ಬೆಂಗಳೂರು:ರಾಜ್ಯದ ಉಗ್ರಾಣಗಳಲ್ಲಿ ಶೇಖರಿಸಿಟ್ಟಿರುವ ಪಡಿತರ ಅಕ್ಕಿಗೆ ಮೆಲಾಥಿಯನ್ ಹಾಗೂ ಡಿಡಿವಿಪಿ ಸಿಂಪಡಿಸಿದರೂ ಅಂಥ ಅಕ್ಕಿ ತಿಂದರೆ ಯಾರೂ ಸಾಯುವುದಿಲ್ಲ ಹಾಗೂ ಈವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಮತ್ತು ಇಲಾಖಾ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಉಗ್ರಾಣಗಳಲ್ಲಿ ಶೇಖರಿಸಿರುವ ಸಾವಿರಾರು ಟನ್ ಅಕ್ಕಿಗೆ ಹುಳುಬಾಧೆ ತಪ್ಪಿಸಲು ನೀರಿನ ಜತೆ ಸೇರಿಸಿ ಸಿಂಪಡಿಸುವ ಮೆಲಾಥಿಯನ್ ಮತ್ತು ಡಿಡಿವಿಪಿ ರಾಸಾಯನಿಕದಲ್ಲಿ ವಿಷಕಾರಿ ಅಂಶವಿದೆ ಎಂಬುದಕ್ಕೆ ‘ವಿಜಯವಾಣಿ’ ಬಳಿ ಸಾಕ್ಷ್ಯ ಇದೆ. ಈ ಕುರಿತು ‘ಪಡಿತರ ಅಕ್ಕಿಗೆ ವಿಷ’ ಶೀರ್ಷಿಕೆಯಡಿ ಗುರುವಾರ ‘ವಿಜಯವಾಣಿ’ ಮುಖಪುಟದಲ್ಲಿ ವಿಸõತ ವರದಿ ಪ್ರಕಟಿಸಿತ್ತು. ಈ ಬಗ್ಗೆ ಕ್ರಮ ವಹಿಸಬೇಕಾದ ಸಂಬಂಧಿತ ಸಚಿವರು ಹಾಗೂ ಇಲಾಖಾ ಅಧಿಕಾರಿಗಳು, ಈ ರಾಸಾಯನಿಕಗಳಲ್ಲಿ ವಿಷಕಾರಿ ಅಂಶವಿಲ್ಲ ಎನ್ನುವ ಮೂಲಕ ನಿರ್ಲಕ್ಷ್ಯತನ ತೋರಿದ್ದಾರೆ.
ಭಾರತ ಆಹಾರ ನಿಗಮ(ಎಫ್​ಸಿಐ)ದ ಗೋದಾಮುಗಳಲ್ಲಿ ಆಹಾರ ಧಾನ್ಯ ಸಂರಕ್ಷಣೆಗೆ ಮೆಲಾಥಿಯನ್ ಬಳಸಲಾಗುತ್ತಿದೆ. ಅದೂ ಚೀಲಗಳ ಮೇಲೆ ಸಿಂಪಡಿಸಲಾಗುತ್ತಿದ್ದು, ಇದರಿಂದ ಜೀವಕ್ಕೆ ಅಪಾಯವಿಲ್ಲ ಎಂದು ಕೆ.ಗೋಪಾಲಯ್ಯ ಹೇಳಿದ್ದಾರೆ. ಗೋದಾಮಿನಲ್ಲಿ 6 ತಿಂಗಳಿಗೂ ಮೇಲ್ಪಟ್ಟು ದಾಸ್ತಾನು ಇದ್ದರೆ ಅವುಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಗುಣಮಟ್ಟ ಆಹಾರ ಧಾನ್ಯಕ್ಕೆ ಹುಳು ಬೀಳದಿರಲು ಗೋಣಿಚೀಲದ ಮೇಲೆ ಮೆಲಾಥಿಯನ್ ಸಿಂಪಡಿಸಲಾಗುತ್ತಿದೆ. ಈ ಬಗ್ಗೆ ವರದಿ ತರಿಸಿಕೊಂಡಿದ್ದು, ಚೀಲಗಳಿಗೆ ಸಿಂಪಡಿಸುವ ಮೆಲಾಥಿಯನ್ ಅಂಶ ಕೆಜಿಗೆ 0.01 ಮಿ.ಗ್ರಾಂ. ಇದೆ. ಈ ಅಂಶ ಗರಿಷ್ಠ 4.0 ಇರಬಹುದು. ಹಿಂದಿನಿಂದಲೂ ಈ ಕೀಟನಾಶಕ ಸಿಂಪಡಿಸಲಾಗುತ್ತಿದೆ. ಈ ಆಹಾರ ಸೇವನೆಯಿಂದ ಯಾವುದೇ ಸಾವು-ನೋವು ಉಂಟಾಗುವುದಿಲ್ಲ. ಈಗ ಸಿಂಪಡಿಸುತ್ತಿರುವ ಪ್ರಮಾಣ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪಡಿತರ ಅಕ್ಕಿಗೆ ವಿಷ: ಹುಳು ಬಾಧೆ ತಪ್ಪಿಸಲು ರಾಸಾಯನಿಕ ಬೆರಕೆ,ಉಗ್ರಾಣ ನಿಗಮದಿಂದ ಅನಾರೋಗ್ಯ ಭಾಗ್ಯ
ವಿಜಯವಾಣಿ ಬಳಿ ಇದೆ ಸಾಕ್ಷ್ಯ
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ನಿಯಮ ಪ್ರಕಾರ ರಾಸಾಯನಿಕ ಸಿಂಪಡಿಸುವ ಅಕ್ಕಿಯಲ್ಲಿ 4 ಪಿಪಿಎಂಕ್ಕಿಂತ ಕಡಿಮೆ ಪ್ರಮಾಣ ಮೆಲಾಥಿಯನ್ ಅಂಶ ಇರಬೇಕಿತ್ತು. ರಾಮಯ್ಯ ಸುಧಾರಿತ ಪರೀಕ್ಷಾ ಪ್ರಯೋಗಾಲಯದಲ್ಲಿ ಅಕ್ಕಿಯ ಸ್ಯಾಂಪಲ್ ಪರೀಕ್ಷಿಸಿದ್ದು, ಅದರಲ್ಲಿ 4.1 ಮೆಲಾಥಿಯನ್ ಅಂಶ ಪತ್ತೆಯಾಗಿದೆ. ಈ ಅಕ್ಕಿ ತಿನ್ನಲು ಯೋಗ್ಯವಾಗಿಲ್ಲ ಹಾಗೂ ವಿಷಕಾರಿ ಅಂಶ ಇರುವುದು ಲ್ಯಾಬ್ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಅವೈಜ್ಞಾನಿಕ ಪದ್ಧತಿಯಲ್ಲಿ ಅಕ್ಕಿಮೂಟೆಗಳ ಮೇಲೆ ರಾಸಾಯನಿಕ ಸಿಂಪಡಿಸಲಾಗುತ್ತದೆ. ಈ ಮೆಲಾಥಿಯನ್ ಅಂಶ ಪೂರ್ಣವಾಗಿ ಹೋಗಬೇಕೆಂದರೆ 270 ಸೆಲ್ಸಿಯಸ್​ನಲ್ಲಿ ನೀರಿನಲ್ಲಿ ಅಕ್ಕಿ ಕುದಿಸಬೇಕು. ಒಂದು ವೇಳೆ ಇಷ್ಟು ಪ್ರಮಾಣದಲ್ಲಿ ಅಕ್ಕಿ ಬೇಯಿಸಿದರೆ ಸಂಪೂರ್ಣ ಪಾಯಸದ ರೀತಿ ಬದಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇ-ಮಾಪನ ತಂತ್ರಾಂಶ ಮೇಲ್ದರ್ಜೆಗೆ
ಕಾನೂನು ಮಾಪನ ಇಲಾಖೆಯಲ್ಲಿ ಇರುವ ಇ-ಮಾಪನ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ ಇ ಮಾಪನ್ ಟ್ಯಾಪ್-2 ಮಾಡಲಾಗುವುದು. ಅಂಗಡಿಗಳ ಲೈಸನ್ಸ್ ಶುಲ್ಕ, ದಂಡಕ್ಕೆ ಸಂಬಂಧ ನೀಡಲಾಗುವ ಹಣ ಸಂದಾಯ ರಸೀದಿ, ಮೊಕದ್ದಮೆ ಹೂಡಿಕೆ, ಜಪ್ತಿ ರಸೀದಿ, ತೂಕ ಮತ್ತು ಅಳತೆಗಳ ಲೈಸೆನ್ಸ್ ನೀಡುವಿಕೆಗೆ ನೀಡಲಾಗುವ ನೋಂದಣಿ ಪ್ರಮಾಣಪತ್ರ ಮೊದಲಾದವನ್ನು ಆನ್​ಲೈನ್ ಮೂಲಕ ನೀಡಲಾಗುತ್ತಿದೆ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು. ಲೈಸನ್ಸ್ ಶುಲ್ಕವನ್ನು 4-5 ವರ್ಷದಿಂದ ಹೆಚ್ಚಿಸಿಲ್ಲ. ಅದನ್ನು ಹೆಚ್ಚಿಸುವ ಉದ್ದೇಶವಿದೆ ಎಂದರು. ನ್ಯಾಯಬೆಲೆ ಅಂಗಡಿಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮಾರಾಟ ಮಾಡಲು ಚಿಂತಿಸಲಾಗಿದೆ. ಆದರೆ, ಯಾವುದೇ ಸಬ್ಸಿಡಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪಡಿತರದಾರರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಕೊಡುವುದಾಗಿ ಸಿಎಂ ದೆಹಲಿಯಲ್ಲಿ ಹೇಳಿರುವ ಕುರಿತ ಪ್ರಶ್ನೆಗೆ, ಬಜೆಟ್ ಬಳಿಕ ಈ ಬಗ್ಗೆ ತಿಳಿಸುತ್ತೇನೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − nine =
Remember me
