ಬೆಂಗಳೂರು:ಕಬ್ಬು ಬೆಳೆಗಾರರಿಗೆ ಬಾಕಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆಗಿಂದಾಗ್ಗೆ ಪ್ರತಿಭಟನೆಗಳು ನಡೆಯುವುದು ಹೊಸತೇನಲ್ಲ. ಆದರೆ, ಶಂಕರ ಪಾಟೀಲ್ ಮುನೇನಕೊಪ್ಪ ಸಕ್ಕರೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಇದಕ್ಕೊಂದು ಹೊಸ ರೂಪ ನೀಡಲು ಮುಂದಾದ ಪರಿಣಾಮ ಸದ್ಯ ಶೇ.99 ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿ ಮಾಡಿರುವುದು ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ.
ವರ್ಷ ಕಳೆದು ಮತ್ತೊಮ್ಮೆ ಕಬ್ಬು ಅರೆವಿಕೆಯನ್ನು ಕಾರ್ಖಾನೆ ಪ್ರಾರಂಭ ಮಾಡಿದರೂ, ಒಂದು ವರ್ಷದ ಬಾಕಿ ಹಾಗೆಯೇ ಉಳಿದಿರುತ್ತಿತ್ತು. ಆದರೆ, ರೈತರಿಗೆ ಸಮಸ್ಯೆ ಆಗಬಾರದು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಸಕ್ಕರೆ ಕಾರ್ಖಾನೆಗಳಿಂದ ಹಣ ಪಾವತಿ ಮಾಡಿಸುವಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ. ಇಟ್ಟಿದೆ. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಸೇರಬೇಕಾಗಿದ್ದ ಬಾಕಿ 19,634.84 ಕೋಟಿ ರೂ.ಗಳ ಪೈಕಿ ಈಗಾಗಲೆ 19,424.13 ಕೋಟಿ ರೂ. (ಶೇ.99) ಪಾವತಿ ಮಾಡಲಾಗಿದೆ. ಇನ್ಮುಂದೆ ಪೂರ್ಣ ಪ್ರಮಾಣದಲ್ಲಿ ಆನ್​ಲೈನ್ ಮೂಲಕ ಕಬ್ಬು ಬೆಳೆಗಾರರ ಅಕೌಂಟ್​ಗೆ ಹಣ ಹೋಗುವಂತೆ ಮಾಡಲಾಗುವುದು ಎಂದು ಶಂಕರ ಪಾಟೀಲ್ ಮುನೇನಕೊಪ್ಪ ಅಂಕಿ-ಅಂಶ ಸಹಿತ ಶುಕ್ರವಾರ ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾಹಿತಿ ನೀಡಿದರು. ಹಿಂದಿನ ಸರ್ಕಾರಗಳು ಹೇಗೆ ನಡೆದುಕೊಂಡಿವೆ ಎನ್ನುವ ವಿಶ್ಲೇಷಣೆಗೆ ಹೋಗುವುದಿಲ್ಲ. ನಾವು ಮಾತು ಕೊಟ್ಟಂತೆ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಹಣ ಪಾವತಿ ಮಾಡಿಸುವ ಕೆಲಸ ಮಾಡಲಾಗಿದೆ. ಇನ್ನು 381.72 ಕೋಟಿ ರೂ. ಮಾತ್ರ ಬಾಕಿ ಇದ್ದು, ಅದನ್ನೂ ಸಂಬಂಧಿತ ಕಾರ್ಖಾನೆ ಆಡಳಿತ ಮಂಡಳಿ ಜತೆ ಮಾತನಾಡಿ ಪಾವತಿ ಮಾಡಿಸಲಾಗುವುದು ಎಂದರು. ಮೈಶುಗರ್​ನಲ್ಲಿದ್ದ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡು ಕಾರ್ಖಾನೆಗೆ ಚಾಲನೆ ನೀಡಲಾಗುತ್ತಿದೆ. ಮೈಶುಗರ್ ಆಸ್ತಿಯನ್ನು ರಕ್ಷಣೆ ಮಾಡುವ ಕೆಲಸವೂ ಆಗಿದೆ. ಹಾಗೆಯೇ ಬೆಂಗಳೂರಿನಲ್ಲಿರುವ ಮೈಶುಗರ್ ಜಾಗದಲ್ಲಿರುವ ಕಟ್ಟಡವನ್ನು ತೆರವು ಮಾಡಲು ಯೋಚಿಸಲಾಗುತ್ತಿದೆ ಎಂದರು.
ಹೊರ ರಾಜ್ಯಗಳಿಗೆ ಭೇಟಿ:ಕಬ್ಬು ಬೆಳೆಗಾರರಿಗೆ ಯಾವ್ಯಾವ ಸೌಲಭ್ಯ ಕೊಡಲಾಗುತ್ತಿದೆ? ಕಟಾವು ಮತ್ತು ಸಾಗಾಣಿಕೆ ಹೇಗಿದೆ? ಎನ್ನುವುದರ ಬಗ್ಗೆ ಹೊರ ರಾಜ್ಯಗಳಲ್ಲಿ ಅಧ್ಯಯನ ಮಾಡಿ ವರದಿ ನೀಡುವಂತೆ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಮಿತಿ ಮಾಡಿ ಕಳುಹಿಸಿಕೊಡಲಾಗಿದೆ. ಹೊರ ದೇಶಗಳಿಗೂ ರೈತರ ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟು ಅಧ್ಯಯನ ಮಾಡಿ, ಇನ್ನಷ್ಟು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
15 ದಿನದಲ್ಲಿ ಮೈ ಶುಗರ್ ಪ್ರಾರಂಭ:ಮಹಾರಾಜರ ಕಾಲದಲ್ಲಿ ಪ್ರಾರಂಭ ಮಾಡಿದ್ದ ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡುವುದು ದೊಡ್ಡ ಸವಾಲಾಗಿತ್ತು. ಹಲವು ಬಾರಿ ಸರ್ಕಾರ ಈ ಕಾರ್ಖಾನೆ ಪುನಶ್ಚೇತನಕ್ಕೆ ಹಣ ನೀಡಿದ್ದರೂ ಅದು ಫಲಪ್ರದವಾಗಿರಲಿಲ್ಲ. ಈಗ ಕಾರ್ಖಾನೆಯನ್ನು ಅಭಿವೃದ್ಧಿ ಮಾಡಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ವ್ಯವಸ್ಥಾಪಕ ನಿರ್ದೇಶಕರನ್ನೂ ನೇಮಕ ಮಾಡಲಾಗಿದ್ದು, ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿ ದ್ದಾರೆ. ಇನ್ನು 15 ದಿನದಲ್ಲಿ ಕಾರ್ಖಾನೆ ಪ್ರಾರಂಭ ಮಾಡುವ ಗುರಿ ಹೊಂದಲಾಗಿದೆ ಎಂದು ಶಂಕರ ಪಾಟೀಲ್ ಹೇಳಿದರು.
ಸಕ್ಕರೆ ಉದ್ಯಮದ ಬೆಳವಣಿಗೆ:ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಉದ್ದಿಮೆ ಬೆಳವಣಿಗೆ ಹೊಂದಲಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಳವಾಗುತ್ತದೆ. ಮೊಲಾಸಿಸ್ ಹಾಗೂ ಇತರ ಉಪ ಉತ್ಪನ್ನಗಳ ಮಾರಾಟ ಗಣನೀಯವಾಗಿ ವೃದ್ಧಿಸಿ ತೆರಿಗೆ ಸಂಗ್ರಹವೂ ಏರಿಕೆಯಾಗಲಿದೆ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೊಕ್ಕಸಕ್ಕೂ ಅನುಕೂಲವಾಗುವುದು. ಎಥೆನಾಲ್ ಘಟಕಗಳ ಸ್ಥಾಪನೆಗಾಗಿ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ಬಡ್ಡಿ ವಿನಾಯಿತಿ ಯೋಜನೆ ಘೋಷಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮೊಬೈಲ್ ಅಪ್ಲಿಕೇಷನ್ ಸಿದ್ಧ:ಕಬ್ಬು ಬೆಳೆಗಾರರಿಗೆ ನ್ಯಾಯಸಮ್ಮತ ಹಾಗೂ ಸರಿಯಾದ ಸಮಯಕ್ಕೆ ಪಾವತಿ ಮಾಡಲು ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸುತ್ತಿದ್ದು, ಅದರ ಮುಖೇನ ಕಾರ್ಖಾನೆಗಳು ಹಣ ಪಾವತಿಸುವ ವ್ಯವಸ್ಥೆ ತರಲಾಗುತ್ತದೆ. ಇದಕ್ಕೆ ಕೆಲವು ವಿರೋಧವೂ ಬರಬಹುದು. ಆದರೆ, ರೈತರಿಗೆ ಅನುಕೂಲವಾಗಲಿ ಮತ್ತು ಈ ವ್ಯವಸ್ಥೆ ಪಾರದರ್ಶಕವಾಗಿರಲಿ ಎಂದು ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗುತ್ತಿದೆ ಎಂದು ಸಚಿವ ಮುನೇನಕೊಪ್ಪ ತಿಳಿಸಿದರು.
ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು; ಬದುಕುಳಿದ ಮಗನಿಗೆ ಮತ್ತೊಂದು ಶಾಕ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
