ವಾಡಿಕೆಯಂತೆ ದೇಶವುಜನವರಿ 25 ಮತ್ತು 26ರಂದು ಎರಡು ಮಹತ್ವದ ವಿದ್ಯಮಾನಗಳಿಗೆ ಸಾಯಾಯಿತು. ಗಣರಾಜ್ಯೋತ್ಸವದ ಮುನ್ನಾ ದಿನ, ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಸಹಜವಾಗಿಯೇ ಜನರಲ್ಲಿ ಪುರಸತರ ಕುರಿತು ಕುತೂಹಲ ಇರುತ್ತದೆ. ಅದರಲ್ಲೂ ಈಚಿನ ಕೆಲ ವರ್ಷಗಳಿಂದ, ಸಮಾಜದ ತೆರೆಮರೆಯಲ್ಲಿರುವ ಸಾಧಕರನ್ನು ಈ ಪ್ರಶಸ್ತಿಗೆ ಹೆಚ್ಚು ಪ್ರಮಾಣದಲ್ಲಿ ಆಯ್ಕೆ ಮಾಡುತ್ತಿರುವುದರಿಂದ, ಜನರಲ್ಲಿ ಕುತೂಹಲವೂ ಜಾಸ್ತಿಯೇ ಇರುತ್ತದೆ. ಅಲ್ಲದೆ ತಮಗೆ ತಿಳಿದ ಸಾಧಕರ ಬಗ್ಗೆ ಜನರು ಸಹ ನಾಮನಿರ್ದೇಶನ ಮಾಡಬಹುದಾಗಿದ್ದು, ನಂತರದಲ್ಲಿ ವಿವಿಧ ಪ್ರಕ್ರಿಯೆಗಳ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಸಲ ಕರ್ನಾಟಕಕ್ಕೆ ಎಂಟು ಪದ್ಮ ಪ್ರಶಸ್ತಿಗಳು ಬಂದಿರುವುದು ಸಹಜವಾಗಿಯೇ ಖುಷಿಯ ಸಂಗತಿ. ಒಟ್ಟು 106 ಮಂದಿಗೆ ಪುರಸ್ಕಾರ ಪ್ರಕಟಿಸಲಾಗಿದ್ದು, ವಿರಳ ಸಾಧನೆಗೈದ, ಆದರೆ ಸಾರ್ವಜನಿಕವಾಗಿ ಅಷ್ಟು ಪರಿಚಿತರಲ್ಲದವರೂ ಎಂದಿನಂತೆ ಈ ಯಾದಿಯಲ್ಲಿದ್ದಾರೆ. ಈ ಮೂಲಕ “ನೇಪಥ್ಯದ ನಕ್ಷತ್ರಗಳನ್ನು’ ಗುರುತಿಸಿ ಗೌರವಿಸುವ ಪರಿಪಾಠ ಮುಂದುವರಿದಿದೆ.
ಸಮಾಜದಲ್ಲಿ ಆದರ್ಶ ವ್ಯಕ್ತಿಗಳ ಮಾದರಿ ಕಡಿಮೆಯಾಗುತ್ತಿದೆ ಎಂಬ ಭಾವನೆ ಇರುವಾಗ, ನಮ್ಮ ಸುತ್ತಮುತ್ತಲೇ ಇಂಥ ಮಾದರಿ ವ್ಯಕ್ತಿಗಳು ಇರುವುದು ಮತ್ತು ಅಂಥವರನ್ನು ಗುರುತಿಸಿ ಗೌರವಿಸುವುದು ಉತ್ತಮ ಕಾರ್ಯ. ಇದರಿಂದ ಇತರರು ಸಹ ಪ್ರೇರಣೆ ಹೊಂದಲು ಸಾಧ್ಯ. ಯಾವುದೇ ವ್ಯಕ್ತಿಯ ಸಾಧನೆ ಗುರುತಿಸಲು ಪ್ರಶಸ್ತಿಗಳೇ ಅಂತಿಮ ಮಾನದಂಡವಲ್ಲ ಎಂಬುದು ನಿಜವಾದರೂ, ಸಮಾಜದಲ್ಲಿ ಇಂತಹವರೂ ಇದ್ದಾರೆ ಎಂದು ಇತರರಿಗೆ ತಿಳಿಯಲು ಇದರಿಂದ ಆಸ್ಪದವಾಗುತ್ತದೆ. ಆ ಮೂಲಕ ಸಕಾರಾತ್ಮಕತೆಯ ಅಲೆ ಪಸರಿಸಲು ಸಹಾಯವಾಗುತ್ತದೆ.
ಇನ್ನು, ಈ ಸಲದ ಗಣರಾಜ್ಯೋತ್ಸವ ಪರೇಡ್​ ಕೂಡ ಅನೇಕ ಕಾರಣಗಳಿಗೆ ಗಮನ ಸೆಳೆಯುತ್ತದೆ. ಸಮಾಜ ಸೇವೆ, ಸೇನೆ& ಹೀಗೆ ಬೇರೆ ಬೇರೆ ರಂಗಗಳಲ್ಲಿ ಮಹಿಳೆಯರ ಸಾಧನೆಯನ್ನು ಬಿಂಬಿಸುವುದಕ್ಕೆ ಆದ್ಯತೆ ನೀಡಲಾಗಿತ್ತು. ಕರ್ನಾಟಕದ ಸ್ತಬ್ಧಚಿತ್ರದಲ್ಲಿ “ನಾರಿಶಕ್ತಿ’ ಪರಿಕಲ್ಪನೆ ಅಳವಡಿಸಿಕೊಂಡಿದ್ದು ವಿಶೇಷವಾಗಿತ್ತು. ಗಣತಂತ್ರ ದಿನದ ಆಚರಣೆಯಂಥ ಮಹತ್ವದ ಸನ್ನಿವೇಶದಲ್ಲಿ ಹೀಗೆ ಸ್ತ್ರೀಶಕ್ತಿಯ ಅನಾವರಣ ಹಲವು ಸಂದೇಶಗಳನ್ನು ರವಾನಿಸುತ್ತದೆ; ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ವರ್ಧಿಸುತ್ತದೆ. ಇದರ ಜತೆಗೆ, ಈ ಬಾರಿಯ ಪರೇಡ್​ನಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಆದ್ಯತೆ ನೀಡಲಾಗಿತ್ತು. ಈ ಮೂಲಕ ನಮ್ಮ ಸೇನಾಶಕ್ತಿಯ ಅರಿವು ಇತರ ದೇಶಗಳಿಗೆ ಆಗುವಂತಾಗುತ್ತದೆಯಲ್ಲದೆ, ಸೇನಾ ಸಾಮಗ್ರಿಗಳ ವಿಷಯದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಲ್ಲಿ ನಾವು ಎಷ್ಟರಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ ಎಂಬ ಪರಿಚಯ ದೇಶವಾಸಿಗಳಿಗೆ ಆಗುವಂತಾಗುತ್ತದೆ. ಸೇನಾ ಶಸ್ತ್ರಗಳ ವಿಷಯದಲ್ಲಿ ನಾವಿನ್ನೂ ವಿದೇಶಗಳ ಮೇಲೆ ಹೆಚ್ಚು ಅವಲಂಬನೆಯಾಗಿದ್ದು, ಇದರಿಂದ ದೇಶದ ಬೊಕ್ಕಸಕ್ಕೆ ಆರ್ಥಿಕ ಹೊರೆ ಮಾತ್ರವಲ್ಲದೆ, ಸಕಾಲಕ್ಕೆ ಅಗತ್ಯ ಸಾಮಗ್ರಿಗಳು ಸಿಗದೆ ತುರ್ತು ಸಂದರ್ಭಗಳಲ್ಲಿ ಜೀತಿ ಎದುರಿಸಬೇಕಾದ ಅಪಾಯವೂ ಇರುತ್ತದೆ. ವಿದೇಶಗಳ ಜತೆಗಿನ ಸಂಬಂಧ ಇತ್ಯಾದಿ ಕಾರಣಕ್ಕೆ ಸೇನಾ ಸಾಮಗ್ರಿ ಆಮದನ್ನು ಪೂರ್ತಿಯಾಗಿ ನಿಲ್ಲಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂಬುದು ಹೌದಾದರೂ, ಸಾಧ್ಯವಿದ್ದಷ್ಟು ಮಟ್ಟಿಗೆ ಸ್ವಂತ ಕಾಲಮೇಲೆ ನಿಲ್ಲುವುದು ಎಲ್ಲ ದೃಷ್ಟಿಯಿಂದಲೂ ಪ್ರಯೋಜನಕಾರಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nineteen =
Remember me
