ಬೆಂಗಳೂರಿನಲ್ಲಿಜಿಮ್​ (ಜಾಗತಿಕ ಹೂಡಿಕೆದಾರರ ಸಮಾವೇಶ) ಈ ತಿಂಗಳ ಮೊದಲ ವಾರದಲ್ಲಿ ಮುಗಿಯಿತು. ಇದರ ಬೆನ್ನಲ್ಲೇ ಬಿಟಿಎಸ್​ (ಬೆಂಗಳೂರು ಟೆಕ್​ ಶೃಂಗ) ಸಮಾವೇಶವೂ ಸಾಕಷ್ಟು ಉತ್ಸಾಹದಿಂದಲೇ ಆಯೋಜನೆಗೊಂಡಿದೆ. ಸರ್ಕಾರದ ನಿರೀೆಯನ್ನೂ ಮೀರಿ ಹೂಡಿಕೆಯ ವಾಗ್ದಾನ ವ್ಯಕ್ತವಾಗುವ ಮೂಲಕ ಜಿಮ್​ ಯಶಸ್ಸಿನತ್ತ ದಾಪುಗಾಲು ಹಾಕಿದೆ ಎಂದೇ ಬಿಂಬಿಸಲಾಗಿದೆ. ಇದೇ ರೀತಿಯ ಪ್ರತಿಲವನ್ನು ಬಿಟಿಎಸ್​ನಿಂದಲೂ ಸರ್ಕಾರ ಸಹಜವಾಗಿಯೇ ನಿರೀಸುತ್ತಿದೆ. ಬಂಡವಾಳ ಹೂಡಿಕೆ ಸೆಳೆಯುವಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿ ಇದ್ದರೂ ಇಂತಹ ಸಮಾವೇಶಗಳಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳು ಅನುಷ್ಠಾನಕ್ಕೆ ಬರುವಲ್ಲಿ ತೀವ್ರ ಹಿನ್ನಡೆ ಇರುವುದನ್ನು ಸರ್ಕಾರದ ಅಂಕಿ&ಅಂಶಗಳೇ ಬಹಿರಂಗಪಡಿಸುತ್ತವೆ. 2010ರಲ್ಲಿ ಜರುಗಿದ ಪ್ರಥಮ ಜಿಮ್​ನಲ್ಲಿ 3.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 7.27 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ವಿಶ್ವಾಸ ಹೊಂದಲಾಗಿತ್ತು. ಆದರೆ, ಈ ಪೈಕಿ 32,957 ಕೋಟಿ ರೂಪಾಯಿ ಮೊತ್ತದ ಯೋಜನೆಗಳು ಅನುಷ್ಠಾನಗೊಂಡು, 93,102 ಉದ್ಯೋಗಗಳು ಮಾತ್ರ ಸೃಷ್ಟಿಯಾದವು. 2012ರ ಜಿಮ್​ನಲ್ಲಿ 2.81 ಲಕ್ಷ ಕೋಟಿ ಹೂಡಿಕೆಯ ಒಪ್ಪಂದವಾಗಿ, 14 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಭರವಸೆ ವ್ಯಕ್ತವಾಗಿತ್ತು. ಆದರೆ, ಈ ಪೈಕಿ 12,468 ಕೋಟಿ ರೂ.ಗಳ ಯೋಜನೆಗಳು ಮಾತ್ರ ಜಾರಿಗೊಂಡು, ಉದ್ಯೋಗ ಸೃಷ್ಟಿಯಾಗಿದ್ದು ಕೇವಲ 21,794. ಇವೆಲ್ಲವೂ ಸರ್ಕಾರವೇ ನೀಡಿದ ಅಂಕಿ&ಅಂಶಗಳು ಎಂಬುದು ಗಮನಾರ್ಹವಾಗಿದೆ.
ದೇಶದ ಐಟಿ ರಾಜಧಾನಿ ಎಂದೇ ಪ್ರಸಿದ್ಧಿ ಗಳಿಸಿರುವ ಬೆಂಗಳೂರು ನವೋದ್ಯಮಗಳ (ಸ್ಟಾರ್ಟಪ್​) ನಗರಿ ಎಂದೂ ಬಿಂಬಿತವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಬಳಿ ಸ್ಟಾರ್ಟಪ್​ ಪಾರ್ಕ್​ ಹಾಗೂ ವಿವಿಧೆಡೆ 6 ಉಪನಗರಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಟಿಎಸ್​ ಸಮಾವೇಶದ ಸಂದರ್ಭದಲ್ಲಿ ಘೋಷಿಸಿದ್ದಾರೆ. ಇದರ ಅನುಷ್ಠಾನಕ್ಕೆ 6 ತಿಂಗಳ ಕಾಲಮಿತಿಯನ್ನೂ ನಿಗದಿಪಡಿಸಿದ್ದಾರೆ. ಆದರೆ, ಇನ್ನಾರು ತಿಂಗಳ ಅವಧಿಯಲ್ಲಿಯೇ ರಾಜ್ಯ ವಿಧಾನಸಭೆ ಚುನಾವಣೆ ಜರುಗಬೇಕಾಗಿದ್ದು, ಆಡಳಿತಾರೂಢ ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಈ ಸಮರಕ್ಕೆ ಈಗಾಗಲೇ ತೀವ್ರ ಸಿದ್ಧತೆಯಲ್ಲಿ ತೊಡಗಿಕೊಂಡಿರುವುದರಿಂದ ಸ್ಟಾರ್ಟಪ್​ ಪಾರ್ಕ್​, ಉಪನಗರ ನಿರ್ಮಾಣದ ಜವಾಬ್ದಾರಿಯನ್ನು ನೂತನ ಸರ್ಕಾರವೇ ಹೊತ್ತುಕೊಳ್ಳಬೇಕಾದ ಸಾಧ್ಯತೆಯೇ ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಬಾರಿಯ ಜಿಮ್​ನಲ್ಲಿ ಒಟ್ಟು 9,81,784 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು, 6 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನಿರೀಸಲಾಗಿದೆ. ಈ ಪೈಕಿ ಶೇ. 90ಕ್ಕೂ ಹೆಚ್ಚು ಯೋಜನೆಗಳು ಬೆಂಗಳೂರಿನ ಆಚೆ ಅನುಷ್ಠಾನಗೊಳ್ಳುತ್ತಿವೆ ಎಂದು ಸರ್ಕಾರ ಹೇಳಿರುವುದು ಉತ್ತಮ ಸಂಕೇತವೇ ಆಗಿದೆ. ಐಟಿ, ಬಿಟಿ, ಯೂನಿಕಾರ್ನ್​ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಬೆಂಗಳೂರಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದ್ದು, ಇಲ್ಲಿ ಸ್ಥಾಪನೆಯಾಗುವ ಉದ್ದಿಮೆಗಳಿಗೆ ಸ್ಥಳ ಹಾಗೂ ಮೂಲಸೌಕರ್ಯ ಒದಗಿಸುವುದು ಸವಾಲಿನ ಸಂಗತಿಯೇ ಆಗಿದೆ. ಈ ಹಿನ್ನೆಲೆಯಲ್ಲಿಯೇ ಸರ್ಕಾರವು ಬೆಂಗಳೂರಿನ ಆಚೆಗೆ ಕೈಗಾರಿಕೆಗಳನ್ನು ವಿಸ್ತರಿಸುವುದಕ್ಕೆ ಜಿಮ್​ನಲ್ಲಿ ಒತ್ತು ನೀಡಿದ್ದು, 2 ಮತ್ತು 3ನೇ ಹಂತದ ನಗರಗಳಲ್ಲೂ ಹೂಡಿಕೆ ಮಾಡಲು ಉದ್ಯಮಿಗಳು ಆಸಕ್ತಿ ತೋರಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಆದರೆ, ಬಿಯಾಂಡ್​ ಬೆಂಗಳೂರು ಉದ್ದೇಶ ಕಾರ್ಯಾನುಷ್ಠಾನ ಇದುವರೆಗೆ ನಿರೀತ ಪ್ರಗತಿ ಕಂಡಿಲ್ಲ.
ಜಿಮ್​ನಲ್ಲಿ ಮಾಡಿಕೊಳ್ಳಲಾದ ಹೂಡಿಕೆ ಒಪ್ಪಂದಗಳ ಪೈಕಿ ಒಂದು ಲ ಕೋಟಿ ರೂ. ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಭೂಮಿ, ವಿದ್ಯುತ್​, ಕಚ್ಚಾ ವಸ್ತು, ಸಬ್ಸಿಡಿ, ತೆರಿಗೆ ವಿನಾಯಿತಿ ಹಾಗೂ ಇತರೆ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸಿದರೆ ಮಾತ್ರ ಒಪ್ಪಂದ ಮಾಡಿಕೊಳ್ಳಲಾದ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾನುಷ್ಠಾನಕ್ಕೆ ಬರಲು ಸಾಧ್ಯವಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 3 =
Remember me
