ವಿಜಯಪುರದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುವ ಮೂಲಕ ಸಾಧನೆ ಮಾಡಿರುವ ‘ಶಿಕ್ಷಣ ತಜ್ಞ’ ಎಂದೇ ಖ್ಯಾತಿಪಡೆದಿರುವ ಎಕ್ಷಲೆಂಟ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕವಲಗಿ ಅವರಿಗೆ ಕನ್ನಡದ ನಂ.1 ದಿನಪತ್ರಿಕೆವಿಜಯವಾಣಿಮತ್ತುದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತವಿಜಯರತ್ನ -2022ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ ಪರಿಸರದ ಕಾಳಜಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್​, ಖ್ಯಾತ ಚಿತ್ರನಟ ರಮೇಶ್​ ಅರವಿಂದ್​, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಧಾನ ಪರಿಷತ್​ ಸದಸ್ಯ ಬಿ.ಜಿ. ಪಾಟೀಲ್​ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಣ ಕ್ಷೇತ್ರದ ಮೇರು:ವಿಜಯಪುರದ ಶಿಕ್ಷಣ ಕ್ಷೇತ್ರದಲ್ಲಿ ಎಕ್ಸಲೆಂಟ್​ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕವಲಗಿ ಅವರ ಸಾಧನೆಯ ಹೆಜ್ಜೆಗಳು ಅತ್ಯಂತ ರೋಚನೀಯ. ಹೃದಯವಂತ ಸ್ನೇಹಿತ ಶಿವಾನಂದ ಕೆಲೂರ ಅವರೊಂದಿಗೆ 1994ರಲ್ಲಿ ಮುರ್ನಾಲ್ಕು ಮಕ್ಕಳ ಮನೆಪಾಠದಿಂದ ಆರಂಭವಾದ ಇವರ ಶೈಕ್ಷಣಿಕ ಜೈತ್ರಯಾತ್ರೆ, ನಂತರ ಸೈನಿಕ​, ನವೋದಯ, ಕಿತ್ತೂರ ಶಾಲೆಗಳ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವ “ಎಕ್ಸಲೆಂಟ್​ ಕೋಚಿಂಗ್​ ಕ್ಲಾಸ್​”ನಿಂದ ಅಭಿವೃದ್ಧಿ ಹೊಂದಿ, ನಾಡಿನಾದ್ಯಂತ ಖ್ಯಾತಿ ಪಡೆದು ಇಂದು ‘ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆ’ಯಾಗಿ ದೈತ್ಯವಾಗಿ ಬೆಳೆದು ಸದ್ಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 1200 ಮಕ್ಕಳು ಸೇರಿ ಎಲ್​ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಅಂದಾಜು 7 ಸಾವಿರ ಮಕ್ಕಳು ಕಲಿಯುವ ಹಂತಕ್ಕೆ ಹೋಗಿದ್ದು, ಅಂದಾಜು 500 ನುರಿತ ಶಿಕ್ಷಕ ಸಿಬ್ಬಂದಿ ಮಕ್ಕಳ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ. 700ಕ್ಕೂ ಹೆಚ್ಚು ಶಿಕ್ಷಕೇತರ ಸಿಬ್ಬಂದಿಗೆ ಕಾಯಕ ನೀಡುವ ಮೂಲಕ ಶಿಕ್ಷಣ ಕ್ಷೇತ್ರದ ಮೇರು ಆಗಿ ಜನಜನಿತರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೇ ಬದುಕಿನ ಅರ್ಥ ಕಂಡ ಬಸವರಾಜ ಅವರಿಗೆ ನಿರಂತರ ಕಲಿಯುವುದು, ಖುಷಿಯಿಂದ ಕಲಿಸುವುದು, ಮಕ್ಕಳಿಗೆ ಯಾವುದು ಬೇಕು ಎಂಬುದಕ್ಕಿಂತ ಯಾವುದು ಹಿತವೋ ಅದನ್ನು ಬೋಧಿಸುವುದೇ ಮೂಲ ಕಾಯಕವಾಗಿದೆ.
ಬದುಕಿನ ಹೆಜ್ಜೆ ಗುರುತು:ಕವಲಗಿಯವರು ಮೂಲತಃ ಬಸವನಬಾಗೇವಾಡಿ ತಾಲೂಕಿನ ಉತ್ನಳ ಗ್ರಾಮದವರು. ತಂದೆ ಶಾಂತಪ್ಪ, ತಾಯಿ ನೀಲಮ್ಮ. ಇಬ್ಬರೂ ಕೃಷಿಯಿಂದಲೇ ಬದುಕು ಕಟ್ಟಿಕೊಂಡವರು. ಕಠಿಣ ಪರಿಶ್ರಮದಿಂದ ಉನ್ನತ ಗುರಿ ತಲುಪಿ ಸಮಾಜಕ್ಕೆ ಕೊಡುಗೆ ಸಲ್ಲಿಸಬೇಕು ಎಂಬ ಕನಸು ಕಂಡವರು. ಉತ್ನಾಳದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ದಿಂಡವಾರ ಗ್ರಾಮದಲ್ಲಿ 5ರಿಂದ 7ರವರೆಗೆ, 8 ರಿಂದ 10ನೇ ತರಗತಿ ತಾಯಿಯ ತವರು ಇಂಗಳೇಶ್ವರದಲ್ಲಿ ಮುಗಿಸಿ, ವಿಜಯಪುರದಲ್ಲಿ ಬಿಎಸ್ಸಿ ಪದವಿ, ಇಳಕಲ್​ ಎಸ್​.ಆರ್​.ಕಂಠಿ ಕಾಲೇಜಿನಲ್ಲಿ ಬಿಇಡಿ ಶಿಕ್ಷಣ ಮುಗಿಸಿ, ಆಲಮಟ್ಟಿಯ ಸಂಗಮ ನರ್ಸರಿ ಸ್ಕೂಲ್​ನಲ್ಲಿ ಶಿಕ್ಷಕರಾಗಿ ಸೇರಿ, 1994ರಲ್ಲಿ ಸಿಕ್ಯಾಬ್​ ಸ್ಕೂಲ್​ನಲ್ಲಿ ಶಿಕ್ಷಕರಾಗಿ ಸೇರಿದರು. ಅಲ್ಲಿಯೇ ಶಿವಾನಂದ ಕೆಲೂರರ ಪರಿಚಯವಾಗಿ ಇಬ್ಬರ ಗುರಿಯೂ ಒಂದೇ ಆಗಿದ್ದರಿಂದ 1996ರಲ್ಲಿ ವಿಶ್ವ ಕಲ್ಯಾಣ ಎಜ್ಯುಕೇಷನ್​, ಕಲ್ಚರಲ್​ ಆ್ಯಂಡ್​ ಸೋಷಿಯಲ್​ ಅಸೋಸಿಯೇಷನ್​ ಹೆಸರಲ್ಲಿ ಟ್ರಸ್ಟ್​ ಸ್ಥಾಪಿಸಿ, ಅದರಡಿಯಲ್ಲಿ “ಎಕ್ಸಲೆಂಟ್​ ಕೋಚಿಂಗ್​ ಕ್ಲಾಸ್​” ಆರಂಭಿಸಿ ವಿಜಯಪುರವಷ್ಟೇ ಅಲ್ಲ ರಾಜ್ಯಾದ್ಯಂತ ಮನೆಮಾತಾದರು.
ಬಡ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ:ಎಕ್ಸಲೆಂಟ್​ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ಬಡ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ ಶಾಲೆಯ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.50 ಮಕ್ಕಳು ವಿದ್ಯಾರ್ಥಿ ವೇತನದ ಸಹಾಯದಿಂದ ಕಲಿಯುತ್ತಿದ್ದಾರೆ. 2010ನೇ ಸಾಲಿನಿಂದ ಇಲ್ಲಿವರೆಗೆ ಮೇಘಾಲಯದ 200ಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಮಕ್ಕಳಿಗೆ ನಿರಂತರ 10 ವರ್ಷ ಉಚಿತ ಶಿಕ್ಷಣ ನೀಡಿದ ಹಾಗೂ ಪ್ರತಿ ವರ್ಷ 5 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ, ಸೈನಿಕರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತಿರುವ ಕೀರ್ತಿ ಎಕ್ಸಲೆಂಟ್​ ಸಂಸ್ಥೆಯದ್ದಾಗಿದೆ.
ಶೇ.50 ವಿದ್ಯಾರ್ಥಿಗಳು ಸೈನಿಕ್​ ಶಾಲೆಗೆ ಆಯ್ಕೆ:ವಿಜಯಪುರ ಸೈನಿಕ್​ ಶಾಲೆಯಲ್ಲಿ ಪ್ರತಿ ವರ್ಷ 100 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದ್ದು, ಎಕ್ಸಲೆಂಟ್​ ​ ಸಂಸ್ಥೆಯಲ್ಲಿ ತರಬೇತಿ ಪಡೆದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಸೈನಿಕ್​ ಶಾಲೆಗೆ ಆಯ್ಕೆ ಆಗುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲದೇ, ಪ್ರತಿ ವರ್ಷ ಎಕ್ಸಲೆಂಟ್​ ಪಿಯು ಕಾಲೇಜಿನ 25 ಮಕ್ಕಳು ಮೆಡಿಕಲ್​ ಶಿಕ್ಷಣಕ್ಕೆ, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಶಿಕ್ಷಣಕ್ಕೆ ಆಯ್ಕೆಯಾಗುತ್ತಿದ್ದಾರೆ.
ಮುಂದಿನ ಗುರಿ:ಎಕ್ಸಲೆಂಟ್​ ಸಮೂಹ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪಿಯು ಕಾಲೇಜಿನ ವಿದ್ಯಾರ್ಥಿಗಳೂ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪದವಿ ಕಾಲೇಜು​ ಹಾಗೂ ಐಎಎಸ್​, ಕೆಎಎಸ್​ ತರಬೇತಿಗೂ ಆದ್ಯತೆ ನೀಡಲಾಗುವುದು. ಜತೆಗೆ ಹುಟ್ಟೂರು ಉತ್ನಾಳ ಗ್ರಾಮದಲ್ಲಿ ಉಚಿತ ಶಾಲೆ ಆರಂಭಿಸಬೇಕೆಂಬ ಗುರಿಯನ್ನು ಬಸವರಾಜ ಕವಲಗಿಯವರು ಹೊಂದಿದ್ದಾರೆ.
ಮಕ್ಕಳಲ್ಲಿ ಮೌಲ್ಯ ಮತ್ತು ಸಂಸ್ಕಾರ ಬಿತ್ತುವುದೇ ಶಿಕ್ಷಣದ ಮುಖ್ಯ ಉದ್ದೇಶ. ವಿದ್ಯಾರ್ಥಿ ಜೀವನ ಬದುಕಿನ ಅಮೂಲ್ಯ ಮಟ್ಟ. ಈ ಹಂತದಲ್ಲಿ ಮಕ್ಕಳ ಬಾಳಿಗೆ ಬೆಳಕಾಗುವುದು, ಅವರ ಸುಂದರ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಕಾರ್ಯ. ಈ ಸೇವೆ ಒದಗಿ ಬಂದದ್ದು ನನ್ನ ಭಾಗ್ಯ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಂತೃಪ್ತಿ ನನಗಿದೆ|ಬಸವರಾಜ ಕವಲಗಿಅಧ್ಯಕ್ಷರು, ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆ, ವಿಜಯಪುರ
ನನ್ನ ಹಾಗೂ ಬಸವರಾಜ ಕವಲಗಿ ಅವರ ಸ್ನೇಹ ಅತ್ಯಂತ ಮೌಲ್ಯಯುತವಾದದ್ದು. ವಿಜಯಪುರ ಜಿಲ್ಲೆಯಲ್ಲಿ ಅದ್ವಿತೀಯ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಮುನ್ನಡೆಸುತ್ತಿದ್ದು, ಮಹಾನಗರದಲ್ಲಿ ದೊರೆಯುವ ಗುಣಮಟ್ಟದ ಮೌಲ್ಯಯುತ ಶಿಕ್ಷಣವನ್ನು ನಮ್ಮ ಸಂಸ್ಥೆಯಲ್ಲಿ ನೀಡುತ್ತಿದ್ದೇವೆ.|ಶಿವಾನಂದ ಕೆಲೂರಪ್ರಧಾನ ಕಾರ್ಯದರ್ಶಿ, ಎಕ್ಸಲೆಂಟ್​ ಸಮೂಹ ಶಿಕ್ಷಣ ಸಂಸ್ಥೆ, ವಿಜಯಪುರ
ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್! ಉತ್ತರ ಕನ್ನಡದಲ್ಲಿ ವಿಚಿತ್ರ ಪ್ರಕರಣ ಬೇಧಿಸಿದ ಪೊಲೀಸರು

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
