ತಂತ್ರಜ್ಞಾನ ಲಭ್ಯತೆಯ ವ್ಯಾಪಿ ವಿಸ್ತರಿಸಿದಂತೆಲ್ಲ ಸಾರಿಗೆ/ಸಂಚಾರ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆಗಳಾಗಿವೆ. ಈ ಪೈಕಿ ಪ್ರಮುಖವಾದುದು ಆ್ಯಪ್​ ಆಧಾರಿತ ಸೇವೆ ಒದಗಿಸುವ ಟ್ಯಾಕ್ಸಿ ಕಂಪನಿಗಳು. ಬೆಂಗಳೂರಿನಂಥ ಮಹಾನಗರಗಳಲ್ಲಿ ಸಮೂಹಸಾರಿಗೆಯ ನಂತರ ಹೆಚ್ಚು ಬಳಕೆಯಾಗುತ್ತಿರುವುದು ಈ ಬಗೆಯ ಸೇವೆಗಳು. ಯಾವುದೇ ವ್ಯಾಪಾರ-ವ್ಯವಹಾರವನ್ನು ಲಾಭಾಂಶವನ್ನು ಗಮನದಲ್ಲಿ ಇರಿಸಿಕೊಂಡು ಆರಂಭಿಸಲಾಗಿರುತ್ತದೆ ಎಂಬುದು ಸರಿಯೇ. ಆದರೆ, ಆ ಲಾಭಗಳಿಕೆಗಾಗಿ ಗುಣಮಟ್ಟದ ಸೇವೆ ನೀಡಬೇಕೆ ಹೊರತು ವಾಮಮಾರ್ಗಗಳನ್ನು ಅವಲಂಬಿಸಿ, ಪ್ರಯಾಣಿಕರನ್ನು ವಂಚಿಸಬಾರದು.
ಆ್ಯಪ್​ ಆಧಾರಿತ ಸಾರಿಗೆ ಸೇವೆ ಒದಗಿಸುವ ಅಗ್ರಿಗೇಟರ್​ ಕಂಪನಿಗಳು ಸರ್ಕಾರ ನಿಗದಿಪಡಿಸಿರುವ ಟ್ಯಾಕ್ಸಿ ಮೀಟರ್​ ದರಕ್ಕಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದು, ವಾಷಿರ್ಕ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗಿಂತ ಅಗ್ರಿಗೇಟರ್​ ಕಂಪನಿಗಳೇ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ. ಬರೀ ಬುಕ್ಕಿಂಗ್​ ಸೇವೆ ಒದಗಿಸುವ ಕಂಪನಿಗಳಿಗೆ ಶೇಕಡ 30 ಮತ್ತು ಟ್ಯಾಕ್ಸಿ ಮಾಲೀಕರಿಗೆ ಶೇ.70 ಭಾಗ ಹೋಗುತ್ತಿದೆ. ಈ ಎಲ್ಲ ಅಪಸವ್ಯಗಳ ಕುರಿತಂತೆ ಸಾರಿಗೆ ಅಧಿಕಾರಿಗಳು ತಡವಾಗಿ ಎಚ್ಚೆತ್ತುಕೊಂಡಿದ್ದು, ಬುಧವಾರದಿಂದಲೇ ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಗ್ರಿಗೇಟರ್​ ಕಂಪನಿಗಳು ಮಾಡುವ ತಪ್ಪಿಗೆ ಟ್ಯಾಕ್ಸಿ ಮಾಲೀಕರ ಮೇಲೆ ಈಗ ಪ್ರಕರಣ ದಾಖಲಿಸಲಾಗುತ್ತಿದ್ದು, ಹೊಸ ಸಮಸ್ಯೆ ಸೃಷ್ಟಿಯಾಗಿದೆ.
ಬುಕಿಂಗ್​ಗೆ ವಿಪರೀತ ಬೇಡಿಕೆ ಸಂದರ್ಭದಲ್ಲಿ ಹೆಚ್ಚಿನ ದರ ವಿಧಿಸಿ ಸುಲಿಗೆ, ಒಂದೇ ಸ್ಥಳಗಳಿಗೆ ಬೇರೆಬೇರೆ ಪ್ರಯಾಣಿಕರಿಗೆ ಬೇರೆಬೇರೆ ದರ ವಿಧಿಸುವುದು, ಒಟಿಪಿ ವ್ಯವಸ್ಥೆ ಇಲ್ಲದ ಆ್ಯಪ್​ ಬಳಸಿ ಚಾಲಕರೇ ಗ್ರಾಹಕರ ಸುಲಿಗೆ ಮಾಡುವುದು ಹೀಗೆ ಹಲವು ಗಂಭೀರ ಆರೋಪಗಳು ಪ್ರಯಾಣಿಕರಿಂದ ಕೇಳಿಬಂದಿವೆ. ಅಗ್ರಿಗೇಟರ್​ ಕಂಪನಿಗಳು ಹಾಗೂ ಟ್ಯಾಕ್ಸಿ ಚಾಲಕರ ವಂಚನೆ ಬಗ್ಗೆ ಹೈಕೋರ್ಟ್​ಗೂ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಪ್ರಕರಣ ಹೈಕೋರ್ಟ್​ ಮೆಟ್ಟಿಲು ಏರಿದ ಬಳಿಕವಷ್ಟೇ, ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿಯಮ ಉಲ್ಲಂಘಿಸುವ, ಪ್ರಯಾಣಿಕರ ಹಿತವನ್ನು ಮರೆತು ವಂಚಿಸುವ ಕಂಪನಿಗಳ ಬಗ್ಗೆ ಆಗಾಗ ಪರಿಶೀಲನೆ ನಡೆಸಿದ್ದರೆ ಹಲವು ವರ್ಷಗಳಿಂದ ನಡೆಯುತ್ತಿರುವ ಈ ಮೋಸದಾಟ ತಡೆಯಬಹುದಿತ್ತು. ಇನ್ನಾದರೂ, ಈ ಪ್ರಕರಣಕ್ಕೆ ತಾಕಿರ್ಕ ಅಂತ್ಯ ದೊರೆತು, ಗ್ರಾಹಕರಿಗೆ ನ್ಯಾಯ ಸಿಗುವಂತಾಗಲಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 5 =
Remember me
