ಬೆಂಗಳೂರು:ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಫಿಲಾಂತ್ರಾಪಿಸ್ಟ್ (ಕೊಡುಗೈ ದಾನಿ), ಸದಾ ಜನಪರ ಹಾಗೂ ಜೀವಪರ ಕಾಳಜಿಯೊಂದಿಗೆ ಸಮಾಜೋಧಾರ್ಮಿಕ ಸೇವೆಯಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಬಿಜೆಪಿ ಮುಖಂಡ, ಶರಣ ಜೀವಿಗುರುನಾಥ ಕೊಳ್ಳುರ್ಅವರು ಕನ್ನಡದ ನಂ.1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ನ್ಯೂಸ್ವಾಹಿನಿಯ ಪ್ರತಿಷ್ಠಿತವಿಜಯರತ್ನ-2022ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೊಳ್ಳುರ್ ಅವರು ನಿರಂತರ ಮಾಡುತ್ತಿರುವ ಸಮಾಜಮುಖಿ ಸೇವಾ ಚಟುವಟಿಕೆ ಗುರುತಿಸಿ ವಿಜಯರತ್ನ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೊಳ್ಳುರ್ ಸೇರಿ 42 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ಮಿಳಾ ಮಾಂಡ್ರೆ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷೆ ವಾಣಿ ಆನಂದ ಸಂಕೇಶ್ವರ ಇತರರಿದ್ದರು.
ನಿರಂತರ ಸಮಾಜಸೇವೆ:ಬೀದರ್ ಜಿಲ್ಲೆ ಕಂಡ ಅಪರೂಪದ ಹಾಗೂ ವಿಶಿಷ್ಟ ವ್ಯಕ್ತಿಗಳ ಸಾಲಿನಲ್ಲಿ ಗುರುನಾಥ ಕೊಳ್ಳುರ್ ಹೆಸರು ಅಗ್ರ ಪಂಕ್ತಿಯಲ್ಲಿದೆ. ಇವರು ಕೇವಲ ಹಿರಿಯ ಉದ್ಯಮಿ, ಬಿಜೆಪಿ ಮುಖಂಡರು ಮಾತ್ರವಲ್ಲ. ಇವರೊಬ್ಬ ಅಪ್ಪಟ ಹೃದಯವಂತ ಸಾಮಾಜಿಕ ಜೀವಿ. ಕೊಡುಗೈ ದಾನಿ. ಅಭಿವೃದ್ಧಿಪರ ವಿಚಾರಧಾರೆಯುಳ್ಳ ಚಿಂತಕರು. ನಯ, ವಿನಯ, ಸರಳ ವ್ಯಕ್ತಿತ್ವ ಮೂಲಕವೇ ಶ್ರೇಷ್ಠ ಸಾಧನೆಗಳು ಮಾಡಿದ ಶರಣ ಜೀವಿ. ಮಹಾತ್ಮ ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲ-ಶಿವಭಕ್ತರಿಗಿಂತ ಹಿರಿಯರಿಲ್ಲ’ ಮತ್ತು ‘ಕಾಯಕ-ದಾಸೋಹ’ ತತ್ವ ಬದುಕಿನಲ್ಲಿ ಅಳವಡಿಸಿಕೊಂಡು ಅನುಕ್ಷಣವೂ ಜೀವನದಲ್ಲಿ ಸಾರ್ಥಕ್ಯ ಕಾಣುತ್ತಿದ್ದಾರೆ.
ಕೊಳ್ಳುರ್ ಅವರು ಗುತ್ತಿಗೆ ಕ್ಷೇತ್ರದಲ್ಲಿ ಬೀದರ್ ಮಾತ್ರವಲ್ಲ, ರಾಜ್ಯದ ಗಮನ ಸೆಳೆದಿದ್ದಾರೆ. ನಿಗದಿತ ಅವಧಿಯೊಳಗೆ ಗುಣಮಟ್ಟದ ಕೆಲಸ ಮಾಡಿ ಸರ್ಕಾರದಿಂದ ಅನೇಕ ಪ್ರಶಸ್ತಿ, ಸಮ್ಮಾನಗಳಿಗೆ ಭಾಜನರಾಗಿದ್ದಾರೆ. ಮೂರು ತಿಂಗಳ ಅವಧಿಯ ಬೀದರ್ ಏರ್‌ಪೋರ್ಟ್ ಟರ್ಮಿನಲ್ ಕೆಲಸ ಕೇವಲ 20 ದಿನದಲ್ಲಿ ಮುಗಿಸಿ ದೇಶದಲ್ಲೇ ದಾಖಲೆ ಮಾಡಿದ್ದಾರೆ. ಹಗಲಿರುಳೆನ್ನದೇ ಉತ್ತಮ ಕಾಯಕ ಮಾಡುವ ಜತೆಗೆ ನಿರಂತರವಾಗಿ ಸಮಾಜೋಧಾರ್ಮಿಕ ಕೆಲಸಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತಿರುವ ದಾಸೋಹ ಜೀವಿ. ಬೀದರ್ ಕಂಡಂಥ ಅಪರೂಪದ ಫಿಲಾಂತ್ರಾಪಿಸ್ಟ್(ಕೊಡುಗೈ ದಾನಿ) ಇವರು.
ಸ್ನೇಹ ಜೀವಿ, ಅಜಾತಶತ್ರು:ಕೊಳ್ಳುರ್ ಉತ್ತಮ ಸ್ನೇಹ ಜೀವಿ. ಇನ್ನೊಬ್ಬರ ನೋವು, ಕಷ್ಟ ಕಂಡು ಮಿಡಿಯುವ ಹೃದಯ. ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಕೈಲಾದಷ್ಟು ನೆರವು ನೀಡುವ ಹೃದಯವೈಶಾಲ್ಯತೆ ಹೊಂದಿದ್ದಾರೆ. ಎಲ್ಲರೊಂದಿಗೆ ಬೆರೆತು ಬಾಳುವ ಸರಳ ವ್ಯಕ್ತಿತ್ವ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಅಜಾತಶತ್ರು ಎನಿಸಿದ್ದಾರೆ. ಅಪ್ಪಟ ಬಸವ ತತ್ವಾಭಿಮಾನಿ ಜತೆಗೆ ಅಧ್ಯಾತ್ಮಿಕ ಜೀವಿಯೂ ಆಗಿದ್ದಾರೆ.
1963ರ ಸೆಪ್ಟೆಂಬರ್ 18ರಂದು ಔರಾದ್ ತಾಲೂಕಿನ ಕೊಳ್ಳುರ್‌ನಲ್ಲಿ ಗುರುನಾಥ ಜನಿಸಿದ್ದಾರೆ. ಮೊದಲು ಜಿ.ಕೆ.ಕನ್ಸ್‌ಟ್ರಕ್ಶನ್ (ಜಿಕೆಸಿ) ಸಂಸ್ಥೆ ಕಟ್ಟಿದರು. ಐದು ವರ್ಷದ ಹಿಂದೆ ಕೊಳ್ಳುರ್ ಗುರುನಾಥ ಕನ್ಸ್‌ಟ್ರಕ್ಶನ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್(ಕೆಜಿಸಿಐಪಿಎಲ್) ಸ್ಥಾಪಿಸಿದ್ದು, ಇದರ ಹೊಣೆ ಸಿವಿಲ್ ಇಂಜಿನಿಯರಿಂಗ್ ಪದವೀಧರ ಪುತ್ರ ಸಚಿನ್‌ಗೆ ಒಪ್ಪಿಸಿ ತಾವು ಸಮಾಜಸೇವೆಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಕೆಜಿಸಿಐಪಿಎಲ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಕೊಳ್ಳುರ್ ಅವರದ್ದು ಸುಸಂಸ್ಕೃತ ಪರಿವಾರ. ಪತ್ನಿ ಲಕ್ಷ್ಮೀ ಗೃಹಿಣಿ. ನಾಲ್ವರು ಹೆಣ್ಣು ಮಕ್ಕಳು. ಎಲ್ಲರಿಗೂ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಕಳೆದ ಫೆ.7 ರಂದು ಪುತ್ರ ಸಚಿನ್ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ನಡೆದಿದೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರು, ಹಿರಿಯ ಅಧಿಕಾರಿಗಳು, ಗಣ್ಯರು ಮದುವೆಗೆ ಆಗಮಿಸಿದ್ದರು. ಇಡೀ ಕ್ಯಾಬಿನೆಟ್ ಇಲ್ಲಿ ಸೇರಿತ್ತು. ಇದು ಕೊಳ್ಳುರ್ ಅವರು ಎಲ್ಲರೊಂದಿಗೆ ಹೊಂದಿರುವ ಆತ್ಮೀಯ ಸಂಬಂಧ, ದೊಡ್ಡ ಮಟ್ಟದಲ್ಲಿ ಗಳಿಸಿದ ವರ್ಚಸ್ಸು ಎಂಥದ್ದು ಎಂಬುದಕ್ಕೆ ಸಾಕ್ಷಿಯಾಯಿತು.
ಫಲಾಪೇಕ್ಷೆ ಇಲ್ಲದೆ ಜನಪರ ಕಾರ್ಯ:ಬಡತನದಲ್ಲಿ ನೊಂದು, ಬೆಂದು ಬೆಳೆದು ಸಾಧನೆ ಮಾಡಿದ ಗುರುನಾಥ ಕೊಳ್ಳುರ್ ಅವರು ಕಷ್ಟದಲ್ಲಿದ್ದವರಿಗೆ ಜಾತಿ, ಮತದ ಭೇದ ಮಾಡದೆ ಕೈಲಾದಷ್ಟು ಸಹಾಯಹಸ್ತ ಚಾಚುತ್ತಾರೆ. ಅನೇಕ ನೊಂದವರ ಕಣ್ಣೀರು ಒರೆಸಿದ್ದಾರೆ. ನೂರಾರು ಬಡ ಪ್ರತಿಭೆಗಳ ಶಿಕ್ಷಣಕ್ಕೆ ನೆರವು ನೀಡಿ ಅವರ ಭವಿಷ್ಯ ಬೆಳಗಿಸಿದ್ದಾರೆ. ಸಮಾಜಪರ, ಜೀವಪರ, ಜನಪರ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡಲು ಜಿ.ಕೆ.ಫೌಂಡೇಷನ್ ಸ್ಥಾಪಿಸಿದ್ದಾರೆ. ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ 75 ಸಾವಿರಕ್ಕೂ ಹೆಚ್ಚು ತಿರಂಗಾ ಜನರಿಗೆ ಉಚಿತ ವಿತರಿಸಿ ದಾಖಲೆ ಮಾಡಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮೂರು ದಶಕಗಳಿಂದ ಜನಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಎಡಗೈಯಿಂದ ಕೊಟ್ಟರೆ ಬಲಗೈಗೆ ಗೊತ್ತಾಗದಂಥ ಇವರ ಸ್ವಭಾವ ಮಾದರಿ. ಯಾವತ್ತೂ ಪ್ರಚಾರದ ಹಿಂದೆ ಬಿದ್ದಿಲ್ಲ. ಜನಸೇವೆ ತುಡಿತ ಇವರಿಗೆ ದಿನೇ ದಿನೆ ಎತ್ತರಕ್ಕೆ ಒಯ್ಯುತ್ತಿದೆ. ಇವರ ಕೆಲಸ-ಕಾರ್ಯಗಳು ಬೀದರ್ ಜನಮನದಲ್ಲಿ ಮನೆ ಮಾಡಿವೆ. ನಮ್ಮ ಸಂಕಷ್ಟಕ್ಕೆ ಮಿಡಿಯುವ ಹೃದಯವೊಂದಿದೆ ಎಂಬ ಭರವಸೆ ಮೂಡಿಸಿದೆ. ಒಬ್ಬ ಸಮಾಜಜೀವಿ ಹೇಗೆಲ್ಲ ಜನರ ವಿಶ್ವಾಸ ಗಳಿಸಬಹುದು ಎಂಬುದಕ್ಕೆ ಕೊಳ್ಳುರ್ ಉದಾಹರಣೆ ಎನಿಸಿದ್ದಾರೆ.
ಜೀವನ ನಮಗೆ ದೇವರು ಕೊಟ್ಟು ದೊಡ್ಡ ಕಾಣಿಕೆ. ಇದನ್ನು ಸಾರ್ಥಕವಾಗಿಸಲು ನಿರಂತರ ಪ್ರಯತ್ನಿಸಬೇಕು. ನಮ್ಮಿಂದ ಯಾವತ್ತೂ ಇನ್ನೊಬ್ಬರ ಮನಸ್ಸು ನೋಯಿಸಬಾರದು. ಮತ್ತೊಬ್ಬರ ಬಗ್ಗೆ ಕೆಟ್ಟದ್ದನ್ನು ಯೋಚನೆಯೂ ಮಾಡಬಾರದು. ಹಿಂದಿನ ದಿನಗಳನ್ನು ಮೆಲಕು ಹಾಕಿ ಮುಂದಿನ ಹೆಜ್ಜೆ ಇಡಬೇಕು. ಸಮಾಜದಲ್ಲಿ ಒಳ್ಳೆಯವರಾಗಿ ಬಾಳಲು ಚಿಂತಿಸಬೇಕು. ಮತ್ತೊಬ್ಬರಿಗೆ ನೆರವಾಗುವ ಅವಕಾಶ ಸಿಕ್ಕರೆ ಅದೇ ನಮ್ಮ ಸೌಭಾಗ್ಯ.| ಗುರುನಾಥ ಕೊಳ್ಳುರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 11 =
Remember me
