆ. ಇವರ ಹಲವು ಸಮಾಜಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ಸ್ನೇಹಿತ ಸತೀಶ್ ಅವರೊಂದಿಗೆ ಸೇರಿ ಡಿಎಸ್ ಮ್ಯಾಕ್ಸ್ ಸಂಸ್ಥೆ ಪ್ರಾರಂಭಿಸುವ ಇವರು, ನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಇದುವರೆಗೂ 20 ಸಾವಿರ ಮನೆಗಳನ್ನು ನಿರ್ವಿುಸಿ ಮಾರಾಟ ಮಾಡಿದ್ದಾರೆ. ಪ್ರಸ್ತುತ 6 ಸಾವಿರ ಮನೆಗಳ ಕಾಮಗಾರಿ ನಡೆಯುತ್ತಿದೆ. ಡಿಎಸ್ ಮ್ಯಾಕ್ಸ್ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಪ್ರಮುಖವಾಗಿ ಬೆಂಗಳೂರು ಮತ್ತು ಕೆಲ ನಗರಗಳಲ್ಲಿ 120 ಕ್ಕೂ ಹೆಚ್ಚು ವಸತಿ ಪ್ರದೇಶಗಳನ್ನು ನಿರ್ಮಾಣ ಮಾಡಿದ್ದು, 30 ಹೆಚ್ಚು ಕಡೆ ಮನೆಗಳ ನಿರ್ವಣದ ಕಾಮಗಾರಿ ಪ್ರಗತಿಯಲ್ಲಿದೆ.
8 ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ:ಹಲವು ಸಮಾಜಮುಖಿ ಕೆಲಸಗಳನ್ನು ಡಿಎಸ್ ಮ್ಯಾಕ್ಸ್ ಸಂಸ್ಥೆಯು ಮಾಡಿಕೊಂಡು ಬರುತ್ತಿದೆ. ಮೋದಿ ಆಸ್ಪತ್ರೆಯ ಸಹಯೋಗದಲ್ಲಿ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿ ಈವರೆಗೂ ಸುಮಾರು 8 ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಇದಕ್ಕಾಗಿಯೇ ಡಿಎಸ್ ಮ್ಯಾಕ್ಸ್ ತಂಡವಿದ್ದು, ಆ ತಂಡ ಮತ್ತು ಆಸ್ಪತ್ರೆಯ ತಂಡದ ಸದಸ್ಯರು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ಕೊಟ್ಟು ಕಣ್ಣಿನ ಸಮಸ್ಯೆ ಇರುವ ವಯಸ್ಸಾದವರನ್ನು ಗುರುತಿಸಿ ಅವರನ್ನು ಬೆಂಗಳೂರಿನ ಮೋದಿ ಆಸ್ಪತ್ರೆಗೆ ಕರೆತಂದು ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ ಕನ್ನಡಕಗಳನ್ನು ವಿತರಿಸುತ್ತಾರೆ. ಅಲ್ಲದೆ, ಅವರಿಗೆ ಹೊದಿಕೆ ಮತ್ತು ಆಹಾರ ಧಾನ್ಯಗಳನ್ನು ನೀಡಿ ಮತ್ತೆ ಅವರ ಊರುಗಳಿಗೆ ಬಿಟ್ಟು ಬರುತ್ತಾರೆ. ಡಿಎಸ್ ಮ್ಯಾಕ್ಸ್ ಸಂಸ್ಥೆಯ ನೌಕರರು, ಸಿಬ್ಬಂದಿ ಹಾಗೂ ಗ್ರಾಹಕರಿಂದ 1500ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಣೆ ಮಾಡಿ ಕಿದ್ವಾಯಿ ಸೇರಿ ಮತ್ತಿತರರ ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ.
1800 ನೌಕರರು, 3500 ಕಾರ್ವಿುಕರು:ಕರೊನಾ ಸಂದರ್ಭದಲ್ಲಿ ಸಮಸ್ಯೆಯಾಗಿ ಹಲವು ಕಾರ್ವಿುಗಳು ರಾಜಧಾನಿಯನ್ನು ತೊರೆದು ತಂತಮ್ಮ ಊರುಗಳತ್ತ ಹೊರಟು ಹೋದರು. ಆದರೆ ಈ ಸಂಸ್ಥೆಯು ತಮ್ಮ ಕಾರ್ವಿುಕರಿಗೆ ಬೇಕಾದ ಸವಲತ್ತುಗಳನ್ನು ನೀಡಿ ಅವರನ್ನು ಇಲ್ಲಿಯೇ ಉಳಿಸಿಕೊಂಡಿತ್ತು. 2020ರ ಮಾರ್ಚ್ ನಿಂದ 2022ರ ಮಾರ್ಚ್​ವರೆಗೆ ಸುಮಾರು 2 ವರ್ಷ ತಮ್ಮ 3 ಸಾವಿರ ಕಾರ್ವಿುಕರನ್ನು ಇಲ್ಲಿಯೇ ಉಳಿದುಕೊಂಡಿತ್ತು. ಪಡಿತರ ನೀಡಿ, ಕಟ್ಟಡಗಳ ಒಳಭಾಗದ ಕೆಲಸವನ್ನು ನೋಡಿಕೊಳ್ಳುವಂತೆ ಮಾಡಿದ್ದರು. ಇವರ ಆರೋಗ್ಯದ ಬಗ್ಗೆ ವಿಚಾರಿಸಲು ವೈದ್ಯರನ್ನು ನೇಮಿಸಿತ್ತು. ಸಂಸ್ಥೆಯಲ್ಲಿ 1800 ನೌಕರರು ಹಾಗೂ 3500 ಕಾರ್ವಿುಕರು ಇದ್ದಾರೆ. ಇವರನ್ನು ಒಳ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಸದ್ಯ 1080 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಇದು ಅತ್ಯಂತ ದೊಡ್ಡ ಪ್ರಾಜೆಕ್ಟ್ ಆಗಿದೆ.
ಕೆ.ವಿ. ಸತೀಶ್ ನನ್ನ ಗುರು:ನನಗೆ ಗುರು ಅಂತಾ ಯಾರು ಇಲ್ಲ. ಆದರೆ ಡಿಎಸ್ ಮ್ಯಾಕ್ಸ್​ನ ಅಧ್ಯಕ್ಷರಾದ ಸತೀಶ್, ನನ್ನ ಗುರು ಎಂದೇ ಹೇಳಬಹುದು ಎನ್ನುತ್ತಾರೆ ದಯಾನಂದ್. ನಾವಿಬ್ಬರು ಇಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರಲ್ಲ. ಆದರೆ ಏನಾದರೂ ಸಾಧಿಸುವ ಹಂಬಲವನ್ನು ಇಬ್ಬರೂ ಹೊಂದಿದ್ದೆವು. ನಮ್ಮ ಪ್ರಯತ್ನ, ದೇವರ ಮತ್ತು ಪಾಲಕರ ಆಶೀರ್ವಾದದಿಂದ ಈ ಹಂತಕ್ಕೆ ತಲುಪಿದ್ದೇವೆ. ದೀರ್ಘ ಕಾಲದಿಂದ ಇಬ್ಬರು ಜತೆಯಾಗಿಯೇ ಇದ್ದೇವೆ. ಮುಂದೆಯೂ ಹೀಗೆಯೇ ಇರುತ್ತೇವೆ. ನಮ್ಮ ಬಳಿ ಮನೆಗಳನ್ನು ಖರೀದಿ ಮಾಡಿರುವವರು ಯಾವುದೇ ಸಮಸ್ಯೆ ಹೊತ್ತು ಬಂದರೂ ಕೊಂಚವೂ ಬೇಸರ ಮಾಡಿಕೊಳ್ಳದೆ ಅದನ್ನು ಬಗೆಹರಿಸುತ್ತೇವೆ. ವ್ಯವಹಾರಕ್ಕಿಂತ ವಿಶ್ವಾಸ ಮುಖ್ಯ. ಇದರಿಂದ ಗ್ರಾಹಕರು ಖುಷಿಯಾಗುತ್ತಾರೆ ಅವರ ಸಂತೋಷವೇ ನಮ್ಮ ಸಂತೋಷ ಎನ್ನುತ್ತಾರೆ ದಯಾನಂದ್.
ಅಮ್ಮನ ಪ್ರತಿಮೆ ಸ್ಥಾಪನೆ:ಹುಣಸಗಿ ಮುಖ್ಯರಸ್ತೆಯಲ್ಲಿ ತಮ್ಮ ತಾಯಿ ಸುಶೀಲಮ್ಮ ಪಟ್ಟಣಶೆಟ್ಟಿ ಅವರ ನೆನಪಿಗಾಗಿ ದಯಾನಂದ್ ಅವರು ದೇವಸ್ಥಾನ ನಿರ್ವಿುಸಿದ್ದು, ಅಲ್ಲಿ ತಾಯಿಯವರ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ. ನಿತ್ಯವೂ ಅಲ್ಲಿ ಪೂಜೆ ನಡೆಯುತ್ತದೆ. ಕಷ್ಟಪಟ್ಟು ದುಡಿದರೆ ಮುಂದೆ ರಾಜನಂತೆ ಮೆರೆಯುತ್ತೀಯಾ ಎಂದು ಇವರ ತಾಯಿ ಹೇಳುತ್ತಿದ್ದರಂತೆ. ಆ ಮಾತು ನಿಜವಾಗಿದೆ.
ಸಾಮಾಜಿಕ ಚಟುವಟಿಕೆ:ಆಶ್ರಾ ಫೌಂಡೇಷನ್ ಹಾಗೂ ಕೆವಿಎಸ್ ಫ್ಯಾನ್ಸ್ ಚಾರಿಟಬಲ್ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕವೂ ಅನೇಕ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದಾರೆ. 45 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಶಿಕ್ಷಣದ ಖರ್ಚನ್ನು ಸಂಸ್ಥೆಯೇ ಭರಿಸುತ್ತಿದೆ. ಬಡಮಕ್ಕಳಿಗೆ ಉಚಿತ ಶಿಕ್ಷಣ, ನೇತ್ರ ತಪಾಸಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಗಾಲಿ ಖುರ್ಚಿಗಳ ವಿತರಣೆ, ಸಾಮೂಹಿಕ ವಿವಾಹ ಸೇರಿ ಹಲವು ಸಮಾಜ ಮುಖಿಯಾದ ಕೆಲಸ ಮಾಡಲಾಗುತ್ತಿದೆ. ಜೂನ್ 19 ಸಂಸ್ಥೆಯ ವಾರ್ಷಿಕೋತ್ಸವ ದಿನವಾಗಿದ್ದು, ಅಂದು ಡಿಎಸ್ ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ ಹಾಗೂ ಡಿಎಸ್ ಮ್ಯಾಕ್ಸ್ ಕರುನಾಡು ರತ್ನ ಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕನ್ನಡ ರಾಜ್ಯೋತ್ಸವದಂದು ಡಿಎಸ್ ಮ್ಯಾಕ್ಸ್ ಸಾಹಿತ್ಯಶ್ರೀ ಪ್ರಶಸ್ತಿಯನ್ನು ವಿತರಿಸಲಾಗುತ್ತಿದೆ. 2012ರಿಂದ ವಿವಿಧ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ.
ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಸ್ವೀಕರಿಸಿರುವುದು ತುಂಬಾ ಖುಷಿಯಾಗಿದೆ. ಈ ಪ್ರಶಸ್ತಿಯನ್ನು ಡಿಎಸ್ ಮ್ಯಾಕ್ಸ್ ಸಂಸ್ಥೆಗೆ ಅರ್ಪಿಸಲು ಇಷ್ಟಪಡುತ್ತೇನೆ. ವ್ಯಕ್ತಿಗಳಿಗೆ ಗೌರವ ಮತ್ತು ಪ್ರಶಸ್ತಿಗಳು ಬಂದಾಗ ಅವರ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಾಗುತ್ತದೆ. ಸಾಧನೆ ಸಾಧಕನ ಸೊತ್ತೇ ಹೊರತು. ಸೊಂಬೇರಿಗಳ ಸೊತ್ತಲ್ಲ.
| ಡಾ.ಎಸ್.ಪಿ. ದಯಾನಂದ್ಡಿಎಸ್ ಮ್ಯಾಕ್ಸ್ ಕನ್​ಸ್ಟ್ರಕ್ಷನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ
ನರೇಂದ್ರ ಮೋದಿ ಹುಟ್ಟಿದ್ದೆ ಈ ದೇಶವನ್ನ ಹಿಂದೂರಾಷ್ಟ್ರ ಮಾಡೋಕೆ: ಶಾಸಕ ಯತ್ನಾಳ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
