ಬೆಂಗಳೂರು:ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ಆಯೋಜಿಸಿರುವ ‘ಏಜುಕೇಷನ್‌ ಎಕ್ಸ್‌ಪೋ’ ಶನಿವಾರ ಮತ್ತು ಭಾನುವಾರ (ಮೇ 27, 28) ನಡೆಯಲಿದೆ. ಈ ಬಾರಿಯ ಎಕ್ಸ್​ಪೋದಲ್ಲಿ ನವೋದ್ಯಮಕ್ಕೆ ವೇದಿಕೆ ಕಲ್ಪಿಸುತ್ತಿರುವುದು ವಿಶೇಷ. ವಿನೂತನವಾದ ಐಡಿಯಾಗಳನ್ನು ಪ್ರದರ್ಶಿಸಿದವರಿಗೆ ನಗದು ಬಹುಮಾನವೂ ಸಿಗಲಿದೆ.
ಜಯನಗರ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಎಕ್ಸ್‌ಪೋ ನಡೆಯಲಿದ್ದು, ಸಚಿವ ರಾಮಲಿಂಗಾರೆಡ್ಡಿ ಹಾಗೂ ಚಿತ್ರನಟಿ ಮೇಘಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಕೆ. ರಾಮಮೂರ್ತಿ ಉಪಸ್ಥಿತರಿರುವರು.
ಉತ್ತಮ ಐಡಿಯಾಗಳು ಹೊರಬಂದರೆ ‘ರಾಮಯ್ಯ ಎವೊಲ್ಯೂಟ್ ಫೌಂಡೇಷನ್” ವತಿಯಿಂದ ಸ್ಟಾರ್ಟಪ್ ಆರಂಭಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸ್ಟಾರ್ಟಪ್ ಆರಂಭಿಸಬೇಕೆಂಬ ಉತ್ಸಾಹದಲ್ಲಿರುವ ಯುವಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಯುವಕರಿಗಾಗಿಯೇ ನವೋದ್ಯಮ ವಿಭಾಗ ತೆರೆಯಲಾಗಿದೆ.
ಇದನ್ನೂ ಓದಿ:ಐಫೋನ್​ ಗಿಫ್ಟ್​ ಕೊಡಲು ನಿರಾಕರಿಸಿದ ಬಾಯ್​ಫ್ರೆಂಡ್​ಗೆ ಬಿಗ್​ ಶಾಕ್​ ಕೊಟ್ಟ ಗರ್ಲ್​ಫ್ರೆಂಡ್​!
ವಿದ್ಯಾರ್ಥಿಯು ಯಾವುದೇ ಬಿಜಿನೆಸ್ ಐಡಿಯಾವನ್ನು ಎಕ್ಸ್‌ ಪೋದಲ್ಲಿ ಪ್ರಸ್ತುತ ಪಡಿಸಬಹುದು. ವಿದ್ಯಾರ್ಥಿಗಳ ಹೊಸ ಚಿಂತನೆಗಳನ್ನು ‘ರಾಮಯ್ಯ ಫೌಂಡೇಷನ್​ನ ತೀರ್ಪುಗಾರರ ತಂಡ ಆಯ್ಕೆ ಮಾಡಲಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ನವೋದ್ಯಮ ಆರಂಭಿಸಲು ಬೆಂಬಲ ನೀಡಲಾಗುತ್ತದೆ. ಎಕ್ಸ್‌ಪೋ, ಎರಡೂ ದಿನಗಳು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ನವೋದ್ಯಮಕ್ಕೆ ಸಂಬಂಧಿಸಿದ ಚರ್ಚೆಗಳು ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಕುರಿತು ವಿದ್ಯಾರ್ಥಿಗಳಿಗೆ ಇರುವ ಗೊಂದಲ ನಿವಾರಣೆಗೆ ಎಕ್ಸ್​ಪೋ ಸಹಕಾರಿ ಆಗಲಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಎಕ್ಸ್‌ಪೋದಲ್ಲಿ ಹಲವು ವಿವಿಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಚಾರ್ಟೆಡ್​ ಅಕೌಂಟೆಂಟ್ ಸಂಸ್ಥೆಗಳು ಭಾಗವಹಿಸಲಿವೆ. ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಮ್ಯಾನೇಜ್‌ಮೆಂಟ್‌, ಬಾಹ್ಯಾಕಾಶ ತಂತಜ್ಞಾನ, ಸಮೂಹ ಸಂವಹನ, ಫ್ಯಾಷನ್‌ಡಿಸೈನ್ ಸೇರಿ ಇತರ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಚರ್ಚಿಸಲು ಅವಕಾಶ ನೀಡಲಾಗುತ್ತದೆ. ಒಂದೇ ವೇದಿಕೆಯಲ್ಲಿ ಹಲವು ಕಾಲೇಜುಗಳ ಆಡಳಿತ ಮಂಡಳಿಗಳ ಮಾಹಿತಿ ದೊರೆಯುವುದರಿಂದ ಹಲವೆಡೆ ಮಾಹಿತಿ ಕಲೆಹಾಕುವ ತೊಂದರೆ ಕೂಡ ತಪ್ಪಲಿದೆ.
ಸಚಿವ ಸ್ಥಾನ ಹಂಚಿಕೆಯಲ್ಲೂ ಸಿಎಂ ಸಿದ್ದು ಮೇಲುಗೈ: ಬಿ.ಕೆ. ಹರಿಪ್ರಸಾದ್ ಮಂತ್ರಿಗಿರಿಗೂ ಅಡ್ಡಗಾಲು!?

ಡೆಪ್ಯುಟಿ ಸ್ಪೀಕರ್​ ಆಗಲು ಒಲ್ಲದ ಮನಸ್ಸು, ಸಿದ್ದು ಒತ್ತಾಯಕ್ಕೆ ಒಪ್ಪಬೇಕಷ್ಟೇ ಎಂದ ಸಿ.ಪುಟ್ಟರಂಗಶೆಟ್ಟಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
