ಬೆಂಗಳೂರು:ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಚಾನೆಲ್ ಸಹಯೋಗದಲ್ಲಿ ಆಯೋಜಿಸಿರುವ ವಿಜಯವಾಣಿ ಪ್ರೀಮಿಯರ್ ಲೀಗ್ ವಿಪಿಎಲ್-3ನೇ ಆವೃತ್ತಿ ಕ್ರೀಡೋತ್ಸವಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ಸಿಕ್ಕಿದೆ. ಮೊದಲ ದಿನ ಬಸವನಗುಡಿಯ ಕೃಷ್ಣರಾವ್ ಪಾರ್ಕ್​ನಲ್ಲಿ ಮಹಿಳಾ ಮತ್ತು ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆದವು. ಶನಿವಾರ ಹಾಗೂ ಭಾನುವಾರ ಕ್ರಿಕೆಟ್ ಪಂದ್ಯಾವಳಿ ಹಾಗೂ ವಿವಿಧ ರಂಜನೀಯ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಸ್ಪರ್ಧಿಸಿದ್ದರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ದಿಗ್ವಿಜಯ ನ್ಯೂಸ್​ನ ಅನಿತಾ ಹಾಗೂ ವಿಜಯವಾಣಿಯ ಅರುಣ ಎಂ.ಜಿ. ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ ಅನಿತಾ ಗೆಲುವಿನ ನಗೆ ಬೀರಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ದಿಗ್ವಿಜಯ ನ್ಯೂಸ್​ನ ಸುನೀಲ್-ಚೇತನ್ ಹಾಗೂ ವಿಜಯವಾಣಿಯ ರೋಹಿತ್ -ರಾಘವೇಂದ್ರ ಕೆ.ಎನ್. ನಡುವೆ ನಡೆದ ಫೈನಲ್ ಪಂದ್ಯದಲ್ಲಿ ದಿಗ್ವಿಜಯ ತಂಡ ಜಯಭೇರಿ ಬಾರಿಸಿತು. ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹಾಗೂ ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಒತ್ತಡ ಇರುತ್ತದೆ. ಅದರಲ್ಲೂ ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚು ಒತ್ತಡ ಇರುತ್ತದೆ. ಆ ಒತ್ತಡದಿಂದ ಹೊರಗೆ ಬರಲು ವಿಆರ್​ಎಲ್ ಸಂಸ್ಥೆ ತಮ್ಮ ಸಿಬ್ಬಂದಿಗೆ ವಿವಿಧ ಕ್ರೀಡೆಗಳನ್ನು ಆಡಲು ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯದು. ಕೃಷ್ಣರಾವ್ ಪಾರ್ಕ್​ನಲ್ಲಿ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ನಿರ್ವಿುಸಿರುವ ಬ್ಯಾಡ್ಮಿಂಟನ್ ಮೈದಾನವನ್ನು ಜನರು ಸದ್ಬಳಕೆ ಮಾಡಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದರು.
ಇಂದು ಕ್ರಿಕೆಟ್ ಪಂದ್ಯಾವಳಿ:ಕ್ರಿಕೆಟ್ ಹಾಗೂ ರಂಜನೀಯ ಕ್ರೀಡೆಗಳಾದ ಪಾಸಿಂಗ್ ದ ಬಾಲ್, ಚಕ್ಕುಲಿ ತಿನ್ನೋಣ ಬಾ, ವಿಕೆಟ್ ದ ಬಾಲ್, ಅಡುಗೆ ಸ್ಪರ್ಧೆ, ಬಲೂನ್ ಊದಿ ಒಡೆಯುವುದು, ಪಿಕ್ ಅಂಡ್ ಆಕ್ಟ್, ಸ್ಕಿಪ್ಪಿಂಗ್, ಬಕೆಟ್​ನಲ್ಲಿ ಬಾಲ್, ರಿಂಗ್​ನಲ್ಲಿ ಗಿಫ್ಟ್, ಇಡ್ಲಿ ತಿನ್ನೋ ಸ್ಪರ್ಧೆ, ರಾಗಿ ಅಕ್ಕಿ ಬೇರ್ಪಡಿಸುವುದು ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ಶನಿವಾರ (ಏ.23) ಹಾಗೂ ಭಾನುವಾರ (ಏ.24) ನೃಪತುಂಗ ರಸ್ತೆಯ ವೈಎಂಸಿಎ ಮೈದಾನದಲ್ಲಿ ನಡೆಯಲಿವೆ.
ಪ್ರಾಯೋಜಕತ್ವ:‘ಅಮೃತ ನೋನಿ’, ಡಿ.ಎಸ್.ಮ್ಯಾಕ್ಸ್, ಅಗರ್ವಾಲ್ ಐ ಆಸ್ಪತ್ರೆ, ಕಾವೇರಿ ಆಸ್ಪತ್ರೆಗಳು ಕ್ರೀಡಾಕೂಟಕ್ಕೆ ಪ್ರಾಯೋಜಕತ್ವ ವಹಿಸಿವೆ.
ಸರ್ಕಾರದ ಅನುದಾನದಿಂದ ನಿರ್ವಿುಸುವ ಕಟ್ಟಡಗಳು, ರಸ್ತೆಗಳು ಹಾಗೂ ಮೇಲ್ಸುತುವೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡಾಗ ನಾವು ಮಾಡುವ ಕೆಲಸಗಳು ಸಾರ್ಥಕವೆನಿಸಲಿವೆ. ಪ್ರತಿ ನಿತ್ಯ ಒತ್ತಡದಿಂದ ಕೆಲಸ ಮಾಡುತ್ತಿರುವವರು ಇಂತಹ ಕ್ರೀಡೆಗಳನ್ನು ಆಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ವಿಜಯವಾಣಿ ಹಾಗೂ ದಿಗ್ವಿಜಯ ಆಯೋಜಿಸಿರುವ ಈ ಕ್ರೀಡೋತ್ಸವಕ್ಕೆ ಪಾಲ್ಗೊಂಡಿರುವುದಕ್ಕೆ ಸಂತಸವಾಗಿದೆ.
|ಮಲ್ಲಿಕಾರ್ಜುನಕಾಂಗ್ರೆಸ್ ಮುಖಂಡ
ಪೆಟ್ರೋಲ್ ಟ್ಯಾಂಕ್​ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್​: ಪ್ರೇಮಿ ಮೇಲೆ 3 ಕೇಸ್​…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + seventeen =
Remember me
