ಚಿತ್ರದುರ್ಗ:ಪಡಿತರ ಕಾರ್ಡ್ ಮೂಲಕ ಅಕ್ಕಿ ಪಡೆಯುತ್ತಿರುವ ರಾಜ್ಯದ ಬಡಜನರ ಹೊಟ್ಟೆಗೆ ಸದ್ದಿಲ್ಲದೆ ವಿಷ ಸೇರುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇಲಾಖೆಯ ಉಗ್ರಾಣಗಳಲ್ಲಿ ಶೇಖರಿಸಿರುವ ಸಾವಿರಾರು ಟನ್ ಅಕ್ಕಿಗೆ ಹುಳು ಬಾಧೆ ತಪ್ಪಿಸುವ ಉದ್ದೇಶದಿಂದ ಮೆಲಾಥಿಯನ್ ಮತ್ತು ಡಿಡಿವಿಪಿ ಎಂಬ ವಿಷಕಾರಿ ರಾಸಾಯನಿಕವನ್ನು ನೀರಿನ ಜತೆ ಸೇರಿಸಿ ಸಿಂಪಡಿಸುತ್ತಿರುವುದನ್ನು ವಿಜಯವಾಣಿ, ದಿಗ್ವಿಜಯ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಷನ್ ಬಯಲಿಗೆಳೆದಿದೆ.
ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಪ್ರತಿ ತಿಂಗಳು 20 ಸಾವಿರ ಟನ್​ಗೂ ಅಧಿಕ ಪಡಿತರ ಅಕ್ಕಿ ವಿತರಣೆ ಆಗುತ್ತಿದೆ. ಫುಡ್ ಕಾರ್ಪೆರೇಷನ್ ಆಫ್ ಇಂಡಿಯಾದಿಂದ (ಊಇಐ) ಸರ್ಕಾರ ಪಡಿತರ ಅಕ್ಕಿ ಖರೀದಿಸುತ್ತಿದೆ. ಎಫ್​ಸಿಐಗೆ ರಾಜ್ಯದಲ್ಲಿ ಸ್ವಂತ ಗೋದಾಮು ಇಲ್ಲದ ಕಾರಣ ಬೀದರ್, ಚಿತ್ರದುರ್ಗ ಸೇರಿ ಕೆಲ ಜಿಲ್ಲೆಗಳ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಅಕ್ಕಿ ಶೇಖರಣೆ ಮಾಡಿದೆ. ಚಿತ್ರದುರ್ಗದ ಗುಡ್ಡದರಂಗವ್ವನಹಳ್ಳಿ ಸಮೀಪದ ಗೋದಾಮಿನಲ್ಲಿ ಎಫ್​ಸಿಐ ಸಾವಿರಾರು ಟನ್ ಅಕ್ಕಿ ಶೇಖರಿಸಿದೆ. ಅಕ್ಕಿಗೆ ಹುಳು ಬೀಳದಂತೆ ತಡೆಯಲು ಮತ್ತು ನಿರ್ವಹಣೆಗೆ ಉಗ್ರಾಣ ನಿಗಮಕ್ಕೆ ಚೀಲಕ್ಕೆ ಅಂದಾಜು 4.50 ರೂ. ನೀಡುತ್ತಿದೆ. ಅಕ್ಕಿಯಲ್ಲಿ ಹುಳು ಕಾಣಿಸಿಕೊಂಡ ತಕ್ಷಣ ಉಗ್ರಾಣ ನಿಗಮದವರು ಮೆಲಾಥಿಯನ್ ಮತ್ತು ಡಿಡಿವಿಪಿ ರಾಸಾಯನಿಕ ಸಿಂಪಡಿಸುತ್ತಾರೆ. ಈ ಅಕ್ಕಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮೆಲಾಥಿಯನ್ ಅಂಶ 4.1 ರಷ್ಟಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಏನೇನು ಅಪಾಯ?:ಮೆಲಾಥಿಯನ್​ನಲ್ಲಿರುವ ಅಸಿಟೋಕೋಲಿನ್ ಅಸ್ಟರೇಜ್ ಅಂಶ ಮಿದುಳಿನ ನರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಿದುಳು ನ್ಯೂರೋ ಟಾಕ್ಸಿಸ್​ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಸಾವು ಕೂಡ ಸಂಭವಿಸಬಹುದು. ಈ ಅಂಶ ಮಕ್ಕಳಿಗೆ, ಮಹಿಳೆಯರಿಗೆ ಅದರಲ್ಲೂ ಗರ್ಭಿಣಿಯರಿಗೆ ಹೆಚ್ಚು ಪರಿಣಾಮ ಬೀರುತ್ತದೆ.
ಪಡಿತರ ಅಕ್ಕಿಯಲ್ಲಿ ವಿಷಕಾರಿ ರಾಸಾಯನಿಕ ಅಂಶ ಪತ್ತೆ ವಿಚಾರದ ಬಗ್ಗೆ ಆಹಾರ ಸಚಿವರ ಜತೆ ಮಾತಾಡಿದ್ದೇನೆ. ಕೆಲ ಗೋದಾಮುಗಳಿಗೆ ಭೇಟಿ ನೀಡಿ ತನಿಖೆ ಮಾಡಿಸುವಂತೆ ಸೂಚನೆ ನೀಡಿದ್ದೇನೆ.
| ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ
ಪಡಿತರ ಅಕ್ಕಿಗೆ ರಾಸಾಯನಿಕ ಸಿಂಪಡಿಸುತ್ತಿ ರುವುದು ದಿಗ್ವಿಜಯ-ವಿಜಯವಾಣಿ ತನಿಖಾ ವರದಿ ಯಿಂದ ಬೆಳಕಿಗೆ ಬಂದಿದೆ. ಈ ಕುರಿತು ಇಲಾಖೆ ಹಿರಿಯ ಅಧಿಕಾರಿಗಳ ಜತೆ ಮಾತಾಡಿದ್ದೇನೆ. ಅಕ್ಕಿ ಸ್ಯಾಂಪಲ್ ತರಿಸಿ ಲ್ಯಾಬ್​ಗೆ ಕಳುಸುವಂತೆ ಸೂಚಿಸಿದ್ದೇನೆ.
| ಕೆ. ಗೋಪಾಲಯ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ
ಪರಿಹಾರ ಏನು?
ಸಾಮಾನ್ಯವಾಗಿ ಗೋದಾಮುಗಳಲ್ಲಿ ಹುಳು ನಿಯಂತ್ರಣಕ್ಕೆ ಮಿಥೈಲ್ ಬ್ರೋಮೈಡ್ ಸಿಂಪಡಣೆ ಅಥವಾ ಕ್ಯುರೆಟಿಕ್ ಟ್ರಿಟ್ಮೆಂಟ್​ಗಾಗಿ ಅಲ್ಯೂಮಿನಿಯಂ ಪಾಸ್ಪೈಟ್ ಗುಳಿಗೆ ಇಡುತ್ತಾರೆ. ಆದರೆ ಮೆಲಾಥಿಯನ್ ಅಪಾಯಕಾರಿ. ಅಕ್ಕಿಯನ್ನು ತೊಳೆದರೂ ಅದರಲ್ಲಿನ ವಿಷಕಾರಿ ಅಂಶ ಹೋಗುವುದಿಲ್ಲ. ಅಕ್ಕಿಯನ್ನು 270 ಡಿಗ್ರಿ ಸೆಲ್ಸಿಯಸ್​ನಲ್ಲಿ ಬೇಯಿಸಿದರೆ ಯಾವುದೇ ಅಪಾಯ ಇರುವುದಿಲ್ಲ. ಆದರೆ ಇಷ್ಟು ಶಾಖದಲ್ಲಿ ಬೇಯಿಸಿದರೆ ಅಕ್ಕಿ ಸಂಪೂರ್ಣ ಕರಗಿ ಪಾಯಸದಂತೆ ಆಗುತ್ತದೆ.
ಏನಿದು ಮೆಲಾಥಿಯನ್?
ಮೆಲಾಥಿಯನ್ ಎಂಬುದು ವಿಷಕಾರಿ ರಾಸಾ ಯನಿಕ. ಇದರಲ್ಲಿರುವ ಮೋನೋ ಕ್ರೋಟೋಫಾಸ್ ಆರ್ಗನ್ ಪಾಸ್ಪೆಟ್ ಅಂಶ ಮನುಷ್ಯನ ಆರೋಗ್ಯದ ಮೇಲೆ ನಿಧಾನವಾಗಿ ದುಷ್ಪರಿಣಾಮ ಬೀರುತ್ತದೆ. ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಪ್ರಕರಣದಲ್ಲೂ ಇದೇ ಅಂಶ ಇರುವ ವಿಷ ಬಳಸಲಾಗಿತ್ತು. ಮೆಲಾಥಿಯನ್ ಕ್ಯಾನ್ಸರ್​ಕಾರಕ ಕೆಮಿಕಲ್ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
| ಯಶವಂತ್​ಕುಮಾರ್.ಎ ದಿಗ್ವಿಜಯ ನ್ಯೂಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 11 =
Remember me
