ಬೆಂಗಳೂರು:ಸುಲಭ-ಸರಳ ಚಿಕಿತ್ಸಾ ಪದ್ಧತಿಯಾಗಿರುವ ಹೋಮಿಯೋಪಥಿಯನ್ನು ಜನಪ್ರಿಯವಾಗಿಸುವ ನಿಟ್ಟಿನಲ್ಲಿ “ನಮ್ಮ ಹೋಮಿಯೋಪಥಿ’ ಹೆಸರಿನ ಚಿಕಿತ್ಸಾ ಕೇಂದ್ರಗಳನ್ನು ಹಲವು ಕಡೆ ಸ್ಥಾಪಿಸಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ “ನಮ್ಮ ಹೋಮಿಯೋಪಥಿ’ ನಿರ್ದೇಶಕ ಡಾ. ಕೆ ಮಂಜುನಾಥ್​ ತಂಡದವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ “ವಿಜಯರತ್ನ-2022′ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ 40 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಮಲ್ಲೇಶ್ವರ, ಜಯನಗರ, ಹುಬ್ಬಳಿಯ 3 ಶಾಖೆಗಳು ಹಾಗೂ 20 ಸಿಬ್ಬಂದಿಯಿಂದ ಆರಂಭವಾದ “ನಮ್ಮ ಹೋಮಿಯೋಪಥಿ’ ಕೆಲವೇ ವರ್ಷಗಳಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ತನ್ನ 20 ಶಾಖೆಗಳನ್ನು ಸ್ಥಾಪಿಸುವ ಮೂಲಕ 400 ಸಿಬ್ಬಂದಿಗೆ ಉದ್ಯೋಗ ನೀಡುವ ಮಟ್ಟಿಗೆ ಹೆಮ್ಮೆರವಾಗಿ ಬೆಳೆದಿದ್ದು, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಮನೆ ಮಾತಾಗಿದೆ. ಅಲ್ಲದೆ, ಹಲವು ಸಮಾಜಮುಖಿಯಾದ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿದೆ.
ಸ್ನೇಹಿತರಿಂದ ಆರಂಭವಾದ ಸಂಸ್ಥೆಹೋಮಿಯೋಪಥಿ ಪದವಿ ಪಡೆದ 5 ಮಂದಿ ಆತ್ಮೀಯ ಸ್ನೇಹಿತರು ಒಟ್ಟುಗೂಡಿ 2017ರಲ್ಲಿ ಸ್ಥಾಪಿಸಿದ ಚಿಕಿತ್ಸಾ ಕೇಂದ್ರವೇ “ನಮ್ಮ ಹೋಮಿಯೋಪಥಿ’. ಹೋಮಿಯೋಪಥಿ ಚಿಕಿತ್ಸಾ ವಿಧಾನವನ್ನು ಹೆಚ್ಚು ಪ್ರಚುರ ಪಡಿಸಿ, ಅದರ ಶಕ್ತಿ ಮತ್ತು ಔಷಧ ಪ್ರತಿಯೊಂದು ಮನೆಗೆ ತಲುಪಬೇಕು ಎಂಬ ಮಹತ್ವದ ಉದ್ದೇಶದಿಂದ ನಮ್ಮ ಹೋಮಿಯೋಪಥಿ ಪ್ರಾರಂಭಿಸಲಾಗಿದೆ. ಇವತ್ತಿನ ಔಷಧಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೂ ಅಡ್ಡಪರಿಣಾಮ ಇದೆ. ಯಾವುದೇ ಅಡ್ಡಪರಿಣಾಮ ಇಲ್ಲದೇ ಇರುವ ಚಿಕಿತ್ಸೆ ಹೋಮಿಯೋಪಥಿಯಲ್ಲಿದೆ ಎನ್ನುತ್ತಾರೆ ಡಾ. ಮಂಜುನಾಥ್​.
ನೈಸರ್ಗಿಕ ಚಿಕಿತ್ಸಾ ಪದ್ಧತಿಹೋಮಿಯೋಪಥಿಗೆ 200 ವರ್ಷಗಳ ಇತಿಹಾಸವಿದೆ. ಇದನ್ನು 1796ರಲ್ಲಿ ಜರ್ಮನ್​ ಮೂಲದ ಡಾ.ಸ್ಯಾಮ್ಯುಯಲ್​ ಹನಿಮನ್​ ಕಂಡು ಹಿಡಿದರು. ಈ ವೈದ್ಯಪದ್ಧತಿಯ ಮಹತ್ವ ಏನೆಂದರೆ ಇದರಲ್ಲಿ ಯಾವುದೇ ಕೆಮಿಕಲ್​, ಸ್ಟೇರಾಯ್ಡ್​ಗಳು ಇರುವುದಿಲ್ಲ. ತೊಂದರೆ ಕೊಡುವ ಔಷಧಗಳಿರುವುದಿಲ್ಲ. ನೈಸರ್ಗಿಕವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಗಳಿಗೆ ಹೊಂದುವಂತಹ ಔಷಧ ಕೊಡಲಾಗುತ್ತದೆ. ಹೀಗಾಗಿ ಇದರಲ್ಲಿ ಯಾವುದೇ ಸೈಡ್​ಎಫೆಕ್ಟ್​​ ಇರುವುದಿಲ್ಲ. ಈ ಔಷಧದಿಂದ ಇರುವ ಕಾಯಿಲೆ ವಾಸಿಯಾಗುತ್ತದೆಯೇ ಹೊರತು ಮತ್ತೊಂದು ಕಾಯಿಲೆ ಬರುವುದಿಲ್ಲ. ಹೋಮಿಯೋಪಥಿಯಲ್ಲಿ ಸಣ್ಣ ನೆಗಡಿಯಿಂದ ಕ್ಯಾನ್ಸರ್​ವರೆಗೂ ಔಷಧವಿದೆ. ಎಲ್ಲ ವಯೋಮಾನದವರಿಗೂ ಚಿಕಿತ್ಸೆ ಇದೆ. ಬುಡದಿಂದ ಕಾಯಿಲೆಯನ್ನು ವಾಸಿ ಮಾಡುತ್ತದೆ. ನಮ್ಮಲ್ಲಿ ಬರುವ ರೋಗಿಗಳ ಪೈಕಿ ಶೇ.80 ರಿಂದ 90 ಮಂದಿ ಸಂಪೂರ್ಣ ಗುಣಮುಖ ಹೊಂದುತ್ತಾರೆ ಎನ್ನುತ್ತಾರೆ ಡಾ. ಮಂಜುನಾಥ್​.
ಶಾಖೆಗಳ ವಿಸ್ತರಣೆ2017ರಲ್ಲಿ ಮೂರು ಶಾಖೆಗಳು ಹಾಗೂ 20 ಸಿಬ್ಬಂದಿಯಿಂದ ಆರಂಭವಾದ ನಮ್ಮ ಹೋಮಿಯೋಪಥಿ, 2022ರ ಹೊತ್ತಿಗೆ ಸುಮಾರು 20 ಶಾಖೆಯನ್ನು ಹೊಂದಿದೆ. ಇದರಲ್ಲಿ 11 ಶಾಖೆ ಕರ್ನಾಟಕ, 9 ಶಾಖೆ ಮಹಾರಾಷ್ಟ್ರದಲ್ಲಿದೆ. ಬೇರೆ ರಾಜ್ಯದ ಜನರು ಈ ವೈದ್ಯ ಸೇವೆಯನ್ನು ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ 2019ರಲ್ಲಿ ಮಹಾರಾಷ್ಟ್ರದಲ್ಲಿ ಶಾಖೆ ಪ್ರಾರಂಭಿಸಲಾಯಿತು. ಸಾರಿಗೆ ಸೌಲಭ್ಯ ಇರುವ ಕಡೆ ನಮ್ಮ ಹೋಮಿಯೋಪಥಿ ಆರಂಭಿಸಲಾಗಿದೆ. ಇನ್ನು 2-3 ರಾಜ್ಯಗಳಲ್ಲಿ ಹೋಮಿಯೋಪಥಿ ಸೇವೆ ತಲುಪಿಸುವ ಗುರಿ ಹೊಂದಿದ್ದಾರೆ. ಮತ್ತಷ್ಟು ಜನರಿಗೆ ಹೋಮಿಯೋಪಥಿಯ ಮಹತ್ವ ತಿಳಿಸಲು ಮುಂದಾಗಿದ್ದಾರೆ. ರೋಗದ ಲಕ್ಷಣಕ್ಕೆ ಚಿಕಿತ್ಸೆ ನೀಡದೆ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಒಂದು ಬಾರಿ ಗುಣವಾದರೆ ಮತ್ತೆ ಕಾಯಿಲೆ ಬರುವುದಿಲ್ಲ. ಜೀವನ ಪರ್ಯಂತ ಔಷಧ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.
ನುರಿತ ವೈದ್ಯರ ತಂಡಸಂಶೋಧನೆ ಮಾಡಿ ಔಷಧ ನೀಡಲಾಗುತ್ತದೆ. ಇದಕ್ಕಾಗಿಯೇ ಒಂದು ಸಂಶೋಧನಾ ತಂಡವನ್ನು ಕಟ್ಟಿಕೊಳ್ಳಲಾಗಿದೆ. 50 ಕ್ಕೂ ಹೆಚ್ಚು ನುರಿತ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ವೈದ್ಯರು ಹಾಗೂ 400ಕ್ಕೂ ಸಿಬ್ಬಂದಿ ನಮ್ಮ ಹೋಮಿಯೋಪಥಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರೇ ಇವರ ಬೆನ್ನೆಲುಬು. ಔಷಧ ಕೊಟ್ಟ ನಂತರ ರೋಗಿಗಳಿಗೆ ಸರ್ವಿಸ್​ ಕೊಟ್ಟು ಫೀಡ್​ಬ್ಯಾಕ್​ ಕೂಡ ಪಡೆದುಕೊಳ್ಳುತ್ತಾರೆ. ಕಾಲ್​ ಸೆಂಟರ್​ನಲ್ಲಿ 150 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಔಷಧ ಹೇಗೆ ಕೆಲಸ ಮಾಡುತ್ತಿದೆ. ಔಷಧ ಮುಗಿಯುವ ಮುನ್ನವೇ ಕಾಲ್​ ಸೆಂಟರ್​ ಸಿಬ್ಬಂದಿ ಕರೆ ಮಾಹಿತಿ ಪಡೆಯುತ್ತಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಕಾಲ್​ ಸೆಂಟರ್​ಗಳು ಮಲ್ಲೇಶ್ವರದಲ್ಲಿರುವ ಕಚೇರಿಯಿಂದಲೇ ಕಾರ್ಯನಿರ್ವಹಿಸುತ್ತವೆ. ಚಾನಲ್​ಗಳಲ್ಲಿ ಬರುವಂತಹ ನಮ್ಮ ಹೋಮಿಯೋಪಥಿ ಜಾಹೀರಾತುಗಳನ್ನು ನೋಡಿ ಕರೆ ಮಾಡುವ ರೋಗಿಗಳಿಗೆ ಸ್ಪಂದಿಸಿ ಅವರಿಗೆ ಸಮೀಪದಲ್ಲಿರುವ ಶಾಖೆಯನ್ನು ಸೂಚಿಸಿತ್ತಾರೆ.
ಸಮಾಜ ಸೇವೆನಮ್ಮ ಹೋಮಿಯೋಪಥಿ ಮೂಲಕ ಪ್ರತಿ ತಿಂಗಳು ತುಮಕೂರಿನ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಉಚಿತ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಇದೇ ರೀತಿ ಇತರ ಕಡೆಗಳಲ್ಲಿ ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಕೋವಿಡ್​ ಸಂದರ್ಭದಲ್ಲಿ ರೋಗಿಗಳ ಮನೆಗಳಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆ ಸಂದರ್ಭದಲ್ಲಿ ಸುಮಾರು 1 ಲಕ್ಷ ಕಿಟ್​ಗಳನ್ನು ವಿತರಿಸಿದ್ದಾರೆ.
ಕುಟುಂಬದಿಂದ ಹೋಮಿಯೋಪಥಿ ಪದ್ಧತಿ ಸೇವೆಡಾ.ಮಂಜುನಾಥ್​ ಅವರ ತಂದೆ ಜೆ.ಕೆಂಪಣ್ಣ, ತಾಯಿ ರಾಧಾ. ತಂದೆ ಸರ್ಕಾರಿ ಸೇವೆಯಲ್ಲಿದ್ದವರು. ಜತೆಗೆ ಹೋಮಿಯೊಪಥಿ ಔಷಧಕಾರರಾಗಿದ್ದರು. ಹೀಗಾಗಿ ಮಂಜುನಾಥ್​ ಕಿರಿಯ ವಯಸ್ಸಿನಿಂದಲೇ ಹೋಮಿಯೋಪಥಿಗೆ ಒಗ್ಗಿ ಹೋಗಿದ್ದರು. ಆಗಿನಿಂದಲೇ ಹೋಮಿಯೊಪಥಿ ವೈದ್ಯರಾಗುವ ಕನಸು ಕಂಡಿದ್ದರು. ಹೋಮಿಯೊಪಥಿ ವೈದ್ಯಪದ್ಧತಿಯಲ್ಲಿ ಪದವಿ ಪಡೆದುಕೊಂಡ ಡಾ.ಮಂಜುನಾಥ್​ ಮಟೀರಿಯಾ ಮೆಡಿಕಾದಲ್ಲಿ ಇಡೀ ರಾಜ್ಯಕ್ಕೆ ಪ್ರಥಮರಾಗಿ ಸ್ವರ್ಣ ಪದಕ ಪಡೆದವರು. ಪತ್ನಿ ಡಾ.ಆಶಾ ರಾಣಿ ಕೂಡ ಹೋಮಿಯೊಪಥಿ ವೈದ್ಯರಾಗಿರುವುದು ಮಂಜುನಾಥ್​ ಸೇವಾ ವೃತ್ತಿಯಲ್ಲಿನ ಸಾಧನೆಗೆ ಪೂರಕ ಶಕ್ತಿಯಾಗಿದೆ.
ನಮ್ಮ ಹೋಮಿಯೋಪಥಿ ತಂಡನಮ್ಮ ಹೋಮಿಯೊಪಥಿಯ ಚೇರ್ಮನ್​ ಮತ್ತು ಮ್ಯಾನೇಜಿಂಗ್​ ಡೈರೆಕ್ಟರ್​ ಡಾ. ಮೊರೆ ರಾಘು ಪ್ರಸಾದ್​. ಡಾ. ಮಂಜುನಾಥ್​, ಡಾ. ಪ್ರಶಾಂತ್​, ಡಾ.ವಿಶ್ವಾಸ್​ ರೆಡ್ಡಿ, ಅಲೋಕ್​ ಕುಮಾರ್​ ನಿರ್ದೆಶಕರುಗಳು.
ನಮ್ಮ ಹೋಮಿಯೋಪಥಿಯ ಸಮಾಜಮುಖಿ ಕೆಲಸ ಹಾಗೂ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯಿಂದ ಮತ್ತಷ್ಟು ಜವಬ್ದಾರಿ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಸೇವೆ ಮಾಡಲು ಈ ಪ್ರಶಸ್ತಿ ಸ್ಫೂರ್ತಿಯನ್ನು ನೀಡಲಿದೆ.| ಡಾ. ಕೆ. ಮಂಜುನಾಥ್​, ನಮ್ಮ ಹೋಮಿಯೋಪಥಿ ನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
